ಬೆಂಗಳೂರು:ಏನೇ ಮಾಡಿದರೂ ಹಾವಳಿ ಇಡುತ್ತಲೇ ಇರುವ ಕರೊನಾ ಸೋಂಕನ್ನು ಇಲ್ಲವಾಗಿಸಲು ಜಗತ್ತಿನಾದ್ಯಂತ ಲಸಿಕೆ ಕಂಡುಹಿಡಿಯಲು ಸಂಶೋಧನೆಗಳು ನಡೆಯುತ್ತಿವೆ. ಆ ನಿಟ್ಟಿನಲ್ಲಿ ಹಲವು ಔಷಧ ಕಂಪನಿಗಳು ಪ್ರಯತ್ನಿಸುತ್ತಿರುವ ಜತೆಗೆ ರಾಜಕೀಯ ಪಕ್ಷಗಳೂ ತಲೆಕೆಡಿಸಿಕೊಂಡಿವೆ. ಆದರೆ ಇಲ್ಲೊಬ್ಬರು ಆರೋಗ್ಯ ಸಚಿವರು ಎಲ್ಲರಿಗಿಂತ ಮುಂದೆ ಒಂದು ವಿಶೇಷವಾದ ಹೆಜ್ಜೆ ಇಟ್ಟಿದ್ದಾರೆ.
ಭಾರತ್ ಬಯೋಟೆಕ್​ ಕಂಪನಿಯು ಕೋವ್ಯಾಕ್ಸಿನ್​ನ ಮೂರನೇ ಹಂತದ ಪ್ರಯೋಗವನ್ನು ನಡೆಸಲಿರುವುದಾಗಿ ಸೋಮವಾರ ಘೋಷಿಸಿದೆ. ಇದರಲ್ಲಿ ದೇಶಾದ್ಯಂತದ 26 ಸಾವಿರ ಸ್ವಯಂಸೇವಕರು ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಳ್ಳಲಿದ್ದಾರೆ ಎಂದು ಅದು ತಿಳಿಸಿದೆ. ಈ ಪ್ರಯೋಗವು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಪಾಲುದಾರಿಕೆಯಲ್ಲಿ ನಡೆಯಲಿದ್ದು, ಇದು ದೇಶದಲ್ಲಿ ನಡೆಯುತ್ತಿರುವ ಕೋವಿಡ್​-19ನ ಬೃಹತ್ ಪ್ರಯೋಗ ಎನಿಸಿಕೊಂಡಿದೆ. ಇದಕ್ಕೆ ಡ್ರಗ್​ ಕಂಟ್ರೋಲರ್ ಜನರಲ್​ ಆಫ್ ಇಂಡಿಯಾದ ಮಾನ್ಯತೆಯೂ ಇದೆ.
Trial for third phase of Covaxin a coronavirus vaccine product of Bhart Biotech to start in Haryana on 20th November. I have offered myself as first volunteer to get vaccinated .
— ANIL VIJ MINISTER HARYANA (@anilvijminister)November 18, 2020

ವಿಶೇಷವೆಂದರೆ ಈ ಪ್ರಯೋಗದಲ್ಲಿ ಪ್ರಥಮ ಸ್ವಯಂಸೇವಕರಾಗಿ ಗೃಹ ಸಚಿವರೊಬ್ಬರು ಪಾಲ್ಗೊಳ್ಳಲಿದ್ದಾರೆ. ಹರಿಯಾಣದ ಗೃಹ ಸಚಿವ ಅನಿಲ್ ವಿಜ್​ ಇಂಥದ್ದೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಕರೊನಾ ಲಸಿಕೆ ಕೋವ್ಯಾಕ್ಸಿನ್​​ನ 3ನೇ ಹಂತದ ಪ್ರಯೋಗವನ್ನು ಭಾರತ್ ಬಯೋಟೆಕ್​ ನ. 20ರಿಂದ ಹರಿಯಾಣದಲ್ಲಿ ನಡೆಸಲಿದೆ. ಅದರಲ್ಲಿ ಪ್ರಥಮ ಸ್ವಯಂಸೇವಕನಾಗಿ ಪಾಲ್ಗೊಳ್ಳುವ ನಾನು ಮೊದಲಿಗನಾಗಿ ಲಸಿಕೆ ತೆಗೆದುಕೊಳ್ಳಲಿದ್ದೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ಹಾರುವ ಹಾವು!; ಒಂದು ವಾರದಿಂದ ಜನರಲ್ಲಿ ಆತಂಕ…

ವಾಸನ್ ಐ ಕೇರ್ ಸಂಸ್ಥಾಪಕರ ನಿಧನ; ಸಂಬಂಧಿಕರಿಂದ ಅನುಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + three =
Remember me
