ನವದೆಹಲಿ:ಕೋವಿಡ್​-19 ಚಿಕಿತ್ಸೆಗೆ ಒಳಗಾಗಿ ಆಗಸ್ಟ್​​ 31ರಂದು ಏಮ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಗೃಹ ಸಚಿವ ಅಮಿತ್​ ಷಾ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಮಿತ್​ ಷಾ ಅವರಿಗೆ ಆಗಸ್ಟ್​ 2ರಂದು ಕರೊನಾ ವೈರಸ್​ ಪಾಸಿಟಿವ್​ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ಷಾ ಅವರಿಗೆ ಆಗಸ್ಟ್​ 14ರಂದು ಕರೊನಾ ನೆಗೆಟಿವ್​ ಆಗಿತ್ತು. ತದನಂತರದಲ್ಲಿ ಕೋವಿಡ್​ ನಂತರದ ಆರೈಕೆಗಾಗಿ ಆಗಸ್ಟ್​ 18ರಂದು ಮತ್ತೆ ಏಮ್ಸ್​ಗೆ ದಾಖಲಾಗಿ, 31ರಂದು ಡಿಸ್ಚಾರ್ಜ್​ ಆಗಿದ್ದರು. ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:ವಾರಭವಿಷ್ಯ|ಕುಬೇರನ ಭಂಡಾರದಲ್ಲಿ ಒಂದು ಭಾಗ ಸಿಕ್ಕರೂ ಸಾಕಲ್ಲವೆ? ಸುಖವಾಗಿರಿ
ಕರೊನಾ ವೈರಸ್​ನಿಂದ ಗುಣಮುಖರಾದ ಬಳಿಕ ಷಾ ಅವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಆಸ್ಪತ್ರೆಯಲ್ಲೇ ಉಳಿದರೆ ನಿರಂತರ ಮೇಲ್ವಿಚಾರಣೆಗೆ ಸಹಾಯವಾಗಲಿದೆ ಎಂಬ ಆಲೋಚನೆಯಿಂದ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿನ್ನೆ ರಾತ್ರಿ 11 ಗಂಟೆಗೆ ಏಮ್ಸ್​ ಆಸ್ಪತ್ರೆಯಲ್ಲಿರುವ ಕಾರ್ಡಿಯೋ ನ್ಯೂರೋ ಟವರ್​ ವಿಭಾಗದಲ್ಲಿ ದಾಖಲಾಗಿದ್ದಾರೆಂದು ಏಮ್ಸ್​ ಮೂಲಗಳು ತಿಳಿಸಿವೆ.(ಏಜೆನ್ಸೀಸ್​)
ಮಾದಕಜಾಲದ ಲೋಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 2 =
Remember me
