ಮುಂಬೈ:ಗುರುವಾರ ಬಿಎಸ್​ಇ ಸೆನ್ಸೆಕ್ಸ್ 79,000 ಅಂಕಗಳ ಗಡಿಯನ್ನು ದಾಟಿದರೆ, ನಿಫ್ಟಿ ಮೊದಲ ಬಾರಿಗೆ ಐತಿಹಾಸಿಕ 24,000 ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಐತಿಹಾಸಿಕ ದಾಖಲೆಗಳು ಸೃಷ್ಟಿಯಾದವು.
ಬ್ಲೂ-ಚಿಪ್ ಸ್ಟಾಕ್‌ಗಳಾದ ಇನ್ಫೋಸಿಸ್, ರಿಲಯನ್ಸ್ ಮತ್ತು ಟಿಸಿಎಸ್​ಗಳಲ್ಲಿನ ಭಾರೀ ಖರೀದಿಯು ಷೇರು ಮಾರುಕಟ್ಟೆಗಳು ಸತತ ನಾಲ್ಕನೇ ದಿನಕ್ಕೆ ಲಾಭ ಕಾಣಲು ಹಾಗೂ ಸೂಚ್ಯಂಕ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಲು ನೆರವಾಯಿತು.
30-ಷೇರುಗಳ ಬಿಎಸ್‌ಇ ಸೂಚ್ಯಂಕ 568.93 ಅಂಕಗಳು ಅಥವಾ ಶೇ. 0.72 ರಷ್ಟು ಜಿಗಿದು 79,243.18 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು. ದಿನದ ವಹಿವಾಟಿನಲ್ಲಿ ಇದು 721.78 ಅಂಕಗಳು ಅಥವಾ ಶೇ. 0.91 ರಷ್ಟು ಏರಿಕೆಯಾಗಿ ಹೊಸ ಜೀವಿತಾವಧಿಯ ಗರಿಷ್ಠ ಮಟ್ಟ 79,396.03 ಅಂಕಗಳನ್ನು ತಲುಪಿತ್ತು.
ನಿಫ್ಟಿ 50 ಸೂಚ್ಯಂಕವು 175.70 ಅಂಕಗಳು ಅಥವಾ ಶೇ. 0.74 ರಷ್ಟು ಏರಿಕೆಯಾಗಿ 24,044.50 ರ ಹೊಸ ದಾಖಲೆಯ ಗರಿಷ್ಠ ಮಟ್ಟ ಮುಟ್ಟಿತು. ಇಂಟ್ರಾ-ಡೇ ವಹಿವಾಟಿನಲ್ಲಿ, ಇದು 218.65 ಅಂಕಗಳು ಅಥವಾ ಶೇ. 0.91 ರಷ್ಟು ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 24,087.45 ಅಂಕಗಳನ್ನು ತಲುಪಿತು.
ಪ್ರಮುಖ ಷೇರುಗಳ ಪೈಕಿ, ಅಲ್ಟ್ರಾಟೆಕ್ ಸಿಮೆಂಟ್ ಶೇ. 5 ರಷ್ಟು ಏರಿಕೆ ಕಂಡಿತು. ದೇಶದ ಪ್ರಮುಖ ಸಿಮೆಂಟ್ ತಯಾರಕ ಕಂಪನಿಯಾದ ಅಲ್ಟ್ರಾಟೆಕ್​ ತನ್ನ ಚೆನ್ನೈ ಮೂಲದ ಪ್ರತಿಸ್ಪರ್ಧಿ ಇಂಡಿಯಾ ಸಿಮೆಂಟ್ಸ್ ಲಿಮಿಟೆಡ್‌ನಲ್ಲಿ 23 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿದ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿತು. ಇನ್ಫೋಸಿಸ್, ಟಿಸಿಎಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಬೆಲೆಗಳು ಏರಿಕೆ ದಾಖಲಿಸಿದವು. ಎನ್‌ಟಿಪಿಸಿ, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಮೋಟಾರ್ಸ್, ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟೆಕ್ ಮಹೀಂದ್ರಾ ಷೇರುಗಳು ಕೂಡ ಪ್ರಮುಖ ಲಾಭ ಗಳಿಸಿದವು. ಲಾರ್ಸನ್ ಆ್ಯಂಡ್ ಟೂಬ್ರೊ, ಸನ್ ಫಾರ್ಮಾ, ನೆಸ್ಲೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಮಾರುತಿ ಷೇರುಗಳು ನಷ್ಟ ಕಂಡವು.
ವಲಯವಾರು ಸೂಚ್ಯಂಕಗಳ ಪೈಕಿ ಐಟಿ, ಇಂಧನ ಏರಿಕೆ ಕಂಡವು. ಮಿಡ್‌ಕ್ಯಾಪ್ ಸೂಚ್ಯಂಕ ಲಾಭ ಕಂಡರೆ, ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ. ಅರ್ಧದಷ್ಟು ನಷ್ಟವಾಯಿತು.
ಏಷ್ಯಾದ ಮಾರುಕಟ್ಟೆಗಳ ಪೈಕಿ ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್​ಕಾಂಗ್ ನಷ್ಟ ಕಂಡವು. ಐರೋಪ್ಯ ಮಾರುಕಟ್ಟೆಗಳಲ್ಲಿ ಮಿಶ್ರ ನೋಟ ಇತ್ತು. ಅಮೆರಿಕ ಮಾರುಕಟ್ಟೆಗಳು ಬುಧವಾರ ನಷ್ಟ ಅನುಭವಿಸಿದವು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 3,535.43 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
ಬುಧವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 620.73 ಅಂಕಗಳು ಅಥವಾ ಶೇ. 0.80ರಷ್ಟು ಏರಿಕೆ ಕಂಡು 78,674.25 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತ್ತು. ನಿಫ್ಟಿ ಸೂಚ್ಯಂಕವು 147.50 ಅಂಕಗಳು ಅಥವಾ ಶೇ. 0.62 ರಷ್ಟು ಏರಿಕೆಯಾಗಿ 23,868.80 ರ ದಾಖಲೆಯ ಮುಕ್ತಾಯದ ಗರಿಷ್ಠ ಮಟ್ಟವನ್ನು ಮುಟ್ಟಿತ್ತು.
ವಿವಾಹಿತ ಮಹಿಳೆಯರಿಗೆ ಉದ್ಯೋಗ ನೀಡದ ಆರೋಪ: ಐಫೋನ್ ತಯಾರಕ ಫಾಕ್ಸ್‌ಕಾನ್ ಸ್ಪಷ್ಟನೆ

ಸೆಬಿಗೆ ಹಣ ಪಾವತಿಸುವ ಮೂಲಕ ಇನ್ಸೈಡರ್ ಟ್ರೇಡಿಂಗ್ ಆರೋಪ ಇತ್ಯರ್ಥ ಮಾಡಿಕೊಂಡ ಇನ್ಫೋಸಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 11 =
Remember me
