ನವದೆಹಲಿ:ಜಮ್ಮುವಿನ ಕಿಷ್ತ್ವಾರಾದ ಚಿಚ್ಚಾ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್​ ಮುಜಾಹಿದ್ದೀನ್​ಗೆ ಸೇರಿದ ಅಡಗು ತಾಣವೊಂದನ್ನು ಸ್ಥಳೀಯ ಪೊಲೀಸರು ಹಾಗೂ ಸೇನಾಪಡೆ ಯೋಧರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದೆ. ಜತೆಗೆ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮೂಲಕ ಪಾಕ್​ ಪ್ರಾಯೋಜಿತ ಹಿಜ್ಬುಲ್​ ಉಗ್ರರು ನಡೆಸಲುದ್ದೇಶಿಸಿದ ಭಾರಿ ದುಷ್ಕೃತ್ಯವನ್ನು ನಿಗ್ರಹಿಸಲಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ. 17 ರಾಷ್ಟ್ರೀಯ ರೈಫಲ್ಸ್​ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಎಕೆ 56 ರೈಫಲ್​, 27 ಸುತ್ತು ಗುಂಡುಗಳು, ಅಂಡರ್​ ಬ್ಯಾರೆಲ್​ ಗ್ರೇನೇಡ್​ ಲಾಂಚರ್​, 9 ಎಂಎಂ ಪಿಸ್ತೂಲ್​, ಮತ್ತದರ ಗುಂಡುಗಳು ಅಡಗುತಾಣದಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ;ಶೀಘ್ರದಲ್ಲಿಯೇ ಮಾರಾಟವಾಗಲಿವೆ ಮೂರು ಸರ್ಕಾರಿ ಬ್ಯಾಂಕ್​ಗಳು…!
ಅರಣ್ಯ ಪ್ರದೇಶದಲ್ಲಿ ಕಂಡುಬಂದ ಅಡಗುತಾಣದ ಮುಂಭಾಗ ಬಿಲದಂತಿದೆ. ಇದನ್ನು ನೋಡಿದರೆ, ಒಳಗೆ ಯಾರಾದರೂ ಅವಿತಿರಬಹುದು ಎಂಬ ಅನುಮಾನ ಮೂಡಲು ಸಾಧ್ಯವೇ ಇಲ್ಲ. ಆದರೆ, ಕಷ್ಟಪಟ್ಟು ಒಳಗೆ ನುಸುಳಿದರೆ, ಒಳಗಿನ ಜಾಗ ವಿಶಾಲವಾಗಿದ್ದು, ನಾಲ್ಕೈದು ಜನರು ಒಟ್ಟಿಗೆ ಕೂರಬಹುದಾದಷ್ಟಿದೆ. ಸೇನಾ ಪಡೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಉಗ್ರು ಈಗ ಇಂಥ ಅಡಗುತಾಣಗಳ ಮೊರೆ ಹೋಗುತ್ತಿದ್ದಾರೆ.
ಅಪ್ಘಾನಿಸ್ತಾನದ ತೋರಾಬೋರಾ ಕಣಿವೆಗಳಲ್ಲಿ ಅಲ್​ಖೈದಾ, ಹಿಜ್ಬುಲ್​ ಉಗ್ರರು ಬಳಸುವ ಅಡಗುತಾಣದಂತೆ ಈ ಬಿಲಗಳಿವೆ. ಸದ್ಯ, ಜನವಸತಿ ಪ್ರದೇಶಗಳಲ್ಲಿ ಉಗ್ರರಿಗೆ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಸಂಖ್ಯೆ ಕುಸಿಯುತ್ತಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ ಎಂದೇ ಸೇನಾಧಿಕಾರಿಗಳು ವಿಶ್ಲೇಷಿಸುತ್ತಾರೆ.
ಇದನ್ನೂ ಓದಿ;ಎರಡು ವರ್ಷಗಳಿಂದಲೂ ನಡೆದಿದ್ದ ಕೊಲೆಯ ಸಂಚಿಗೆ ಸಿಲುಕದವನು ಬಾತ್​ರೂಮ್​ನಲ್ಲಿ ಅಸಹಾಯಕನಾದ…!
ಊರಿನಲ್ಲಿ ಅಡಗಲು ಸಾಧ್ಯವಾಗದೆ, ಉಗ್ರರು ಕಾಡಂಚಿನ ಬಿಲಗಳನ್ನು ಸೇರಿಕೊಳ್ಳುತ್ತಿದ್ದಾರೆ. ಆದರೆ, ಉಗ್ರರು ಎಸಗುವ ದೌರ್ಜನ್ಯವನ್ನು ತಡೆದುಕೊಳ್ಳಲಾಗದೇ, ಜನರೇ ಸೇನಾ ಪಡೆಗಳಿಗೆ ಮಾಹಿತಿದಾರರಾಗುತ್ತಿದ್ದಾರೆ. ಭಯೋತ್ಪಾದಕರ ಚಟುವಟಿಕೆ ಹಾಗೂ ನೆಲೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಎಂದು ರಾಷ್ಟ್ರೀಯ ರೈಫಲ್ಸ್​ ಅಧಿಖಾರಿಗಳು ತಿಳಿಸಿದ್ದಾರೆ.
ಕೋವಿಡ್​ ರೋಗಿಗಳಿಗೆ ಮಲೇರಿಯಾ ಮದ್ದು; ಪರೀಕ್ಷೆ ಮುಂದುವರಿಸಿದ ವಿಶ್ವ ಆರೋಗ್ಯ ಸಂಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 10 =
Remember me
