ಮುಂಬೈ:ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯು ವೈದರು ಹಾಗೂ ನರ್ಸ್​ಗಳ ಮೇಲೆ ನಂಬಿಕೆಯಿಟ್ಟು ಅವರುಗಳನ್ನು ದೇವರೆಂದು ಭಾವಿಸಿ ಅಡ್ಮಿಟ್​ ಆಗಿರುತ್ತಾರೆ. ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬ ರೋಗಿಯನ್ನು ಚೆನ್ನಾಗಿ ನೋಡಿಕೊಂಡು ಅವರನ್ನು ಉಪಚರಿಸಿ ಹುಷಾರು ಮಾಡಿ ಮನೆಗೆ ವಾಪಸ್​ ಕಳುಹಿಸುವುದು ಪ್ರತಿಯೊಬ್ಬ ವೈದ್ಯರು ಹಾಗೂ ನರ್ಸ್​ಗಳ ಕರ್ತವ್ಯವಾಗಿರುತ್ತದೆ. ಆದರೆ, ಕೆಲ ಆಸ್ಪತ್ರೆಗಳಲ್ಲಿ ಸಿಬ್ಬಂದಿಯು ದಾಖಲಾಗುವ ರೋಗಿಗಳ ಮೇಲೆ ದರ್ಪ ತೋರುತ್ತಾರೆ. ಈ ವಿಚಾರ ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುತ್ತವೆ. ಇದೀಗ ಅದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್​ ಮಾಡಲಾಗುತ್ತಿದೆ. ಪ್ರೊ. ಸುಧಾಂಶು ತ್ರಿವೇದಿ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೂ 1.3 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.
लोग डॉक्टर को भगवान का दर्जा दिए हैपरंतु यहाँ डॉक्टर- शैतान का रूप में है देखिए 😳😳pic.twitter.com/y8BrEj386x
ಇದನ್ನೂ ಓದಿ:ಯೂರೋಪಿನಲ್ಲಿ ಶಾಂತಿ ತರುವ ಬಗ್ಗೆ ರವಿಶಂಕರ ಗುರೂಜಿ ಜತೆ ಐಸ್ ಲ್ಯಾಂಡ್​​ ಪ್ರಧಾನ ಮಂತ್ರಿ ಚರ್ಚೆ
ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ವೃದ್ಧ ರೋಗಿಯೊಬ್ಬರ ಎದೆಗೆ ಸಿಬ್ಬಂದಿಯೋರ್ವ ತನ್ನ ಮೊಣಕೈಯಿಂದ ರೋಗಿಯ ಹೊಟ್ಟೆಗೆ ಹೊಡೆಯುತ್ತಾನೆ. ಬಳಿಕ ಕ್ಯಾಮರಾ ಅಳವಡಿಸಿರುವುದನ್ನು ಕಂಡು ಮತ್ತೊಮ್ಮೆ ಮೊಣಕೈಯಿಂದ ರೋಗಿಯ ಹೊಟ್ಟೆಗೆ ಹೊಡೆದು ಸಿಬ್ಬಂದಿ ತೆರಳುತ್ತಿರುವುದನ್ನು ನೋಡಬಹುದಾಗಿದೆ. ತನಗೆ ಬಿದ್ದ ಏಟಿಗೆ  ನೋವನ್ನು ತಡೆಯಲಾರದೆ ರೋಗಿ ನರಳಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​​ ಆಗುತ್ತಿದೆ.
ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ಸಿಬ್ಬಂದಿಯ ನಡೆಗೆ ಕಿಡಿಕಾರಿದ್ದು, ಈತನನ್ನು ಕೂಡಲೇ ಕೆಲಸದಿಂದ ವಜಾ ಮಾಡಿ ಪೊಲೀಸರಿಗೆ ಒಪ್ಪಿಸಿ ಎಂದು ಆಗ್ರಹಿಸಿದ್ದಾರೆ. ಜನರು ಆಸ್ಪತ್ರೆಗೆ ದೇವಸ್ಥಾನ ಅಂದುಕೊಂಡಿದ್ದಾರೆ, ಆದರೆ ಈತ ರೋಗಿಗೆ ದೆವ್ವದ ರೂಪದಲ್ಲಿ ಕಾಡಿದ್ದಾನೆ ಎಂದು ಕಮೆಂಟ್​ ಮೂಲಕ ಕಿಡಿಕಾರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 3 =
Remember me
