ಡೆಹ್ರಾಡೂನ್ :ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪದಕ ಗೆಲ್ಲದಿದ್ದರೂ, ಸೆಮಿಫೈನಲ್ಸ್​ ತನಕ ಸಾಗಿ ಉತ್ತಮ ಆಟಗಾರಿಕೆ ಪ್ರದರ್ಶಿಸಿದೆ. ಈ ಪಯಣದಲ್ಲಿ ಹಲವು ಬಲಿಷ್ಠ ತಂಡಗಳನ್ನು ಮಣಿಸಿದ ಹಾಕಿ ಆಟಗಾರ್ತಿಯರು ದೇಶದ ಹೆಣ್ಣುಮಕ್ಕಳಿಗೆ ಸಾಧನೆಯ ದಾರಿ ಹಿಡಿಯಲು ಮಾದರಿಯಾಗಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ದೇಶದ ಒಲಿಂಪಿಕ್ಸ್​ ಹಾಕಿ ತಂಡದ ಸದಸ್ಯೆಯಾಗಿದ್ದ ಹರಿದ್ವಾರ ಮೂಲದ ವಂದನಾ ಕಟಾರಿಯಾ ಅವರನ್ನು ಉತ್ತರಾಖಂಡದ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಯಭಾರಿಯಾಗಿ ನೇಮಿಸಲಾಗಿದೆ. ಈ ನಿರ್ಧಾರವನ್ನು ರಾಜ್ಯದ ಸಿಎಂ ಪುಷ್ಕರ್​ ಸಿಂಗ್ ಧಾಮಿ ಇಂದು ಘೋಷಿಸಿದ್ದಾರೆ.
ಇದನ್ನೂ ಓದಿ:ಟೈಟ್‌ ಬುರ್ಖಾ ಧರಿಸಿ ಒಂಟಿಯಾಗಿ ಹೋಗುತ್ತಿದ್ದಳೆಂದು ಯುವತಿಯನ್ನು ಗುಂಡಿಕ್ಕಿ ಕೊಂದರು!
ಜೊತೆಗೇ ವಂದನಾಗೆ ರಾಜ್ಯದ ಪ್ರತಿಷ್ಠಿತ ಪುರಸ್ಕಾರವಾದ ‘ತಿಲು ರೌತೇಲಿ’ ಪ್ರಶಸ್ತಿಯನ್ನು ಪ್ರದಾನಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಈ ಮುನ್ನ, ವಂದನಾ ಕಟಾರಿಯಾ ಅವರಿಗೆ 25 ಲಕ್ಷ ರೂ.ಗಳ ನಗದು ಬಹುಮಾನವನ್ನು ಕೂಡ ಉತ್ತರಾಖಂಡ ಸರ್ಕಾರ ಘೋಷಿಸಿದೆ.(ಏಜೆನ್ಸೀಸ್)
ಚಿನ್ನದ ಹುಡುಗನ ಸಾಧನೆಗಿತ್ತು, ಕನ್ನಡಿಗ ಕೋಚ್​​ನ ಬೆಂಬಲ : ಕ್ರೀಡಾ ಸಚಿವ ನಾರಾಯಣಗೌಡ
ಸಾಧನೆಯ ಪಥದಲ್ಲಿ ನೆರವಾದ ಟ್ರಕ್​ ಚಾಲಕರನ್ನು ಸತ್ಕರಿಸಿದ ಮೀರಾಬಾಯಿ ಚಾನು
ಮಕ್ಕಳು ಎತ್ತರವಾಗಲು ಈ ಸರಳ ಯೋಗಾಸನ ಸಹಕಾರಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 20 =
Remember me
