ಟೋಕಿಯೋ :ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ ಉತ್ತಮ ಪ್ರದರ್ಶನದೊಂದಿಗೆ ಮುನ್ನುಗ್ತುತ್ತಿದ್ದ ಭಾರತದ ಮಹಿಳಾ ಹಾಕಿ ತಂಡ ಸೆಮಿಫೈನಲ್ಸ್​ನಲ್ಲಿ ಮುಗ್ಗರಿಸಿದೆ. ಅರ್ಜೆಂಟಿನಾ ತಂಡದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ರಾಣಿ ರಾಮಪಾಲ್​ ನಾಯಕತ್ವದ ತಂಡ 1-2 ಸ್ಕೋರ್​ನೊಂದಿಗೆ ಸೋಲನುಭವಿಸಿದೆ.
ವರ್ಲ್ಡ್​ ನಂ.2 ಅರ್ಜೆಂಟಿನಾ ವಿರುದ್ಧ ಕಷ್ಟಕರ ಪಂದ್ಯದಲ್ಲಿ ಶಕ್ತಿ ಮೀರಿ ಸೆಣೆಸಿದ ಭಾರತ ತಂಡದ ಚಿನ್ನದ ಕನಸು ಭಗ್ನವಾಗಿದೆ. ಆದಾಗ್ಯೂ ಇನ್ನೂ ಪದಕದ ನಿರೀಕ್ಷೆ ಬತ್ತಿಲ್ಲ. ಕಂಚಿನ ಪದಕಕ್ಕಾಗಿ, ಮತ್ತೊಂದು ಸೆಮಿಫೈನಲ್ಸ್​ನಲ್ಲಿ ಸೋತ ಬ್ರಿಟನ್ ತಂಡದ ವಿರುದ್ಧ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಈ ತಂಡ ಸೆಣೆಸಲಿದೆ.
ಇದನ್ನೂ ಓದಿ:‘ಗೆಲುವು-ಸೋಲು ಜೀವನದ ಭಾಗ’ – ಹಾಕಿ ಸೋಲಿಗೆ ಮೋದಿ ಸಾಂತ್ವನ
ಮಂಗಳವಾರದಂದು ಭಾರತದ ಪುರುಷರ ಹಾಕಿ ತಂಡ ಕೂಡ ಸೆಮಿಫೈನಲ್ಸ್​ನಲ್ಲಿ ಸೋಲಪ್ಪಿತ್ತು. ನಾಳೆ ಬೆಳಿಗ್ಗೆ 7 ಗಂಟೆಗೆ, ಪುರುಷರ ತಂಡವು ಕಂಚಿನ ಪದಕಕ್ಕಾಗಿ ಜರ್ಮನಿ ತಂಡದ ವಿರುದ್ಧ ಸೆಣೆಸಲಿದೆ.(ಏಜೆನ್ಸೀಸ್)
ಕುಸ್ತಿಯಲ್ಲಿ ಫೈನಲ್ಸ್​ ತಲುಪಿದ ರವಿ ಕುಮಾರ್​! ರಜತವಂತೂ ಖಚಿತ!

ದಲಿತ ಬಾಲಕಿ ಸಾವು: ಮ್ಯಾಜಿಸ್ಟ್ರೇಟ್​ ತನಿಖೆ ಆದೇಶಿಸಿದ ದೆಹಲಿ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − one =
Remember me
