ಈ ಚಿತ್ರದಲ್ಲಿರುವವರ ಕಂಪ್ಯೂಟರ್ ಮೇಲಿನ ತನ್ನ ವ್ಯಾಮೋಹವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾನೆ. ಮದುವೆಯ ಉಡುಪಿನಲ್ಲೇ ವಧುವಿನ ಮುಂದೆ ಕುಳಿತಿರುವ ವರ ಕಂಪ್ಯೂಟರ್​ ಬಳಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಟ್ರೋಲಿಗರಿಗೆ ಆಹಾರವಾಗಿದೆ. ಹೀಗಾಗಿ ಜಾಲತಾಣಗಳಲ್ಲಿ ಸಾಕಷ್ಟು ಮೀಮ್ಸ್​ಗಳು ಹರಿದುಬರುತ್ತಿವೆ.
ಅಸಲಿಗೆ ಚಿತ್ರದಲ್ಲಿ ಏನಿದೆ?:ವರ ಮದುವೆಯ ಉಡುಪಿನಲ್ಲಿ ಕಂಪ್ಯೂಟರ್​ ಮುಂದೆ ಕುಳಿತಿರುವಾಗ ವಧು, ವರನಿಗಾಗಿ ಕಾಯುತ್ತಾ ಮಧುಚಂದ್ರ ಮಂಚದಲ್ಲಿ ಕಾಯುತ್ತಿರುತ್ತಾಳೆ.
ಇದನ್ನೂ ಓದಿರಿ:ಸೇತುವೆಯಿಂದ ನದಿಗೆ ಹಾರಿ ಕೆಎಸ್ಸಾರ್ಟಿಸಿ ಚಾಲಕ ಆತ್ಮಹತ್ಯೆ
ಈ ವಿಚಿತ್ರ ಕ್ಷಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿಯ ಗಮನ ಸೆಳೆದಿದೆ. ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದು, ಮೀಮ್ಸ್​ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಹೋಲ್ಡ್​ ಆನ್​ ಬೇಬ್​ ( ಸ್ವಲ್ಪ ತಡಿಯಮ್ಮಾ) ಎಂಬ ಪದ ತುಂಬಾ ವೈರಲ್​ ಆಗಿದೆ.
ಸ್ವಲ್ಪ ತಡಿಯಮ್ಮ ನನ್ನ ಶಿಫ್ಟ್​ ಮುಗಿಸಿ ಬರುತ್ತೇನೆ. ಸ್ವಲ್ಪ ಇರಮ್ಮ ಸರ್ಚ್​ ಹಿಸ್ಟರಿ ಅಳಿಸಿ ಬರುತ್ತೇನೆ ಮತ್ತು ಸ್ವಲ್ಪ ಇರಮ್ಮ ನನ್ನ ಟ್ವಿಟರ್​ ನೋಟಿಫಿಕೇಶನ್​ ಮೊದಲು ನೋಡಿಬಿಡುತ್ತೇನೆ… ಹೀಗೆ ವಿವಿಧ ರೀತಿಯಲ್ಲಿ ನೆಟ್ಟಿಗರು ಮೀಮ್ಸ್​ಗಳನ್ನು ಹರಿಬಿಡುತ್ತಿದ್ದಾರೆ.
ಇದನ್ನೂ ಓದಿರಿ:ಮನೆ ಬಿಟ್ಟು ಹೋದ ಮಗುವಿನ ರಕ್ಷಣೆ, ತಾಯಿ ಹೊಡೆದರೆಂದು ರಸ್ತೆಯಲ್ಲಿ ಸಾಗುತ್ತಿದ್ದ ಪುಟಾಣಿ
ಚಿತ್ರ ಎಲ್ಲಿಂದ ಬಂದಿದೆ ಮತ್ತು ಅದು ಟ್ವಿಟರ್‌ ಗಮನವನ್ನು ಹೇಗೆ ಸೆಳೆಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಜಾಲತಾಣಗಳಲ್ಲಿ ಕಂಡುಬರುವ ಚಿತ್ರವಿಚಿತ್ರ ಕ್ಷಣಗಳು ಇದೇ ಮೊದಲೇನಲ್ಲ. ಅನೇಕ ಫೋಟೋಗಳು ಟ್ರೋಲಿಗರಿಗೆ ಆಹಾರವಾಗಿ ವೈರಲ್​ ಆಗಿರುವುದು ಸುಳ್ಳಲ್ಲ. (ಏಜೆನ್ಸೀಸ್​)
"hold on babe, let me finish my shift"#WFHpic.twitter.com/6Z6gO5kIvI
— Elon Rusk (@Namastetrumpiey)February 10, 2021

hold on babe , let me delete my search historypic.twitter.com/PTCtOK2vya
— lee (@shinigamihelloh)February 9, 2021

"hold on babe let me check my twitter notifications first"pic.twitter.com/Fz9qjDrKj9
— paneer (@albertkamuh)February 9, 2021

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:4 × 5 =
Remember me
