ನವದೆಹಲಿ:ಮಹಿಳೆಯರ ಫೇರ್​ನೆಸ್​ ಕ್ರೀಮ್​ ‘ ಫೇರ್​ ಆ್ಯಂಡ್​ ಲವ್ಲೀ’ಯಲ್ಲಿ ಇನ್ನು ಮುಂದೆ ‘ಫೇರ್​’ ಇರೋದಿಲ್ಲ. ಹಾಗಂತಾ ಕಂಪನಿಯೇ ಘೋಷಣೆ ಮಾಡಿದೆ.
‘ಫೇರ್​ ಆ್ಯಂಡ್​ ಲವ್ಲೀ’ ಹಿಂದುಸ್ಥಾನ್​ ಯುಲೀವರ್ ಕಂಪನಿಯ ಅತ್ಯಂತ ಜನಪ್ರಿಯ ಫೇರ್​ನೆಸ್​ ಕ್ರೀಮ್​ ಆಗಿದೆ. ಬೆಳ್ಳಗೆ ಹಾಗೂ ಸುಂದರವಾಗಿ ಕಾಣಲು ಇದನ್ನೇ ಬಳಸಿ ಎಂದು ಕಂಪನಿ ದಶಕಗಳಿಂದ ಹೇಳುತ್ತ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥ ಸಂದೇಶ ಸಾರುವ ಜಾಹೀರಾತುಗಳಿಗೆ ವಿರೋಧ ವ್ಯಕ್ತವಾಗಿದೆ. ಜತೆಗೆ, ಇದು ಬೆಳ್ಳಗೆ ಅಥವಾ ಗೌರವರ್ಣ ಹೊಂದಿಲ್ಲದವರನ್ನು ತಾರತಮ್ಯದಿಂದ ಕಾಣುವಂತೆ ಮಾಡುತ್ತದೆ ಎನ್ನುವುದು ಈ ಕ್ರೀಮ್​ ಬಗ್ಗೆ ಇರುವ ಆಕ್ರೋಶ. ಈ ಕಾರಣಕ್ಕಾಗಿಯೇ ಫೇರ್​ನೆಸ್​ ಕ್ರೀಮ್​ನ ಹೆಸರು ಬದಲಾವಣೆಗೆ ನಿರ್ಧರಿಸಿದೆ.
ಇದನ್ನೂ ಓದಿ;ಜುಲೈ 31ರ ವರೆಗೆ ಲಾಕ್​ಡೌನ್​; ಶಾಲಾ-ಕಾಲೇಜುಗಳು ಬಂದ್​; ಕರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೆಲ್ಲಿ?
‘ಫೇರ್​ ಆ್ಯಂಡ್​ ಲವ್ಲೀ’​ ಎಂಬ ಹೆಸರಿನಲ್ಲಿರುವ ‘ಫೇರ್​’ ಎಂಬ ಪದವನ್ನು ಕೈಬಿಡಲಿದೆ. ಕಂಪನಿಯು ಚರ್ಮದ ಎಲ್ಲ ವರ್ಣಗಳನ್ನು ಸಂಭ್ರಮಿಸಲು ಅಥವಾ ಗೌರವಿಲಸು ಬದ್ಧವಾಗಿದೆ ಎಂದು ಹೇಳಿಕೊಂಡಿದೆ. ಈ ಕ್ರೀಮ್​ಗೆ ಹೊಸ ಹೆಸರನ್ನು ನೀಡಲಾಗಿದ್ದು, ಸಂಬಂಧಿಸಿದ ಪ್ರಾಧಿಕಾರದಿಂದ ಒಪ್ಪಿಗೆ ಪಡೆದ ಬಳಿಕ ಅನಾವರಣಗೊಳಿಸಲಾಗುವುದು ಎಂದು ಹಿಂದುಸ್ತಾನ್​ ಯುನಿಲೀವರ್​ ಗುರುವಾರ (ಜೂ.25) ಹೇಳಿಕೆ ನೀಡಿದೆ.
ಅಮೆರಿದಲ್ಲಿ ಕಪ್ಪು ಜನರ ‘ಬ್ಲ್ಯಾಕ್​ ಲೀವ್ಸ್​ ಮ್ಯಾಟರ್ಸ್​’ ಜಗತ್ತಿನ ವಿವಿಧ ದೇಶಗಳಿಗೆ ಪಸರಿಸಿದೆ. ಚರ್ಮದ ಬಣ್ಣವನ್ನಾಧರಿಸಿ ನಡೆಯುವ ತಾರತಮ್ಯದ ವಿರುದ್ಧ ಜನರು ದನಿ ಎತ್ತಿದ್ದಾರೆ. ಹಲವು ಕಂಪನಿಗಳ ಫೇರ್​ನೆಸ್​ ಉತ್ಪನ್ನಗಳು ಕೂಡ ಕೆಂಗಣ್ಣಿಗೆ ಗುರಿಯಾಗಿವೆ. ಈ ಎಲ್ಲ ಕಾರಣದಿಂದಾಗಿ ಇನ್ನು ಮುಂದೆ ಶ್ವೇತ ವರ್ಣವನ್ನು ಪ್ರತಿನಿಧಿಸುತ್ತಿದ್ದ ‘ಫೇರ್​’ ಎಂಬ ಪದವನ್ನು ಬಳಸುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ;ಭಾರತದ್ದೇ ದಿಗ್ವಿಜಯ; ಗಲ್ವಾನ್​ನಿಂದ ಗೊಗ್ರಾವರೆಗೆ ವಾಸ್ತವ ಗಡಿರೇಖೆಯಿಂದ ಚೀನಿಯರನ್ನು ಹೊರಗಟ್ಟಿದ ಸೇನೆ
ಇದಲ್ಲದೇ, ಉತ್ಪನ್ನ ಹಾಗೂ ಅವುಗಳ ಪ್ಯಾಕೆಟ್​ ಮೇಲೆ ಫೇರ್​, ವೈಟ್​, ವೈಟ್​ನಿಂಗ್​, ಲೈಟ್​, ಲೈಟ್​ನಿಂಗ್​ ಎಂಬ ಪದಗಳನ್ನು ಬಳಸದಿರಲು ನಿರ್ಧರಿಸಿದೆ. ಚರ್ಮ ರಕ್ಷಣೆ ಉತ್ಪನ್ನಗಳು ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ಕಂಪನಿಯ ಮುಖ್ಯಸ್ಥ ಸಂಜೀವ್​ ಮೆಹ್ತಾ ಹೇಳಿದ್ದಾರೆ.
ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + 1 =
Remember me
