ಪುಣೆ:ಜಾತಿಯೆಂಬ ವಿಷಬೀಜದಿಂದಾಗಿ ನಡೆಯುತ್ತಿರುವ ಅನಾಹುತಗಳು ಅದೆಷ್ಟೋ, ಮೇಲ್ಜಾತಿ, ಕೆಳಜಾತಿ ಎಂಬ ಪಟ್ಟಕಟ್ಟಿರುವ ಕಾರಣ, ಈಗಾಗಲೇ ಹಲವಾರು ಮಂದಿ ಅಮಾನುಷವಾಗಿ ಹತ್ಯೆಯಾಗಿದ್ದಾರೆ.
ಅಂಥದ್ದೇ ಒಂದು ಪ್ರಕರಣ ಪುಣೆಯ ಸಾಂಘ್ವಿಯಲ್ಲಿ ನಡೆದಿದೆ. ಮೇಲ್ಜಾತಿಗೆ ಸೇರಿದ ಯುವತಿಯೊಬ್ಬಳ ಜತೆ ಪ್ರೇಮ ಸಂಬಂಧ ಹೊಂದಿದ್ದ 20 ವರ್ಷದ ದಲಿತ ಯುವಕನನ್ನು ಯುವತಿಯ ಕುಟುಂಬದವರೇ ಥಳಿಸಿ ಕೊಂದಿದ್ದಾರೆ! ರಾಡ್​ ಹಾಗೂ ಕಲ್ಲುಗಳಿಂದ ಹೊಡೆದು ಹೊಡೆದು ಯುವಕನನ್ನು ಸಾಯಿಸಿದ್ದಾರೆ.
ಈ ಘಟನೆ ನಡೆದಿರುವುದು ಜೂನ್​ 7ರಂದು. ಜಾತಿಯ ವಿಷಬೀಜಕ್ಕೆ ಬಲಿಯಾದವ ವಿರಾಜ್​ ಜಗತಾಪ್​. ಈತ ಸಾಂಘ್ವಿಯ ಯುವತಿಯನ್ನು ಪ್ರೀತಿಸುತ್ತಿದ್ದ. ವಿರಾಜ್​ ದಲಿತನಾಗಿದ್ದು, ಯುವತಿ ಮೇಲ್ಜಾತಿಗೆ ಸೇರಿದವಳಾಗಿದ್ದಾಳೆ. ಪರಸ್ಪರ ಇಬ್ಬರೂ ಪ್ರೇಮಿಸುತ್ತಿರುವ ವಿಷಯ ಯುವತಿಯ ಮನೆಯವರಿಗೆ ತಿಳಿದಿದೆ.
ಇದನ್ನೂ ಓದಿ:ರೋಗಿ ಸಾವು: ಹಿಂಸೆಯ ಕೇಂದ್ರವಾದ ಆಸ್ಪತ್ರೆ- ರಕ್ಷಣೆಗಾಗಿ ವೈದ್ಯರ ಭಾರಿ ಪ್ರತಿಭಟನೆ
ಯುವಕನಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಆತನಿಗೆ ಕರೆ ಮಾಡಿರುವ ಯುವತಿಯ ಕುಟುಂಬದವರು ಕರೆ ಮಾಡಿ ಅವರಿಬ್ಬರ ಸಂಬಂಧ ಕುರಿತು ಮಾತನಾಡಬೇಕಿದೆ ಎಂದು ತಾವು ಅವರ ಪರವಾಗಿ ಇದ್ದವರಂತೆ ಮಾತನಾಡಿದ್ದಾರೆ. ಇದನ್ನು ನಂಬಿದ ಯುವಕ ಗ್ರಾಮಕ್ಕೆ ಹೋಗಿದ್ದಾನೆ. ಮನೆಯಲ್ಲಿ ಆತನಿಗೆ ತೀವ್ರವಾಗಿ ಅವಮಾನ ಮಾಡಿ ಕಳುಹಿಸಲಾಯಿತು.
ವಿರಾಜ್​ ಅಲ್ಲಿಂದ ಬೈಕ್​ನಲ್ಲಿ ವಾಪಸಾಗುತ್ತಿದ್ದ ವೇಳೆ ಆತನಿಗೆ ಟೆಂಪೋ ಡಿಕ್ಕಿ ಹೊಡೆಸಿದ್ದರು. ಆತ ಕೆಳಕ್ಕೆ ಬಿದ್ದಾಗ ರಾಡ್, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಯುವತಿಯ ತಂದೆ ಜಗದೀಶ್ ಕಾಟೆ ಕೂಡ ಅಲ್ಲಿಗೆ ಬಂದು ‘ಜಾತಿ ನಿಂದನೆಗೈದಿದ್ದರೆಂದು ತಿಳಿದುಬಂದಿದೆ.
ಇದನ್ನೂ ಓದಿ:ದುರಂತ ಬದುಕಿನ ಕುತೂಹಲ ಕಥನ: ಐದು ಕೋಟಿ ಆಸ್ತಿ ಆನೆ ಹೆಸರಿಗೆ ಬರೆದ ವ್ಯಕ್ತಿ!
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಾಯುವ ಮುಂಚೆ ನಡೆದ ಘಟನೆಗಳ ಬಗ್ಗೆ ಆತ ವಿವರಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆಪ್ರಾಪ್ತರೂ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ಆರೋಪಿಗಳನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದ್ದರೆ ಉಳಿದವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.(ಏಜೆನ್ಸೀಸ್​)
ಮಾಜಿ ಕ್ರಿಕೆಟಿಗಿನ ಶವ ಮನೆಯಲ್ಲಿಯೇ ಸಿಕ್ಕಿತು ಕೊಳೆತ ಸ್ಥಿತಿಯಲ್ಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
