ನವದೆಹಲಿ:ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯುತ್ತಿದ್ದ ಸಂದರ್ಭದಲ್ಲೇ ಪಶ್ಚಿಮ ಬಂಗಾಳದಲ್ಲಿ ಶ್ರೀರಾಮಪೂಜೆ ಮಾಡುತ್ತಿದ್ದ ಹಿಂದುಗಳ ಮೇಲೆ ಮುಸ್ಲಿಮರು ದೌರ್ಜನ್ಯ ಎಸಗಿದ್ದುದರ ಕುರಿತಂತೆ ಹೆಚ್ಚಿನ ಮಾಹಿತಿ ಹೊರಬರತೊಡಗಿದೆ.
ಅಂದು ಪಶ್ಚಿಮ ಬಂಗಾಳದಲ್ಲಿ ಒಂದು ದಿನದ ಲಾಕ್‌ಡೌನ್ ಘೋಷಿಸಲಾಗಿತ್ತು. ಶ್ರೀರಾಮಪೂಜೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಆದರೂ ಕೆಲವು ಪ್ರದೇಶಗಳಲ್ಲಿ ಹಿಂದುಗಳು ಸಣ್ಣ ಪ್ರಮಾಣದಲ್ಲಿ ಶ್ರೀರಾಮಪೂಜೆ ಏರ್ಪಡಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ ಕೆಲವರನ್ನು ಎಳೆದೊಯ್ದಿದ್ದರು. ಪೂಜಾ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು. ಹೀಗೆ ಮಾಡಿದ್ದು ಪೊಲೀಸರು ಮಾತ್ರವಲ್ಲ, ಅವರ ಜತೆ ಮುಸ್ಲಿಮರೂ ಸೇರಿದ್ದರು ಎಂಬ ಅಂಶ ಈಗ ಬಯಲಾಗಿದೆ.ಇದನ್ನೂ ಓದಿಮುಂದಿನ ಪೀಳಿಗೆಗೆ ಶ್ರೀರಾಮಮಂದಿರ ಸ್ಫೂರ್ತಿ: ಪ್ರಧಾನಿ ಮೋದಿ
ಅಂದು ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಇಳಿದಿದ್ದ ಮುಸ್ಲಿಮರು ಶ್ರೀರಾಮಮಂದಿರ ನಿರ್ಮಾಣ ಶಿಲಾನ್ಯಾಸದ ಐತಿಹಾಸಿಕ ಕ್ಷಣವನ್ನು ಆಚರಿಸಲು ಹಿಂದುಗಳಿಗೆ ಅಡ್ಡಿ ಮಾಡುತ್ತಿದ್ದರು. ಪೂಜಾ ಸ್ಥಳಗಳಿಗೆ ದಾಳಿ ಮಾಡುತ್ತಿದ್ದರು. ಪೊಲೀಸರು ಇವರನ್ನು ನಿಯಂತ್ರಿಸುವ ಗೋಜಿಗೇ ಹೋಗಲಿಲ್ಲ. ಕೋಲ್ಕತಾದ ರಜಾಬಜಾರ್ ಎಂಬ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಈ ದೃಶ್ಯಗಳು ಕಂಡುಬಂದವು. ಅಲ್ಲಿನ ಅಂಗಡಿಗಳ ಮುಂದೆ ಹಾಕಲಾಗಿದ್ದ ಕೇಸರಿ (ಭಗವಾ) ಧ್ವಜಗಳನ್ನು ನೋಡಿಯೇ ಅವರು ಕೆರಳಿ ಕೆಂಡವಾಗಿದ್ದರು. ಆ ಧ್ವಜಗಳನ್ನು ಅವರು ಕಿತ್ತೆಸೆಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹಿಂದುಗಳ ಜತೆ ವಾದಕ್ಕಿಳಿದ ಮುಸ್ಲಿಮರು, ‘‘ಈ ಏರಿಯಾ ಮಾತ್ರವಲ್ಲ, ಇಡೀ ದೇಶವೇ ನಮ್ಮದು. ಎಲ್ಲಾ ಕೇಸರಿ ಧ್ವಜಗಳನ್ನೂ ಸುಟ್ಟು ಹಾಕುತ್ತೇವೆ’’ ಎನ್ನುತ್ತಾರೆ. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ಇನ್ನಷ್ಟು ಮುಸ್ಲಿಮರು ಬರುತ್ತಾರೆ. ಜಗಳ ಇನ್ನಷ್ಟು ತಾರಕಕ್ಕೆ ಏರುತ್ತದೆ. ಇವರ‌್ಯಾರಿಗೂ ಪೊಲೀಸರ ಭಯವೇ ಇರುವುದಿಲ್ಲ. ‘ಉತಾರೋ ಉತಾರೋ ಸಬ್ ಕೋ’ (ಧ್ವಜಗಳನ್ನೆಲ್ಲ ಕೆಳಗಿಳಿಸಿ) ಎಂದು ಕೂಗುತ್ತಾರೆ. ಅವರಲ್ಲೊಬ್ಬ ‘ಘುಸ್ ಕೆ ಮಾರೋ ಸಾಲೋ ಕೊ’ (ನುಗ್ಗಿ ಹೊಡೀರಿ) ಎಂದು ಧಮಕಿ ಹಾಕುತ್ತಾನೆ. ಇದೆಲ್ಲವೂ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ದೃಶ್ಯಗಳು ವೈರಲ್ ಆಗಿವೆ.
Muslim Mob creating terror on streets of Raza Bazaar, Kolkata, ahead of Ram Mandir Bhumi Pujan in Ayodhya. Some even chanting "ghar me dhuk ke maaro inko(hindus ko)". This is the situation of WB, where chanting Jai Shri Ram is a Crime, but terrorising hindus is not.#RamMandirpic.twitter.com/dKfJKJauNY
— Sanskari Ladka (@sanskari1ladka)August 5, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
