ವಾಷಿಂಗ್ಟನ್​:ಹಿಟ್ಲರ್​ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಜರ್ಮನ್​ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದ ಆತನ ಮನೆಯಿಂದ ಅಮೆರಿಕದ ಯೋಧನೊಬ್ಬ ಲೂಟಿ ಮಾಡಿದ್ದ ವಸ್ತುಗಳನ್ನು ಇದೀಗ ಹರಾಜಿಗೆ ಇಡಲಾಗಿದೆ. ವಿಶೇಷವೆಂದರೆ ಹಿಟ್ಲರ್​ ಬಳಸುತ್ತಿದ್ದ ಟಾಯ್ಲೆಟ್​ ಸೀಟೊಂದಕ್ಕೇ ಬರೋಬ್ಬರಿ 13 ಲಕ್ಷ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ.
ಅಂದ ಹಾಗೆ ಈ ಟಾಯ್ಲೆಟ್​ ಸೀಟಿಗೆ 3.5 ಲಕ್ಷ ರೂಪಾಯಿಂದ ಹರಾಜು ಕೂಗಲಾಗಿದೆ. ಹರಾಜಿನ ಕೊನೆಯಲ್ಲಿ ಅದರ ಬೆಲೆ 13 ಲಕ್ಷ ರೂಪಾಯಿಯವರೆಗೂ ಹೋಗಲಿದೆಯಂತೆ. ಎರಡನೇ ಮಹಾಯುದ್ಧದ ಕೊನೆಯಲ್ಲಿ ಹಿಟ್ಲರ್​ ಸಾವನ್ನಪ್ಪಿದ ನಂತರ ಅಮೆರಿಕದ ಸೈನ್ಯವು ಬರ್ಕ್ಟೆಸ್ಗಾಡೆನ್ ತಲುಪಿತು. ಅಲ್ಲಿ ಹಿಟ್ಲರ್​ ಆಗಾಗ ಬಂದು ಹೋಗುತ್ತಿದ್ದ ಮನೆಯಿದ್ದು, ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿಯಿಂದಾಗಿ ಮನೆಯು ಅಳಿವಿನಂಚಿಗೆ ಬಂದಿತ್ತು. ಈ ಸಮಯದಲ್ಲಿ ಅಮೆರಿಕದ ಯೋಧ ರಾಗ್ನ್ವಾಲ್ಡ್ ಬೋರ್ಚ್ ಆ ಮನೆಯೊಳಗೆ ನುಗ್ಗಿದ್ದಾನೆ. ಅಲ್ಲಿದ್ದ ಎಲ್ಲ ವಸ್ತುಗಳನ್ನು ಲೂಟಿ ಮಾಡಿಕೊಂಡು ಬಂದಿದ್ದಾನೆ.
45 ಇಂಚು ಅಗಲವಿರುವ ಬಿಳಿ ಬಣ್ಣದ ಟಾಯ್ಲೆಟ್​ ಸೀಟನ್ನು ರಾಗ್ನ್ವಾಲ್ಡ್ ಮೊದಲು ಅಮೆರಿಕಕ್ಕೆ ತಂದನು. ನ್ಯೂಜೆರ್ಸಿಯಲ್ಲಿದ್ದ ತನ್ನ ಮನೆಯ ನೆಲಮಾಳಿಗೆಯಲ್ಲಿ ಇರಿಸಿದನು. ಫೆಬ್ರವರಿ 8 ರಂದು ಕುಟುಂಬವು ಆ ಸೀಟನ್ನು ಹರಾಜಿಗೆ ಹಾಕಿದೆ. (ಏಜೆನ್ಸೀಸ್​)
ಮಗನಿಲ್ಲವೆಂದು ಇದ್ದ ನಾಲ್ಕು ಹೆಣ್ಣು ಮಕ್ಕಳನ್ನು ಕೊಂದ ತಾಯಿ! ಅಮ್ಮಾ ಎನ್ನುತ್ತಲೇ ಪ್ರಾಣ ಬಿಟ್ಟ ಅಪ್ರಾಪ್ತೆಯರು

ರೈತರ ಹೋರಾಟ ನೋಡಿದ್ರೆ ಹೊಟ್ಟೆ ಉರಿಯುತ್ತೆ! ನನಗೆ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡ್ತಿದ್ದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − sixteen =
Remember me
