ಚೆನ್ನೈ:ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್​​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಹಿಂದು ಮುಖಂಡನನ್ನು ತಮಿಳುನಾಡು ಪೊಲೀಸರು ಇಂದು ಬಂಧಿಸಿದ್ದಾರೆ.
ಡಿಎಂಕೆ ಜಿಲ್ಲಾ ಮುಖ್ಯಸ್ಥ ಎಸಿ ಮಣಿ ಅವರು ಅರಾನಿ ಪೊಲೀಸ್​ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಹಿಂದು ಮುಖಂಡ ಮಹೇಶ್​ ಎಂಬುವರನ್ನು ಬಂಧಿಸಲಾಗಿದೆ. ಸೆ. 22ರಂದು ಹಮ್ಮಿಕೊಳ್ಳಲಾಗಿದ್ದ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್​ ವಿರುದ್ಧ ಮಹೇಶ್​ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾರೆ ಎಂದು ಆರೋಪವಿದೆ.
ಇಂದು ಬೆಳಗ್ಗೆ ಮಹೇಶ್​ ಅವರ ನಿವಾಸದಿಂದ ಅವರನ್ನು ಬಂಧಿಸಿರುವ ಅರಾನಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರುವ ಸಚಿವ ಉದಯನಿಧಿ ಸ್ಟಾಲಿನ್ ಕೂಡಲೇ ಕ್ಷಮೆಯಾಚಿಸಬೇಕೆಂದು ಕೋರಿದೆ ಹೊರತು ಅವರ ವಿರುದ್ಧ ಯಾವುದೇ ಕೆಟ್ಟ ಪದ ಬಳಸಿಲ್ಲ ಎನ್ನುವ ಮೂಲಕ ಮಹೇಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನ ಸಂಸದರೆಲ್ಲರು ಒಟ್ಟಾಗಿದ್ದಾರೆ ನಮ್ಮಲ್ಲಿ 28 ಸಂಸದರಿದ್ರೂ ಮೂರು ಭಾಗವಾಗಿದ್ದೇವೆ: ಎಚ್​ಡಿಡಿ ಬೇಸರ
ವೇದಿಕೆಯಲ್ಲಿ ನನ್ನ ಭಾಷಣದ ಸಮಯದಲ್ಲಿ, ಸನಾತನ ಧರ್ಮದ ವಿರುದ್ಧದ ಹೇಳಿಕೆಗಳಿಗೆ ಉದಯನಿಧಿ ಕ್ಷಮೆಯಾಚಿಸುವ ಅಗತ್ಯವನ್ನು ನಾನು ಒತ್ತಿಹೇಳಿದೆ. ಉದಯನಿಧಿ ಅವರು ತಮ್ಮ ಹೇಳಿಕೆಗಳಲ್ಲಿ ‘ನಿರ್ಮೂಲನೆ’ ಪದವನ್ನು ಬಳಸಿರುವುದರಿಂದ ಸೆಕ್ಷನ್ 302ರ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ನಾನು ಒತ್ತಾಯಿಸಿದೆ ಎಂದು ಮಹೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆರೋಪಿ ಮಹೇಶ್ ವಿರುದ್ಧ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಪ್ರಚೋದನಕಾರಿ ಭಾಷಣ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ.(ಏಜೆನ್ಸೀಸ್​)
ಪ್ರಿಯಾಂಕಾ ಈ ಕಾರಣಕ್ಕಾಗಿ ಪರಿಣೀತಿ ಮದುವೆಗೆ ಬರಲಿಲ್ಲ; ಮಗಳು, ಅಳಿಯ ಹಾಜರಾಗದಿರುವ ಬಗ್ಗೆ ಉತ್ತರಿಸಿದ ಮಧು ಚೋಪ್ರಾ

ತಮಿಳುನಾಡಿನ ಸಂಸದರೆಲ್ಲರು ಒಟ್ಟಾಗಿದ್ದಾರೆ ನಮ್ಮಲ್ಲಿ 28 ಸಂಸದರಿದ್ರೂ ಮೂರು ಭಾಗವಾಗಿದ್ದೇವೆ: ಎಚ್​ಡಿಡಿ ಬೇಸರ

ವಜ್ರಕ್ಕಾಗಿ ರಸ್ತೆಯಲ್ಲಿ ಪೈಪೋಟಿಗೆ ಬಿದ್ದ ಜನ: ಡೈಮಂಡ್​ ಸಿಕ್ಕ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
