ಗಾಂಧಿನಗರ:ಮುಸ್ಲಿಂ ಯುವತಿಯೋರ್ವಳನ್ನು ಮದುವೆಯಾಗಲು ಬಯಸಿದ ಹಿಂದೂ ಪುರುಷನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಯುವತಿಯ ಅಮ್ಮ ಮತ್ತು ಆಕೆಯನ್ನು ಮದುವೆಯಾಗಲಿದ್ದ ಯುವಕನೇ ಈ ಹತ್ಯೆ ಮಾಡಿರುವುದಾಗಿ ಹೇಳಲಾಗಿದೆ.
ಇದನ್ನೂ ಓದಿ:ಫುಟ್‌ಬಾಲ್ ಆಟಗಾರ್ತಿಯರ ತಾಯ್ತನ ಹಕ್ಕು ರಕ್ಷಣೆಗೆ ಹೊಸ ನಿಯಮ
ಗುಜರಾತ್​ನ ಭರೂಚ್​ನ ಮಾಡೆಲ್​ ಟೌನ್​ ನಿವಾಸಿ ನೀರಜ್​ ಗುಪ್ತಾ ತನ್ನ ಸಹೋದ್ಯೋಗಿ ಫೈಜಲ್​ನನ್ನು ಪ್ರೀತಿಸಲಾರಂಭಿಸಿದ್ದ. 46 ವರ್ಷ ವಯಸ್ಸಾಗಿದ್ದ ಆತ ತನ್ನ ಪ್ರೀತಿಯ ಬಗ್ಗೆ ಪತ್ನಿಗೂ ತಿಳಿಸಿದ್ದ. ಫೈಜಲ್​ ಮತ್ತು ನೀರಜ್​ ಮಧ್ಯೆ ದೈಹಿಕ ಸಂಬಂಧವೂ ಇತ್ತು ಎಂದಿದ್ದಾರೆ ಆತನ ಪತ್ನಿ.
ಆದರೆ ಕಳೆದ ಕೆಲ ದಿನಗಳ ಹಿಂದೆ ನೀರಜ್​ ಕಾಣೆಯಾಗಿದ್ದಾನೆ. ಈ ವಿಚಾರವಾಗಿ ಪೊಲೀಸ್​ ದೂರು ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನೀರಜ್​ನ ಫೋನ್​ ಕಾಲ್​ ರೆಕಾರ್ಡಿಂಗ್​ನಿಂದಲೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ನೀರಜ್​ ಕಾಣೆಯಾಗಿರುವುದಕ್ಕೆ ಫೈಜಲ್​ ಕಾರಣವಿರಬಹುದು ಎನ್ನುವ ಅನುಮಾನ ಬಂದ ಆತನ ಪತ್ನಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಅದರಂತೆ ಫೈಜಲ್​ಳ ವಿಚಾರಣೆ ನಡೆಸಲಾಗಿದೆ.
ಇದನ್ನೂ ಓದಿ:ಬಿಹಾರದ ನಿತೀಶ್​ ಸರ್ಕಾರದಲ್ಲಿ ಮೊದಲ ವಿಕೆಟ್​ ಪತನ; ಎನ್​ಡಿಎಗೆ ಬಂತು ಸಂಕಷ್ಟ
ಫೈಜಲ್​ಳ ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ. ಫೈಜಲ್​ ನೀರಜ್​ನನ್ನು ಪ್ರೀತಿಸುತ್ತಿದ್ದಳು. ಆದರೆ ಇತ್ತ ಆಕೆಯ ಕುಟುಂಬ ಅವಳಿಗೆ ಜುಹೇಬ್​ ಹೆಸರಿನ ಯುವಕನೊಂದಿಗೆ ಮದುವೆ ನಿಶ್ಚಯಿಸಿದೆ. ಆ ಹಿನ್ನೆಲೆಯಲ್ಲಿ ಆಕೆಯ ಮನೆಗೆ ಬಂದ ನೀರಜ್​, ಅವಳಿಗೆ ಮದುವೆಯಾಗುವುದಿಲ್ಲವೆಂದು ಹೇಳು ಎಂದು ಕೇಳಿದ್ದಾನೆ. ಆ ಸಮಯದಲ್ಲಿ ಫೈಜಲ್​ಳ ತಾಯಿ ಮತ್ತು ಜುಹೇಬ್​ ನೀರಜ್​ ಮೇಲೆ ಹಲ್ಲೆ ಮಾಡಿದ್ದಾರೆ. ಆತನ ಪ್ರಾಣ ಹೋಗುವಷ್ಟು ಹೊಡೆದು, ಸೂಟ್​ಕೇಸ್​ ಒಂದರಲ್ಲಿ ತುಂಬಿಸಿದ್ದಾರೆ. ಅದಾದ ನಂತರ ಅಲ್ಲಿಂದ ಗುಜರಾತ್​ಗೆ ತೆರಳಿದ್ದಾರೆ.
ಈ ಎಲ್ಲ ವಿಚಾರ ತಿಳಿದ ನಂತರ ಇದೀಗ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್​)
ನೀವು ಆರ್​ಸಿಬಿ ಫ್ಯಾನ್​ ಆಗಿದ್ದೇ ಹೌದಾದರೆ ಇವರ್ಯಾರು ಎಂದು ಗುರುತಿಸಿ; ಅಭಿಮಾನಿಗಳಿಗೆ ಆರ್​ಸಿಬಿ ಸವಾಲ್​

ಬಿಹಾರದ ಶಾಸಕರಿಗೆ ರಾಷ್ಟ್ರಗೀತೆಯೇ ಬರೋದಿಲ್ಲ; ವಿಡಿಯೋ ಮೂಲಕ ಮರ್ಯಾದೆ ಕಳೆದುಕೊಂಡ ಶಾಸಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 18 =
Remember me
