ಕೋಲ್ಕತ್ತಾ:ಸುದೀರ್ಘ ಕಾನೂನು ಹೋರಾಟವನ್ನು ಸಹಿಸಿಕೊಂಡ ಭಾರತೀಯರ ತಾಳ್ಮೆಯನ್ನು ಶ್ಲಾಘಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಯೋಧ್ಯೆ ರಾಮಮಂದಿರದಲ್ಲಿ ರಾಮನಿಗಾಗಿ ಹಿಂದೂಗಳು ಕಾದಿದ್ದು 500 ವರ್ಷಗಳ ಕಾಲ ಎಂದು ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಫೈನಲ್‌ಗೆ ಕನ್ನಡಿಗ ರೋಹನ್ ಬೋಪಣ್ಣ ಜೋಡಿ
ಕೋಲ್ಕತ್ತಾದಲ್ಲಿ ಎಫ್​ಐಸಿಸಿಐ ಎಫ್ಎಲ್​ಓ (FICCI FLO) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಇರಾನಿ, “ನಮ್ಮ ದೇವರ ಪ್ರತಿಷ್ಠಾಪನೆಗೆ 500 ವರ್ಷಗಳ ಕಾಲ ಕಾದಿದ್ದೇವೆ ಎಂದು ಹೇಳಿದರು. ಇನ್ನು ರಾಮಮಂದಿರ ಉದ್ಘಾಟನೆಗೆ ನೀಡಲಾಗಿದ್ದ ಆಹ್ವಾನ ತಿರಸ್ಕರಿಸಿದವರಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವೆ, ದೇವರಿಗಿಂತ ತಾವು ದೊಡ್ಡವರು ಎಂದು ಕೆಲವರ ಭಾವಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಇತರ ಸಾಮಾಜಿಕ ವಿಷಯಗಳ ಕುರಿತು ಮಾತನಾಡಿದ ಸೃತಿ, ಹಾನಿಕಾರಕ ಆನ್‌ಲೈನ್ ವಿಷಯಗಳಿಂದ ಮಕ್ಕಳನ್ನು ರಕ್ಷಿಸುವಲ್ಲಿ ಪೋಷಕರು ಹೆಚ್ಚು ಜಾಗರೂಕತೆ ವಹಿಸಬೇಕು. ಮಕ್ಕಳು 8-10 ವರ್ಷದೊಳಗಿನವರಾಗಿದ್ದರೆ, ಅವರಿಗೆ ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದ ಬಳಕೆ ಅಗತ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಅಶ್ವಿನ್​-ಜಡೇಜಾ ಈಗ ಭಾರತದ ಯಶಸ್ವಿ ಬೌಲಿಂಗ್​ ಜೋಡಿ; ಹಿಂದಿಕ್ಕಿದ್ದು ಯಾರನ್ನು?
ಈ ವಿಷಯದಲ್ಲಿ ಪೋಷಕರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗಳಲ್ಲಿ ಯಾವುದೇ ಅಸಭ್ಯ ವಿಷಯಗಳು ನಿಮ್ಮ ಗಮನಕ್ಕೆ ಬಂದರೆ, ಕೂಡಲೇ ಅದನ್ನು ರಿಪೋರ್ಟ್​ ಮಾಡಬೇಕು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).
ಪದ್ಮ ಪ್ರಶಸ್ತಿ 2024: 34 ಪದ್ಮಶ್ರೀ ಪುರಸ್ಕೃತರ ಪಟ್ಟಿ ಇಲ್ಲಿದೆ ನೋಡಿ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − 4 =
Remember me
