ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಚಿಂತಾಜನಕ ಸ್ಥಿತಿ ತಲುಪಿರುವಂತೆ ಸುಪ್ರೀಂ ಕೋರ್ಟ್​ ಇಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ಪ್ರತಿಕ್ರಿಯೆಗಳನ್ನು ಪಡೆದು ವಿಶ್ಲೇಷಣೆ ನಡೆಸಿತು. ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ​(ಎನ್​ಸಿಆರ್​)ದ ವಾಯುಮಾಲಿನ್ಯದ ಸಮಸ್ಯೆಗೆ ಪ್ರಮುಖ ಕಾರಣಗಳೆಂದರೆ ಧೂಳು, ಸಾರಿಗೆ ವಾಹನಗಳು, ಕೈಗಾರಿಕೆಗಳು, ವಾಹನ ದಟ್ಟಣೆ ಮತ್ತು ಕೆಲವು ಪ್ರದೇಶಗಳಲ್ಲಿ ರೈತರು ಹೊಲಕ್ಕೆ ಬೆಂಕಿಹಚ್ಚುವ ರೂಢಿ ಹೊಂದಿರುವುದು ಎಂದು ಕೋರ್ಟ್​ ಹೇಳಿದೆ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಾಳೆ(ನ.16) ತುರ್ತುಸಭೆಯೊಂದನ್ನು ನಡೆಸಲು ಸುಪ್ರೀಂ ಕೋರ್ಟ್​ ಸೂಚಿಸಿದೆ. ಈ ಸಭೆಯಲ್ಲಿ ದೆಹಲಿ-ಎನ್​ಸಿಆರ್​ನಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಿರ್ಮಾಣ ಕಾರ್ಯಗಳನ್ನು ಸ್ಥಗಿತಗೊಳಿಸುವುದು, ಅನಗತ್ಯ ವಾಹನ ಸಂಚಾರ ಮತ್ತು ವಿದ್ಯುತ್​​ ಘಟಕ​ಗಳನ್ನು ನಿಲ್ಲಿಸುವುದು, ನಾಗರೀಕರಿಗೆ ವರ್ಕ್​ ಫ್ರಂ ಹೋಂ ಅವಕಾಶ ಕಲ್ಪಿಸುವುದು ಮುಂತಾದ ಬಗ್ಗೆ ಚರ್ಚಿಸಲು ಕೋರ್ಟ್​ ನಿರ್ದೇಶಿಸಿದೆ.
ಇದನ್ನೂ ಓದಿ:‘ಲಾಕ್​ಡೌನ್​ ಮಾಡಲು ಸಿದ್ಧ, ಆದರೆ…’ – ಸುಪ್ರೀಂ ಮುಂದೆ ದೆಹಲಿ ಸರ್ಕಾರ
ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಎನ್​ಸಿಆರ್​ ಪ್ರದೇಶಗಳನ್ನು ಹೊಂದಿರುವ ಇತರ ರಾಜ್ಯಗಳಾ ಪಂಜಾಬ್​, ಉತ್ತರಪ್ರದೇಶ ಮತ್ತು ಹರಿಯಾಣದ ಮುಖ್ಯ ಕಾರ್ಯದರ್ಶಿಗಳು ಈ ತುರ್ತು ಸಭೆಯಲ್ಲಿ ಭಾಗವಹಿಸಬೇಕು. ಸಭೆಯಲ್ಲಿ ಅಗತ್ಯ ನಿರ್ಧಾರ ಕೈಗೊಳ್ಳವವರೆಗೆ, ಈ ಪ್ರದೇಶದ ಸರ್ಕಾರಿ ನೌಕರರಿಗೆ ವರ್ಕ್​​ ಫ್ರಂ ಹೋಂ ಕಡ್ಡಾಯಗೊಳಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ನ್ಯಾಯಪೀಠ ಆದೇಶಿಸಿದೆ. ವಿಚಾರಣೆಯನ್ನು ನ.17ರ ಬುಧವಾರಕ್ಕೆ ಮುಂದೂಡಲಾಗಿದೆ.(ಏಜೆನ್ಸೀಸ್)
ಕಛೇರಿಯಲ್ಲೇ ಡ್ರಗ್ಸ್​ ಲ್ಯಾಬ್​ ಸ್ಥಾಪಿಸಿದ್ದ ಮಾದಕ ವ್ಯಸನಿ!

ಡಿಸೆಂಬರ್​​ನ ಈ ದಿನಗಳಲ್ಲಿ ಕತ್ರೀನಾ ಕೈಫ್​ – ವಿಕಿ ಕೌಶಲ್​ ವಿವಾಹ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 10 =
Remember me
