ನವದೆಹಲಿ:ರಸ್ತೆ ಡಿವೈಡರ್ ಮೇಲೆ ಮಲಗಿದ್ದವರ ಮೇಲೆ ವೇಗವಾಗಿ ಬಂದ ಲಾರಿ ಚಲಿಸಿದ ಪರಿಣಾಮ 4 ಜನರು ಮೃತಪಟ್ಟ ಘಟನೆ ಈಶಾನ್ಯ ಭಾಗದ ಸಿಮಾಪುರಿ ಪ್ರದೇಶದಲ್ಲಿರುವ ದೆಹಲಿ ಸಾರಿಗೆ ನಿಗಮ (DTC) ಬಸ್ ಡಿಪೋ ಭಾಗದಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಡಿವೈಡರ್ ಮೇಲೆ ಮಲಗಿದ್ದರು. ಈ ವೇಳೆ ಲಾರಿಯೊಂದು ವೇಗವಾಗಿ ಬಂದು ನಾಲ್ವರ ಸಾವಿಗೆ ಕಾರಣವಾಗಿದೆ. ಎರಡು ಜನರು ಗಾಯಗೊಂಡಿದ್ದಾರೆ. ಈ ಘಟನೆ ಬೆಳಗ್ಗಿನ ಜಾವ 1.51ರ ಸುಮಾರಿಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರು ಕರೀಮ್ (52), ಛೋಟೆ ಖಾನ್ (25), ಶಾಹ್ ಅಲಮ್ (38), ರಾಹು (45), ಮನೀಶ್ (16), ಪ್ರದೀಪ್ (30) ಎಂದು ತಿಳಿದು ಬಂದಿದೆ. ಇಂದು ಬೆಳಗಿನ ಜಾವ ಮೃತದೇಹಗಳು ಡಿವೈಡರ್ ಬಳಿ ಬಿದ್ದಿದ್ದವು. ಲಾರಿ ಗುದ್ದಿದ ವೇಗಕ್ಕೆ ವಿದ್ಯುತ್ ಕಂಬವೊಂದು ಸ್ಥಳದಲ್ಲೇ ಉರುಳಿ ಬಿದ್ದಿದೆ.
ಚಾಲಕನ ಅತಿಯಾದ ವೇಗದಿಂದ ಈ ಘಟನೆ ಸಂಭವಿಸಿದೆ. ಆರು ಜನರಲ್ಲಿ ಎರಡು ಜನರು ಸ್ಥಳದಲ್ಲೇ ಮತಪಟ್ಟಿದ್ದಾರೆ. ಉಳಿದ ನಾಲ್ವರನ್ನು ಹತ್ತಿರದ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ವೇಳೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಆರ್. ಸಾಥಿಯಾಸುಂದರಂ ತಿಳಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 10 =
Remember me
