ನವದೆಹಲಿ:ಹಿಂದುಸ್ಥಾನ್​ ಯುನಿಲೀವರ್​ ಲಿಮಿಟೆಡ್​ನ ಫ್ಲ್ಯಾಗ್​ಶಿಪ್​ ಬ್ರ್ಯಾಂಡ್​ ಆಗಿದ್ದ ಫೇರ್​ ಆ್ಯಂಡ್​ ಲವ್ಲೀ ಈಗ ಬದಲಾಗಿದೆ.
ಹೌದು… ಫೇರ್​ನೆಸ್ ಕ್ರೀಮ್​ ಉತ್ಪನ್ನದ ಹೆಸರು ಬದಲಾಯಿಸುವುದಾಗಿ ಈ ಹಿಂದೆಯೇ ಕಂಪನಿ ತಿಳಿಸಿತ್ತು. ಅದರ ಬದಲಾದ ಹೆಸರನ್ನು ಸಂಬಂಧಿತ ಪ್ರಾಧಿಕಾರದ ಒಪ್ಪಿಗೆಗೆ ಕಳುಹಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿತ್ತು. ಇದೀಗ ಅದರ ಹೆಸರನ್ನು ಬಹಿರಂಗಪಡಿಸಿದೆ.
ಇನ್ನು ಮುಂದೆ ಫೇರ್​ ಆ್ಯಂಡ್​ ಲವ್ಲೀ ಹೆಸರನ್ನು ಗ್ಲೋ ಆ್ಯಂಡ್​ ಲವ್ಲೀ ಎಂದು ಬದಲಾಯಿಸಲಾಗಿದೆ. ಪುರುಷರು ಬಳಸುವ ಸ್ಕಿನ್​ ಕೇರ್​ ಕ್ರೀಮ್ಅನ್ನು ಗ್ಲೋ ಆ್ಯಂಡ್​ ಹ್ಯಾಂಡ್​ಸಮ್​ ಎಂದು ಘೋಷಿಸಿದೆ.
ಇದನ್ನೂ ಓದಿ:‘ಫೇರ್​ ಆ್ಯಂಡ್​ ಲವ್ಲೀ’ಯಲ್ಲಿ ಇನ್ನು ಮುಂದೆ ಇರೋದಿಲ್ಲ ಫೇರ್​; ಏನು ಹೇಳುತ್ತೆ ಕಂಪನಿ?
ಜತೆಗೆ ತನ್ನ ಉತ್ಪನ್ನ ಹಾಗೂ ಅವುಗಳ ಪ್ಯಾಂಕಿಂಗ್​ನಲ್ಲೆಲ್ಲೂ ಫೇರ್​, ಫೇರ್​ನೆಸ್​, ಲೈಟ್​, ಲೈಟ್​ನಿಂಗ್ ಎಂಬ ಪದಗಳನ್ನು ಬಳಸದಿರಲು ಕಂಪನಿ ನಿರ್ಧರಿಸಿದೆ.
ಕಪ್ಪು ವರ್ಣದವರನ್ನು ಕೀಳಾಗಿ ನೋಡಲಾಗುತ್ತದೆ ಹಾಗೂ ಮನುಷ್ಯರ ಬಣ್ಣಗಳ ಆಧಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂಬ ಟೀಕೆ ಬಲವಾದ ಕಾರಣ ಹಿಂದುಸ್ಥಾನ ಯುನಿಲೀವರ್​ ಹೆಸರನ್ನು ಬದಲಾಯಿಸಲು ನಿರ್ಧರಿಸಿತ್ತು.
ಇದನ್ನೂ ಓದಿ:ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ
ಇದಲ್ಲದೇ, ಅಮೆರಿಕದಲ್ಲಿ ಬ್ಲ್ಯಾಕ್​ ಲೈವ್ಸ್​ ಮ್ಯಾಟರ್ಸ್​ ಹೋರಾಟ ತೀವ್ರತೆ ಪಡೆದುಕೊಂಡಿದ್ದು ಕೂಡ ಕಂಪನಿಗೆ ಮುಳುವಾಗಿ ಪರಿಣಮಿಸಿತ್ತು.
ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
