ತೀರಾ ಅಗತ್ಯ ಸಂದರ್ಭದಲ್ಲಿ ಹೊರಗಡೆ ಹೋಗಬೇಕಾದಾಗ ಜನರು ಮಾಸ್ಕ್​ಗಳನ್ನು ಧರಿಸುವುದು ಉತ್ತಮ ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ. ಆದರೆ ಇಂದು ಮಾಸ್ಕ್​ಗಳ ಬೆಲೆ ಗಗನಮುಖಿಯಾಗುತ್ತಿದೆ. ಇದಕ್ಕೆ ಆತಂಕ ಪಡಬೇಕಿಲ್ಲ, ಜನರು ಮನೆಯಲ್ಲೇ ಮಾಸ್ಕ್​ಗಳನ್ನು ತಯಾರಿಸಿಕೊಳ್ಳಬಹುದು.
ಹೀಗೆ ಮಾಡಿ…
1. ಯಾವುದೇ ಹತ್ತಿ ಬಟ್ಟೆಯನ್ನು ಮುಖಗವಸಿಗೆ ಬಳಸಬಹುದು. ಅದನ್ನು ಉಪ್ಪು ಬೆರೆಸಿದ ಕುದಿಯುವ ನೀರಿನಲ್ಲಿ ಐದು ನಿಮಿಷ ನೆನೆಸಿ ಚೆನ್ನಾಗಿ ಒಣಗಿಸಿಕೊಳ್ಳಬೇಕು.
2. ದೊಡ್ಡವರಿಗಾದರೆ 9 ಅಂಗುಲ x 7 ಅಂಗುಲ, ಚಿಕ್ಕವರಿಗಾದರೆ 7 ಅಂಗುಲ x 5 ಅಂಗುಲ ಬಟ್ಟೆ ಕತ್ತರಿಸಿಕೊಳ್ಳಿ.
3. ಕಟ್ಟಲು ಹಾಗೂ ಪೈಪಿಂಗ್​ಗೆ ನಾಲ್ಕು ಸ್ಟ್ರಿಪ್​ಗಳನ್ನು ತುಂಡು ಮಾಡಿಕೊಳ್ಳಬೇಕು. ತುಂಡು ಮಾಡಿದ ಬಟ್ಟೆಗಳನ್ನು 1.55 ಅಂಗುಲ ಸ್ಟ್ರಿಪ್​ಗಳನ್ನಾಗಿ ಜೋಡಿಸಬೇಕು. ಅದು ಪೈಪಿಂಗ್ ಆಗಿ ಬಳಕೆಯಾಗುತ್ತದೆ.
4. ಕೆಳಮುಖವಾಗಿ ತಲಾ 1.5 ಅಂಗುಲ ಗಾತ್ರದ ಮೂರು ಪದರಗಳನ್ನು ರಚಿಸಿ.
5. ಪದರ ಮಾಡಿದ ಬಟ್ಟೆಯನ್ನು ತಿರುವಿ ಆ ಭಾಗದಲ್ಲೂ ಪದರ ಮಾಡಿಕೊಳ್ಳಿ. ಪದರಗಳನ್ನು ಮಾಡಿದ ನಂತರ ಅದರ ಗಾತ್ರ ಒಂಬತ್ತು ಇಂಚಿನಿಂದ ಐದು ಇಂಚಿಗೆ ಕುಗ್ಗುತ್ತದೆ.
6. ಎರಡೂ ಕಡೆ ಪದರಗಳನ್ನು ಪೈಪಿಂಗ್​ಗೆ ಜೋಡಿಸಿ. ಈಗ 40 ಇಂಚು ಉದ್ದದ ಮುಖಕ್ಕೆ ಆವರಿಸುವ ಬಟ್ಟೆಯನ್ನು ಮೇಲೆ ಮತ್ತು ಕೆಳಗೆ ಜೋಡಿಸಿ ಹೊಲಿಯಿರಿ. ಈ ಎರಡೂ ಸ್ಟ್ರಿಪ್​ಗಳನ್ನು ಮತ್ತೆ ಮೂರು ಬಾರಿ ಮಡಚಿ ಹೊಲಿಯಿರಿ.
7. ಮುಖದ ಭಾಗ (ಫೇಸ್ ಕವರ್) ನಿಮ್ಮ ಬಾಯಿಯ ಭಾಗ ಮುಚ್ಚಿರುವಂತಿರುವುದನ್ನು ಹಾಗೂ ಅದರ ಹಾಗೂ ಮುಖದ ನಡುವೆ ಅಂತರ (ಗ್ಯಾಪ್) ಇರದಿರುವುದನ್ನು ಖಾತರಿಪಡಿಸಿಕೊಳ್ಳಿ.
ಹೊಲಿಗೆಯಂತ್ರ ಇಲ್ಲದಿದ್ದರೆ ಏನು ಮಾಡಬಹುದು?
ಮಾರ್ಗಸೂಚಿಯಲ್ಲಿ ಏನಿದೆ..?
ನವದೆಹಲಿ: ಅಗತ್ಯ ಸಾಮಗ್ರಿ ಖರೀದಿಗೆ ಮನೆಯಿಂದ ಹೊರಗೆ ಬರುವ ಜನರು ಶುದ್ಧ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಧರಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ವೈದ್ಯಕೀಯ ಸಿಬ್ಬಂದಿ ಮತ್ತು ಸೋಂಕಿತರ ಜತೆ ಸಂಪರ್ಕದಲ್ಲಿರುವವರು ಮನೆಯಲ್ಲಿ ಮಾಸ್ಕ್​ಗಳನ್ನು ತಯಾರಿಸಬಾರದು. ಒಬ್ಬ ವ್ಯಕ್ತಿ ಬಳಸಿದ ಮಾಸ್ಕ್​ನ್ನು ಮತ್ತೊಬ್ಬ ವ್ಯಕ್ತಿ ಬಳಸಬಾರದು. ಹಾಗಾಗಿ ಮನೆಯಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಮಾಸ್ಕ್​ಗಳನ್ನು ತಯಾರಿಸಿಕೊಳ್ಳಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಆರೋಗ್ಯ ಸಚಿವಾಲಯವು ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ಯಾರು ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೋ ಮತ್ತು ಸೋಂಕಿತರ ಹಾಗೂ ಶಂಕಿತರ ಸಂಪರ್ಕ ಹೊಂದಿದ್ದಾರೋ ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ತಿಳಿಸಿತ್ತು.
ಕರೊನಾ ಮಣಿಸಲು ಆಯುರ್ವೇದ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ: ಆಯುಷ್​ ಸಚಿವಾಲಯದ ಸಲಹೆಗಳು ಹೀಗಿವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
