ತಿರುವನಂತಪುರಂ:ಸಚಿವರ ಬೆಂಗಾವಲು ವಾಹನವೊಂದು ಆ್ಯಂಬುಲೆನ್ಸ್​ಗೆ​ ಡಿಕ್ಕಿ ಹೊಡೆದು ಬಳಿಕ ಬೈಕ್​ ಒಂದಕ್ಕೆ ಗುದ್ದಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.
ಕೇರಳ ಸರ್ಕಾರದ ಶಿಕ್ಷಣ ಸಚಿವ ಶಿವನ್​ಕುಟ್ಟಿ ಅವರ ಬೆಂಗಾವಲು ವಾಹನ ಆ್ಯಂಬುಲೆನ್ಸ್​ಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ.
Kerala Education Minister V Sivan Kutty’s pilot vehicle crashed against an ambulance near Kottarakara in Kollam district. 3 were injured in this accident.pic.twitter.com/l3ROkGd2sn
ಇದನ್ನೂ ಓದಿ:ಕಿರುಕುಳಕ್ಕೆ ಬೇಸತ್ತು KKRTC ನೌಕರ ಆತ್ಮಹತ್ಯೆಗೆ ಯತ್ನ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸರ್ಕಲ್​ ಒಂದಕ್ಕೆ ಸಚಿವರ​ ಕಾರು ರಸ್ತೆಯ ಮತ್ತೊಂದು ಬದಿಯಿಂದ ಬರುತ್ತದೆ. ಈ ವೇಳೆ ಎದುರಿನಿಂದ ರೋಗಿಯನ್ನು ಹೊತ್ತು ಸಾಗುತ್ತಿದ್ದ ಆ್ಯಂಬುಲೆನ್ಸ್​ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾಗುವುದನ್ನು ನೋಡಬಹುದಾಗಿದೆ. ಇದಾದ ಬಳಿಕ ಚಾಲಕ ವಾಹನವನ್ನು ನಿಲ್ಲಿಸಲು ಮುಂದಾಗುವಷ್ಟರಲ್ಲೇ ಮುಂಬದಿ ನಿಂತಿದ್ದ ಬೈಕ್​ಗೆ ಡಿಕ್ಕಿ ಹೊಡೆಯುತ್ತದೆ.
ಹಿಂಬದಿ ಇದ್ದ ಸಚಿವರ ಕಾರು ಘಟನೆ ನಡೆದ ಬಳಿಕ ನಿಲ್ಲಿಸದೆ ತಮ್ಮ ಪಾಡಿಗೆ ಹೋಗುತ್ತಿರುವುದು ಕಂಡು ಬಂದಿದ್ದು, ಸಾಕಷ್ಟು ಖಂಡನೆಗೆ ಗುರಿಯಾಗಿದೆ. ಸಾರ್ವಜನಿಕರ ನೆರವಿನಿಂದ ಆ್ಯಂಬುಲೆನ್ಸ್​ಅನ್ನು ಮೇಲಕ್ಕೆ ಎತ್ತಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 7 =
Remember me
