ಬೆಂಗಳೂರು:ಮಲಯಾಳಂ ಚಿತ್ರನಟಿ ಪ್ರಿಯಾ ಪ್ರಕಾಶ್ ವಾರಿಯರ್​ ಒಂದೇ ಒಂದು ವಾರೆನೋಟದಿಂದ ರಾತೋರಾತ್ರಿ ಯುವಪೀಳಿಗೆಯ ಕ್ರಷ್​ ಎನಿಸಿಕೊಂಡಿದ್ದರು. ಈಗ ಎಶ್ನಾ ಕುಟ್ಟಿ ಎಂಬ ಯುವತಿ ಸೀರೆಯಲ್ಲೇ ರಿಂಗ ರಿಂಗ ಎಂದು ಸೂಪರ್ರೋ ರಂಗ ಎನಿಸಿಕೊಂಡಿದ್ದಾರೆ. ಅಷ್ಟಕ್ಕೂ ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದು ಸಾರಿಫ್ಲೋ.
ಹೂಪ್​ ಡ್ಯಾನ್ಸರ್​ ಆಗಿರುವ ಎಶ್ನಾ ಕುಟ್ಟಿ ಸೀರೆ ಉಟ್ಟು, ಶೂ ಧರಿಸಿ, ಹಾಡೊಂದಕ್ಕೆ ಹೆಜ್ಜೆ ಹಾಕಿರುವ ವಿಡಿಯೋ ತುಣುಕೊಂದನ್ನು ಇನ್​ಸ್ಟಾಗ್ರಾಮ್​ನಲ್ಲಿ #sareeflow ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಹಂಚಿಕೊಂಡಿದ್ದರು. ಸೀರೆ ಉಟ್ಟುಕೊಂಡೂ ಅಸಾಮಾನ್ಯ ಎನಿಸಿದ್ದನ್ನು ಮಾಡಬಹುದು ಎಂದು ಸಾರುವ ಉದ್ದೇಶ ಅವರದ್ದಾಗಿದ್ದು, ಏಕೆ ಆ ಹ್ಯಾಷ್​ಟ್ಯಾಗ್ ಬಳಸಿದ್ದು ಎನ್ನುವುದನ್ನೂ ಅಲ್ಲಿ ಹೇಳಿಕೊಂಡಿದ್ದಾರೆ.
ಹೀಗೆ ಅವರು ಪೋಸ್ಟ್​ ಮಾಡಿದ್ದ 24 ಗಂಟೆಗಳಲ್ಲಿ ಈ ವಿಡಿಯೋ 3 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ. ಮಾತ್ರವಲ್ಲ, ಅದೇ ಹ್ಯಾಷ್​ಟ್ಯಾಗ್​ ಜತೆ ಟ್ವಿಟರ್​ನಲ್ಲೂ ಶೇರ್​ ಆಗಿ ವೈರಲ್​ ಆಗಿದೆ. ಎಷ್ಟರಮಟ್ಟಿಗೆ ಎಂದರೆ ನಿನ್ನೆಯವರೆಗೂ ಟ್ಟಿಟರ್​ನಲ್ಲಿರದ ಎಶ್ನಾ, ಶುಕ್ರವಾರ ಟ್ಟಿಟರ್​ನಲ್ಲೂ ಖಾತೆ ತೆರೆಯುವಂತೆ ಮಾಡಿದೆ.
https://www.facebook.com/VVani4U/videos/3454025937991001
ಅದಾಗಲೇ ಹರಿದಾಡುತ್ತಿರುವ ತನ್ನ ಡಾನ್ಸ್​ ವಿಡಿಯೋ ಪೋಸ್ಟ್​ ಒಂದನ್ನು ರಿಟ್ವೀಟ್​ ಮಾಡಿಕೊಂಡಿರುವ ಎಶ್ನಾ, “ನಾನು ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ್ದ ಪೋಸ್ಟ್ ಇಲ್ಲಿಗೂ ಬಂದು ಇಷ್ಟೊಂದು ಹರಿದಾಡುತ್ತೆ ಎಂದುಕೊಂಡಿರಲಿಲ್ಲ. ನಾನು ಟ್ವಿಟರ್ ಅಕೌಂಟ್​ ಕೂಡ ತೆರೆಯುತ್ತೇನೆ ಅಂತಂದುಕೊಂಡಿರಲಿಲ್ಲ..” ಎಂದು ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen + twelve =
Remember me
