ತಿರುವನಂತಪುರ:ಆಸ್ಪತ್ರೆಯೊಂದರಲ್ಲಿ ಸುಮಾರು ಹತ್ತು ನಾಗರಹಾವಿನ ಮರಿಗಳು ಪತ್ತೆಯಾದ್ದರಿಂದ ಸರ್ಜಿಕಲ್ ವಾರ್ಡ್ ಬಂದ್ ಮಾಡಲಾಗಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಇಲ್ಲಿನ ಪೆರಿಂತಲಮನ್ನ ಎಂಬಲ್ಲಿನ ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್ ವಾರ್ಡ್​ನಲ್ಲಿ ಮೂರು ದಿನಗಳಲ್ಲಿ ಹತ್ತು ನಾಗರಹಾವಿನ ಮರಿಗಳು ಪತ್ತೆಯಾದ್ದರಿಂದ ರೋಗಿಗಳನ್ನು ಆಸ್ಪತ್ರೆಯ ಇನ್ನೊಂದು ಭಾಗಕ್ಕೆ ಸ್ಥಳಾಂತರ ಮಾಡಿ ವಾರ್ಡ್​ ಬಾಗಿಲು ಮುಚ್ಚಲಾಗಿದೆ. ರೋಗಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರ ‘ಶಕ್ತಿ’ಗೆ ಕಿತ್ತು ಹೋಯ್ತು ಇನ್ನೊಂದು ಬಸ್ ಡೋರ್!
ವಾರ್ಡ್​ಗೆ ಸಮೀಪದಲ್ಲಿ ದಟ್ಟವಾದ ಪೊದೆಗಳಿರುವುದಲ್ಲದೆ, ವಾರ್ಡ್​ ನೆಲದಲ್ಲಿನ ಟೈಲ್ಸ್​ ಕಿತ್ತುಹೋಗಿದ್ದು, ಅವುಗಳ ಎಡೆಯಲ್ಲಿ ಹಾವಿನ ಮರಿಗಳು ಅವಿತುಕೊಳ್ಳುವಂತಾಗಿರುವುದೇ ಈ ಅವಸ್ಥೆಗೆ ಕಾರಣ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಣ್ಣೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ಜತೆಗಿದ್ದ ತಾಯಿ ಹಾವಿನ ಕಡಿತಕ್ಕೆ ಒಳಗಾಗಿದ್ದರು.
30 ದಿನ ರಜೆ ಕೊಡಿ, ಇಲ್ಲಂದ್ರೆ ಒತ್ತಡದಲ್ಲಿ ಏನಾದ್ರೂ ಆದ್ರೆ ನೀವೇ ಜವಾಬ್ದಾರಿ: ಎಸ್​ಪಿಗೆ ಡಿವೈಎಸ್​ಪಿ ಪತ್ರ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × 1 =
Remember me
