ಆಗ್ರಾ:ಕೆಲ ದಿನಗಳ ಹಿಂದೆ ಹಿಂದೂ ದೇವಸ್ಥಾನವೊಂದರಲ್ಲಿ ಮುಸ್ಲಿಂ ಯುವಕರು ನಮಾಜ್​ ಮಾಡಿ ಪ್ರಕರಣ ದಾಖಲಾದ ಬೆನ್ನಲ್ಲೇ ಇದೀಗ ಮತ್ತೊಂದು ಅದೇ ರೀತಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಪ್ರಕರಣ ದಾಖಲಾಗಿದೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಜ್​ಮಹಲ್​ ಎದುರು ಹಿಂದೂ ಯುವಕರು ಕೇಸರಿ ಧ್ವಜ ಹಾರಿಸಿ, ಜೈ ಶ್ರೀ ರಾಮ್​ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ:‘ಕೆಜಿಎಫ್​ ಚಾಪ್ಟರ್ 2’ ಮಲಯಾಳಂ ಅವತರಣಿಕೆಯ ಬಿಡುಗಡೆ ಜವಾಬ್ದಾರಿ ಹೊತ್ತ ಸ್ಟಾರ್ ನಟ
ಸೋಮವಾರದಂದು ಕೆಲ ಯುವಕರು ಕೇಸರಿ ಧ್ವಜವನ್ನು ತಮ್ಮ ಜೇಬಿನಲ್ಲಿಟ್ಟುಕೊಂಡು ತಾಜ್​ಮಹಲ್​ ಆವರಣಕ್ಕೆ ತಲುಪಿದ್ದಾರೆ. ತಾಜ್​ಮಹಲ್​ ಎದುರಿನ ಬೆಂಚಿನ ಮೇಲೆ ಕುಳಿತು ನಂತರ ಜೇಬಿನಿಂದ ಕೇಸರಿ ಧ್ವಜ ತೆಗೆದು ಗಾಳಿಯಲ್ಲಿ ಹಾರಾಡಿಸಿದ್ದಾರೆ. ಜೈ ಶ್ರೀ ರಾಮ್​ ಘೋಷಣೆಯನ್ನೂ ಕೂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:PHOTOS| ಹೆಣ್ಣಿನ ಜನನಾಂಗ ಮಾದರಿ ಶಿಲ್ಪಕಲೆ ವಿರುದ್ಧ ತೀವ್ರ ಆಕ್ರೋಶ: ಕಲಾವಿದೆ ಕೊಟ್ಟ​ ಉತ್ತರ ಹೀಗಿದೆ!
ಹಿಂದೂ ಯುವಕರು ಈ ರೀತಿ ಮಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಿಐಎಸ್​ಎಫ್​ ತಂಡ ತಾಣದ ರಕ್ಷಣೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದೆ. ಧ್ವಜ ಹಾರಿಸಿದ್ದ ಯುಕವರನ್ನು ಸೆರೆ ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ. ಯುವಕರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ಉನ್ಮಾದವನ್ನು ಪ್ರಚೋದಿಸಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಿಂದೂ ಜಿಲ್ಲಾ ವಾಹಿನಿ ಅಧ್ಯಕ್ಷ ಗೌರವ್ ಠಾಕೂರ್, ಸೋನು ಬಾಗೇಲ್, ವಿಶೇಶ್ ಕುಮಾರ್ ಮತ್ತು ರಿಷಿ ಲವಾನಿಯಾ ವಿರುದ್ಧ ದೂರು ದಾಖಲಾಗಿದೆ ಎನ್ನಲಾಗಿದೆ. ಗೌರವ್ ಠಾಕೂರ್ ಅವರು ಈ ಹಿಂದೆ ತಾಜ್‌ಮಹಲ್‌ನಲ್ಲಿ ಶಿವ ಚಾಲೀಸಾ ಪಠಿಸುವ ವಿಡಿಯೋ ಮಾಡಿದ್ದರು. (ಏಜೆನ್ಸೀಸ್​)
ತಾಜ್​ಮಹಲ್​ ಎದುರು ಕೇಸರಿ ಧ್ವಜ ಹಾರಿಸಿ, ಜೈ ಶ್ರೀರಾಮ್​ ಘೋಷಣೆ ಕೂಗಿದ ಹಿಂದೂ ಯುವಕರು!#TajMahal#Hindu#Muslim#Rama#SaffronFlagpic.twitter.com/8A8CSLqG6g
— Vijayavani (@VVani4U)January 5, 2021

ತಂಗಿಗಾಗಿ ಅಕ್ಕನನ್ನೇ ನಗ್ನಗೊಳಿಸಿದ! ಸಹಾಯಕ್ಕೆ ಕೇಳಿ ಬರಲಿ ಎಂದು ಕಾದಿದ್ದವನಿಗೆ ಕಾದಿತ್ತು ದೊಡ್ಡ ಶಾಕ್​!

ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
