ನವದೆಹಲಿ:ಭಾರತದಲ್ಲಿ ದೇಶ ಬಿಟ್ಟು ಹೋಗುವುದಾಗಿ ಬಾಯ್ಮಾತಿಗೆ ಹೇಳಿದ ಉದಾಹರಣೆಗಳು ಬಹಳಷ್ಟಿವೆ. ಚಿತ್ರನಟ ಅಮೀರ್​ ಖಾನ್​, ಸಾಹಿತಿ ಯು.ಆರ್. ಅನಂತಮೂರ್ತಿ ಮುಂತಾದವರು ಭಾರತವನ್ನು ತೊರೆಯುವ ಕುರಿತು ಮಾತನಾಡಿದ್ದರು. ಎಷ್ಟೋ ಸಲ ಸುಮ್ಮನೆ ರಾಜಕೀಯ ಹಾಗೂ ತತ್ವ-ಸಿದ್ಧಾಂತಗಳ ಕಾರಣಕ್ಕೆ ಇಂಥದ್ದೊಂದು ಹೇಳಿಕೆ ಬಂದುಹೋಗಿದ್ದವು.
ಆದರೆ ಇದೀಗ ನಿಜಕ್ಕೂ ಭಾರತವನ್ನು ಬಿಟ್ಟು ಹೋದವರೆಷ್ಟು ಎಂಬ ಮಾಹಿತಿಯೊಂದು ಬಹಿರಂಗಗೊಂಡಿದೆ. ಆ ಕುರಿತ ಅಂಕಿ-ಅಂಶವನ್ನು ಇಂದು ಲೋಕಸಭೆ ಅಧಿವೇಶನದಲ್ಲಿ ಗೃಹ ಸಚಿವಾಲಯವೇ ಬಹಿರಂಗಪಡಿಸಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಪೌರತ್ವ ಪಡೆದವರೆಷ್ಟು ಹಾಗೂ ಭಾರತವನ್ನು ತೊರೆದು ಬೇರೆ ದೇಶಗಳ ಪೌರತ್ವ ಪಡೆದವರೆಷ್ಟು ಎಂಬ ಮಾಹಿತಿಯನ್ನು ಅದು ಸದನಕ್ಕೆ ನೀಡಿದೆ.
ಇದನ್ನೂ ಓದಿ:ಸಾರ್ವಜನಿಕರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ ಬಿಎಸ್​ಎನ್​ಎಲ್​ ಪ್ರೇಮ; ಕಾರಣ ಆ ಮೂವರು…
ಭಾರತದ ಪೌರತ್ವ ಪಡೆದವರು ಹಾಗೂ ಭಾರತವನ್ನು ತೊರೆದು ಹೋದವರ ಸಂಖ್ಯೆಯ ನಡುವೆ ಅಜಗಜಾಂತರ ಇರುವುದು ಇದೀಗ ಚರ್ಚೆಯ ವಿಷಯವಾಗಿದೆ. ಈ ಕುರಿತು ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಲಾರಂಭಿಸಿವೆ.
ಗೃಹ ಸಚಿವಾಲಯ ಅಧಿವೇಶನದಲ್ಲಿ ನೀಡಿರುವ ಮಾಹಿತಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಅಂದರೆ 2016ರಿಂದ 2020ರ ವರೆಗೆ 4177 ಮಂದಿಗೆ ಭಾರತದ ಪೌರತ್ವ ನೀಡಲಾಗಿದೆ. ಆದರೆ ಕಳೆದ ಐದು ವರ್ಷಗಳಲ್ಲಿ ಅಂದರೆ 2017ರಿಂದ 2021ರ ಸೆ. 30ರ ವರೆಗೆ 6 ಲಕ್ಷಕ್ಕೂ ಅಧಿಕ ಮಂದಿ ಭಾರತವನ್ನು ಬಿಟ್ಟು ಹೋಗಿ ಬೇರೆ ದೇಶಗಳ ಪೌರತ್ವ ಪಡೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
