ಶ್ರೀನಗರ:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನಚಕಮಕಿ ನಡೆದಿದ್ದು, ಅದರಲ್ಲಿ ಓರ್ವ ಉಗ್ರ ಸತ್ತಿದ್ದು, ಇನ್ನೊಬ್ಬಾತ ಶರಣಾಗಿದ್ದಾನೆ. ಈ ಇಬ್ಬರೂ ಉಗ್ರರು ಹಿಜ್ಬುಲ್​ ಮುಜಾಹಿದ್ದೀನ್​ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದೆ.
ಉಗ್ರರು ಅಡಗಿದ್ದ ಖಚಿತ ಮಾಹಿತಿ ಮೇರೆಗೆ ಇಂದು ರಕ್ಷಣಾ ಪಡೆಗಳು ನೂರ್​ಪುರಾ, ಆವಂತಿಪುರಾ ಮತ್ತು ಪುಲ್ವಾಮಾದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಭದ್ರತಾ ಪಡೆ ಸಿಬ್ಬಂದಿಯ ದಾಳಿಗೆ ಒಬ್ಬ ಮೃತಪಟ್ಟಿದ್ದು, ಇನ್ನೊಬ್ಬ ಶರಣಾಗಿದ್ದಾನೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಶ್ರೀನಗರ ಬೇಸ್​ನ ಚಿನಾರ್ ಕಾರ್ಪ್ಸ್​ ಟ್ವೀಟ್​ ಮಾಡಿದ್ದಾರೆ.
ಮೃತ ಉಗ್ರನ ಪರಿಚಯ ಸಿಕ್ಕಿಲ್ಲ. ಶರಣಾದವನನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
ರಾಷ್ಟ್ರಧ್ವಜ ಅವಮಾನಿಸಿದ ಮುಫ್ತಿ ಬಗ್ಗೆ ಬೇಸರ; ಪಿಡಿಪಿಯನ್ನು ತೊರೆದ ಮೂವರು ನಾಯಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
