ನವದೆಹಲಿ:ಕೊರೊನಾ ಭಯಕ್ಕೆ ಪ್ರಪಂಚವೇ ತತ್ತರಿಸಿದೆ. ಹೀಗಿದ್ದಾಗ ಗೋ ಮೂತ್ರ ಮತ್ತು ಸಗಣಿ ಸೇವನೆ ಮಾಡಿದರೆ ಕೊರೊನಾ ಕಾಟದಿಂದ ತಪ್ಪಿಕೊಳ್ಳಬಹುದು ಎಂದು ಹಿಂದೂ ಮಹಾಸಭಾ ವೇದಿಕೆಯ ಮುಖಂಡರೊಬ್ಬರು ಹೇಳಿದ್ದಾರೆ.
“ಗೋಮೂತ್ರ ಸೇವಿಸುವುದರಿಂದ ಮತ್ತು ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಜನರು ಕೊರೊನಾ ವೈರಸ್​ ತಮ್ಮ ದೇಹದೊಳಗೆ ಸೇರದಂತೆ ನೋಡಿಕೊಳ್ಳಬಹುದು. ಗೋವಿನ ಮೂತ್ರ ಅನೇಕ ಖಾಯಿಲೆಗಳಿಗೆ ಔಷಧವಿದ್ದಂತೆ.” ಎಂದು ಹಿಂದೂ ಮಹಾಸಭಾ ವೇದಿಕೆಯ ಮುಖಂಡ ಸ್ವಾಮಿ ಚಕ್ರಪಾಣಿ ಮಹಾರಾಜ್​ ತಿಳಿಸಿದ್ದಾರೆ.
ಗೋವಿನ ಬಗ್ಗೆ ಮಾತನಾಡಿರುವ ಅವರು, ಗೋಮೂತ್ರ ಔಷಧವೆಂದ ಮಾತ್ರಕ್ಕೆ ಯಾವ್ಯಾವುದೋ ಗೋವಿನ ಮೂತ್ರ ಸೇವಿಸಿದರೆ ಉಪಯೋಗವಿಲ್ಲ. ಬೀದಿಗಳಲ್ಲಿ ಬಿಡಾಡಿ ದನಗಳಾಗಿ ತಿರುಗುವ ದನಗಳ ಗೋಮೂತ್ರದಿಂದ ಉಪಯೋಗವಿಲ್ಲ ಎಂದು ನುಡಿದಿದ್ದಾರೆ. ಸೂಕ್ತ ರೀತಿಯಲ್ಲಿ ಸಾಕಿದ ಗೋವಿನ ಮೂತ್ರದಿಂದ ಕ್ಯಾನ್ಸರ್​ನಂತಹ ಕಾಯಿಲೆಯನ್ನು ಸಹ ಗುಣಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್​ ಚೀನಾದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಇದುವರೆಗು 425 ಜನರು ಈ ವೈರಸ್​ನಿಂದಾಗಿ ಮೃತ ಪಟ್ಟಿರುವುದಾಗಿ ವರದಿಯಾಗಿದೆ. 19,550ಕ್ಕೂ ಹೆಚ್ಚು ಜನರಲ್ಲಿ ವೈರಸ್​ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 18 =
Remember me
