ರಾಂಚಿ:ವಿವಾಹಿತ ಮಹಿಳೆಯನ್ನು ಬೇರೆ ಸಮುದಾಯದ ಯುವಕನೊಬ್ಬ ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದು, ಮದುವೆಗೆ ಮಹಿಳೆ ಒಪ್ಪದಿದ್ದಾಗ ಹುಚ್ಚು ಪ್ರೇಮಿ ಆಕೆಯ 10 ವರ್ಷದ ಮಗನನ್ನೇ ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ರಾತ್ರೋ ರಾತ್ರಿ ಆಸ್ಪತ್ರೆಗೆ ದಾಖಲು
ಘಟನೆಯು ಜಾರ್ಖಂಡ್‌ನ ಲೋಹರ್ದಗಾ ಜಿಲ್ಲೆಯಲ್ಲಿ ಲೋಹರ್ಡಗಾ ಜಿಲ್ಲೆಯ ಬಗ್ಡು ಪ್ರದೇಶಕ್ಕೆ ಸಂಬಂಧಿಸಿದ್ದು, ಇಲ್ಲಿ ನೆಲೆಸಿರುವ ಶಾರುಖ್ ಮಿರ್ ಎಂಬಾತ ಕಳೆದ 1-2 ವರ್ಷಗಳಿಂದ ಬುಡಕಟ್ಟು ಮಹಿಳೆಯೊಂದಿಗೆ ಪ್ರೇಮ ಸಂಬಂಧವನ್ನು ಹೊಂದಿದ್ದ. ಈ ವಿಷಯ ತಿಳಿದ ಗ್ರಾಮಸ್ಥರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇದಾದ ಬಳಿಕವೂ ಶಾರುಖ್ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಮುಂದುವರಿಸಿದ್ದಾನೆ.ಅಲ್ಲದೇ, ಮದುವೆಯಾಗುವಂತೆ ಶಾರುಖ್ ಮಹಿಳೆಯ ಮೇಲೆ ಒತ್ತಡ ಹೇರುತ್ತಿದ್ದು, ಆತನನ್ನು ಮದುವೆಯಾಗಲು ಮಹಿಳೆ ಪದೇ ಪದೇ ನಿರಾಕರಿಸುತ್ತಿದ್ದಳು. ಇದರಿಂದ ಕುಪಿತಗೊಂಡ ಶಾರುಖ್ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಪಾಠ ಕಲಿಸಲು ಸಂಚು ರೂಪಿಸಿದ್ದು ಮಹಿಳೆಯ 10 ವರ್ಷದ ಮಗನನ್ನು ಚಾಕಲೇಟ್ ತಿನ್ನಿಸುವ ಹೆಸರಿನಲ್ಲಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ.
ಇದನ್ನೂ ಓದಿ:ಏಕಾಏಕಿ ಬ್ಯಾಲೆನ್ಸ್ ತಪ್ಪಿ 8ನೇ ಮಹಡಿಯಿಂದ ಬಿದ್ದ ತಂದೆ, ಮಗಳ ದಾರುಣ ಸಾವು..
ಈ ವೇಳೆ ಮಗುವನ್ನು ಕತ್ತು ಹಿಸುಕಿ ನಂತರ ಬಾವಿಗೆ ಎಸೆದಿದ್ದು, ಇತ್ತ ಮಗು ನಾಪತ್ತೆಯಾದ ಬಳಿಕ ಮನೆಯವರು ಕಂಗಾಲಾಗಿದ್ದರು. ಬಳಿಕ ಮಗುವನ್ನು ಹುಡುಕಿದಾಗ, ಗ್ರಾಮದ ಜನರು ಶಾರುಖ್ ಜತೆಗೆ ಮಗುವನ್ನು ನೋಡಿದ್ದಾಗಿ ತಿಳಿಸಿದ್ದಾರೆ. ಅನುಮಾನಗೊಂಡ ಸಂಬಂಧಿಕರು ಮಗುವನ್ನು ಹುಡುಕಿದಾಗ ಗ್ರಾಮದ ಬಾವಿಯಲ್ಲಿ ಶವ ಪತ್ತೆಯಾಗಿದೆ.ಕೂಡಲೇ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮಗುವಿನ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ವಿಚಾರ ಎರಡು ಸಮುದಾಯಗಳ ನಡುವೆ ಆಗಿದ್ದು, ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದೇ ಸಮಯದಲ್ಲಿ, ಆರೋಪಿ ಶಾರುಖ್‌ಗೆ ಮರಣದಂಡನೆ ವಿಧಿಸಬೇಕೆಂದು ಕುಟುಂಬ ಸದಸ್ಯರು ಒತ್ತಾಯಿಸುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 15 =
Remember me
