ನವದೆಹಲಿ:ಗೃಹ ಸಚಿವ ಅಮಿತ್​ ಷಾ ಅವರ ಆರೋಗ್ಯದ ಬಗ್ಗೆ ದೆಹಲಿಯ ಏಮ್ಸ್​ ಮಾಹಿತಿ ನೀಡಿದೆ.
ಒಂದು ಬಾರಿ ಕೊವಿಡ್​-19ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದ ಅಮಿತ್​ ಷಾ ಅವರಿಗೆ ಮತ್ತೊಮ್ಮೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಮೈಕೈನೋವು, ಆಯಾಸ ಕಂಡುಬಂದಿದ್ದರಿಂದ ದೆಹಲಿಯ ಏಮ್ಸ್​ಗೆ ದಾಖಲಾಗಿದ್ದರು. ಅವರಿಗೆ ಏಮ್ಸ್​ ನಿರ್ದೇಶಕ ಡಾ. ರಣದೀಪ್​ ಗುಲೇರಿಯಾ ನೇತೃತ್ವದ ತಂಡ ಚಿಕಿತ್ಸೆ ನೀಡಿತ್ತು.ಇದನ್ನೂ ಓದಿ:ಮಾವನ ಹತ್ಯೆ, ಅತ್ತೆಯ ಪರಿಸ್ಥಿತಿ ತೀವ್ರ ಗಂಭೀರ: ಇದು ಸುರೇಶ್​ ರೈನಾ ವಾಪಸ್​ ಆಗಲು ಕಾರಣ
ಆಗಸ್ಟ್​ 18ರಿಂದಲೂ ಅಬ್ಸರ್ವೇಶನ್​​ನಲ್ಲಿ ಇದ್ದ ಗೃಹ ಸಚಿವರು ಆಸ್ಪತ್ರೆಯಿಂದಲೇ ಕೆಲಸ ಮಾಡುತ್ತಿದ್ದರು. ಇದೀಗ ಷಾ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು ಶೀಘ್ರದಲ್ಲೇ ಅವರನ್ನು ಡಿಸ್​ಚಾರ್ಜ್​ ಮಾಡಲಾಗುವುದು ಎಂದು ಏಮ್ಸ್​ ತಿಳಿಸಿದೆ.ಈ ಹಿಂದೆ ಆಗಸ್ಟ್​ 2ರಂದು ಅವರಲ್ಲಿ ಒಮ್ಮೆ ಕರೊನಾ ಕಾಣಿಸಿಕೊಂಡಿತ್ತು. ಗುರ್​ಗಾಂವ್​​ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆಗಸ್ಟ್​ 14ರಂದು ಷಾ ಅವರಲ್ಲಿ ಕೊವಿಡ್​-19 ನೆಗೆಟಿವ್​ ಎಂದು ವರದಿ ಬಂದಿತ್ತು. ಅದಾದ ನಾಲ್ಕೇ ದಿನಕ್ಕೆ ಮತ್ತೆ ಆಸ್ಪತ್ರೆ ಸೇರಿದ್ದರು.(ಏಜೆನ್ಸೀಸ್​)
ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​; ದ್ವಾರದಲ್ಲಿದ್ದ ಪ್ಲಾಸ್ಟಿಕ್​ ಚೀಲದ ಮೇಲೆ ಏನಿದೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
