ಹನಿಟ್ರ್ಯಾಪ್​ ನಿಪುಣೆ ಅಂದರ್​: ಈಕೆಯ ಪಟ್ಟಿಯಲ್ಲಿದ್ದಾರೆ ಪ್ರಖ್ಯಾತ ರಾಜಕಾರಣಿಗಳು, ಪೊಲೀಸರು!ತಿರುವನಂತಪುರ: ಮದುವೆ ಹೆಸರಿನಲ್ಲಿ ನಂಬಿಸಿ ಭಾರೀ ಪ್ರಮಾಣದ ಹಣ ಸುಲಿಗೆ ಮಾಡುತ್ತಿದ್ದ ಹನಿಟ್ರ್ಯಾಪ್​ ನಿಪುಣೆ ಅಶ್ವಥಿ ಅಚು ಎಂಬಾಕೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ ಅಶ್ವಥಿ ಅಚ್ಚು ಓರ್ವ ಹಿಸ್ಟರಿ ಶೀಟರ್​ ಆಗಿದ್ದು, ಅನೇಕ ಹನಿಟ್ರ್ಯಾಪ್​ ಪ್ರಕರಣಗಳಲ್ಲಿ ಭಾಗಿಯಾಗಿದ್ದಾಳೆ. ಇತ್ತೀಚೆಗೆ ಪೂವರ್​ ಮೂಲದ 68 ವರ್ಷದ ಸೆನಿಲ್​ ಎಂಬುವವರನ್ನು ಮದುವೆಯಾಗುವುದಾಗಿ ನಂಬಿಸಿ, 40 ಸಾವಿರ ಹಣ ಸುಲಿಗೆ ಮಾಡಿ ವಂಚನೆ ಮಾಡಿದ್ದಾಳೆ.
ಇದನ್ನೂ ಓದಿ:ಈಗ ರೀಲ್​​ಗಳನ್ನು ಕಸ್ಟ್​​ಮೈಸ್​ ಮಾಡಬಹುದು…! ಏನಿದು ಹೊಸ ಫೇಸ್​ಬುಕ್​ ಆಯ್ಕೆ?
ವಂಚನೆಗೆ ಒಳಗಾಗಿರುವುದು ಗೊತ್ತಾದ ಕೂಡಲೇ ಸಂತ್ರಸ್ತ ವ್ಯಕ್ತಿ ದೂರು ದಾಖಲಿಸಿದರು. ಬಳಿಕ ಅಶ್ವಥಿಯನ್ನು ಠಾಣೆಗೆ ಕರೆಸಲಾಯಿತು. ಸಂಜೆ ಹೊತ್ತಿಗೆ ಹಣ ಮರಳಿಸುವುದಾಗಿ ಭರವಸೆ ನೀಡಿದ್ದಳು. ಆದರೆ, ಗಡುವನ್ನು ಮೀರಿ ಹಣ ನೀಡದೇ ಪರಾರಿಯಾಗಿದ್ದಳು. ಕೊನೆಗೆ ಆಕೆಯನ್ನು ಬಂಧಿಸಲಾಗಿದೆ.

ಅಶ್ವಥಿ ಅಚ್ಚು ಸಾಕಷ್ಟು ಮಂದಿಯನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕೆಡವಿದ್ದಾಳೆ. ಅವರಲ್ಲಿ ಹೆಸರು ಮಾಡಿರುವ ಪೊಲೀಸರು ಮತ್ತು ರಾಜಕಾರಣಿಗಳು ಕೂಡ ಸೇರಿದ್ದಾರೆ. ತಮ್ಮ ಹೆಸರುಗಳು ಬಹಿರಂಗವಾಗಿ ಸಾರ್ವಜನಿಕರಲ್ಲಿ ಎದುರಲ್ಲಿ ಮಾನ ಮರ್ಯಾದೆ ಹೋಗಬಹುದು ಅಂತ ಅಶ್ವಥಿಯ ಹೆಸರನ್ನು ಹಲವು ಪ್ರಕರಣಗಳಿಂದ ಕೈಬಿಡಲಾಗಿದೆ.(ಏಜೆನ್ಸೀಸ್​)
ಒಂದೇ ಸೆಕೆಂಡ್​ನಲ್ಲಿ ಭಯೋತ್ಪಾದಕ ಎಂದು ಘೋಷಿಸುತ್ತೇವೆ: ಶಿಕ್ಷಕನಿಗೆ ಪೊಲೀಸ್​ ಅಧಿಕಾರಿ ಬೆದರಿಕೆ

ಭಾರೀ ಮಳೆಗೆ ಕೆರೆಯಂತಾದ ಹೊಸೂರು ಹೆದ್ದಾರಿ ತೆರವು: ಟ್ರಾಫಿಕ್​ ಪೊಲೀಸರಿಗೆ ಸವಾರರ ಬಹುಪರಾಕ್​

ಚುನಾವಣೆಯ ಹೊಸ್ತಿಲಲ್ಲೇ ಕೋಲಾರ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್​ಗೆ ಬಂಧನ ಭೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 4 =
Remember me
