ಚಂಡಿಗಢ:ವೇಗವಾಗಿ ಬಂದ ಪಿಕ್‌ಅಪ್‌ ವಾಹನವೊಂದು ಸೈಕಲ್‌ ಸವಾರಿಗೆ ಗುದ್ದಿ ದೇಹವನ್ನು ಸುಮಾರು 2 ಕಿ.ಮೀ.ಯಷ್ಟು ದೂರು ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ:26/11 ಉಗ್ರ ಕಸಬ್​ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್​ಗೆ ಬಿಜೆಪಿ ಟಿಕೆಟ್! ಪೂನಂಗೆ ಕೊಕ್​?
ಹರಿಯಾಣದ ರಾಷ್ಟ್ರೀಯ ಹೆದ್ದಾರಿ 9ರ ಪನ್ನಿವಾಲಾ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಶಾಕ್​ಗೆ ಒಳಗಾಗಿದ್ದಾರೆ. ಪಿಕ್‌ಅಪ್‌ ವಾಹನ ಹಿಂದಿದ್ದ ಕೆಲವರು ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಪಿಕ್‌ಅಪ್‌ ವಾಹನವನ್ನು ನಿಲ್ಲಿಸಿ ಚಾಲಕನಿಗೆ ಥಳಿಸಿದ್ದಾರೆ.
⚠️Use headphones ⚠️देखिए पंजाब के पन्नीवाला मोटा से पिकअप गाड़ी के नीचे लाश को खींचता हुआ लाया 2 km तक#वायरलवीडियोpic.twitter.com/86FaAnGgTj
— Lavely Bakshi (@lavelybakshi)April 27, 2024

ಮೃತ ವ್ಯಕ್ತಿಯನ್ನು ಕರ್ಮ್‌ಗಢ್ ಗ್ರಾಮದ 50 ವರ್ಷದ ಗುರ್ನಾಮ್ ಸಿಂಗ್ ಎಂದು ಗುರುತಿಸಲಾಗಿದೆ. ಪನ್ನಿವಾಲಾ ಮೋಟಾದಿಂದ ತಮ್ಮ ಹಳ್ಳಿಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಪಿಕಅಪ್ ಟ್ರಕ್ ಸೈಕಲ್ ಸವಾರನನ್ನು ಗುದ್ದಿ ಆ ವ್ಯಕ್ತಿಯನ್ನು ಎಳೆದುಕೊಂಡು ವೇಗವಾಗಿ ಸಾಗಿದೆ. ಪಿಕ್​ಅಪ್​ ಹಿಂದೆ ಬರುತ್ತಿದ್ದ ಚಾಲಕ ಸಿಗ್ನಲ್ ಮಾಡಿದರು ನಿಲ್ಲಿಸಿಲ್ಲ.
ಕೊನೆಗೂ, ಪಿಕ್​ಅಪ್ ವಾಹನ ಮುಂದೆ ಅಡ್ಡಲಾಗಿ ಮತ್ತೊಂದು ವಾಹನ ನಿಲ್ಲಿಸಿ ತಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪಿಕಅಪ್ ಟ್ರಕ್ ಅಡಿಯಿಂದ ಹೊರಗೆ ಎಳೆದು ಆಸ್ಪತ್ರೆಗೆ ಸಾಗಿಸಿದರು ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.ಈ ಮಧ್ಯೆ ಸ್ಥಳದಲ್ಲಿದ್ದವರು ಕೋಪಗೊಂಡು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯಗಳೆಲ್ಲ ಮೊಬೈಲ್‌ನಲ್ಲಿ ಸೆರೆಯಾಗಿದೆ. ಪಿಕ್‌ಅಪ್‌ ಚಾಲಕನ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಅಮೆರಿಕದಲ್ಲಿ 20 ಅಡಿ ಗಾಳಿಯಲ್ಲಿ ಹಾರಿ ಮರಕ್ಕೆ ಅಪ್ಪಳಿಸಿದ ಕಾರು; ಭಾರತ ಮೂಲದ 3 ಮಹಿಳೆಯರ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 11 =
Remember me
