ನಾಗ್ಪುರ: ಪೋಕ್ಸೋ ಕಾಯ್ದೆ, ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಂತಹ ಕಾಯ್ದೆಗಳಿದ್ದರೂ ರಾಜಾರೋಷವಾಗಿ, ಅದೂ ಹೆಚ್ಚಾಗಿ ಅಪ್ರಾಪ್ತ ಬಾಲಕಿಯರ ಮೇಲೆಯೇ ಅತ್ಯಾಚಾರ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಕಾಶ್ಮೀರದ ಅನಂತ್​​ನಾಗ್ ನ 14 ವರ್ಷದ ಬಾಲಕಿಯೋರ್ವಳು ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದಾಳೆ, ಮೊರಾದಾಬಾದ್​​​​ನ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಯೊಬ್ಬ ಆಕೆಗೆ ಬಲವಂತವಾಗಿ ಡ್ರಗ್ ನೀಡಿ ಅತ್ಯಾಚಾರವೆಸಗಿದ್ದಾನೆ. ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣವೂ ಆಯಿತು. ಇದೀಗ ನಾಗಪುರ ಜಿಲ್ಲೆಯ ಕಟೋಲ್​​ನ ಹಾಸ್ಟೆಲ್ ವಿದ್ಯಾರ್ಥಿನಿಯ ಸರದಿ.
ಇದನ್ನೂ ಓದಿ:ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಬಾಲಕಿ ಈಗ ಎಂಟು ತಿಂಗಳ ಗರ್ಭಿಣಿ
14 ವರ್ಷದ ಅಂಗವಿಕಲ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ನಾಗಪುರ ಜಿಲ್ಲೆಯ ಕಟೋಲ್‌ನಲ್ಲಿರುವ ಹಾಸ್ಟೆಲ್‌ನ ಅಧೀಕ್ಷಕನನ್ನು ಶುಕ್ರವಾರ ಬಂಧಿಸಲಾಗಿದೆ. ಹಾಸ್ಟೆಲ್ ಅಧೀಕ್ಷಕ ರಾಜೇಂದ್ರ ಕಲ್ಬಂಡೆ ಎಂಬ ಕಾಮಪೀಪಾಸುವೇ ಏನೂ ಅರಿಯದ ಮುಗ್ಧ ಅಂಗವಿಕಲ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಂಧನಕ್ಕೊಳಗಾದವ.
ಇದನ್ನೂ ಓದಿ:ಬಾಲಕಿ ಮೇಲೆ ನಿರಂತರ ಅತ್ಯಾಚಾರ: ನಗರಸಭೆ ಕಾಂಗ್ರೆಸ್ ಸದಸ್ಯನ ಮೇಲೆ ಕೇಸ್
ಪದೇಪದೆ ಆತನಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭ ಧರಿಸಿದ್ದಾಳೆ. ಈ ಪ್ರಕರಣವನ್ನು ಇಲ್ಲೇ ಮುಚ್ಚಿ ಹಾಕಲು ಬಾಲಕಿಗೆ ಮನೆಯಲ್ಲೇ ಗರ್ಭಪಾತಕ್ಕೆ ಆಕೆಯ ತಾಯಿ ಹಾಗೂ ನರ್ಸ್ ಸಿಂಧು ದೇಹನ್​​​ಕರ್ ಒತ್ತಾಯಿಸಿದ್ದಾರೆ. ಈ ಆರೋಪದ ಮೇಲೆ ನರ್ಸ್ ಹಾಗೂ ಬಾಲಕಿಯ ತಾಯಿಯನ್ನೂ ಬಂಧಿಸಲಾಗಿದೆ ಎಂದು ಕಟೋಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಹಾದೇವ್ ಅಚ್ರೆಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಶಾಲಾ ಬಾಲಕಿ ಅಪಹರಿಸಿ, ಅತ್ಯಾಚಾರಗೈದು ಕೊಲೆ ಮಾಡಿದ್ದ ಆರೋಪಿಗೆ ಸಿಕ್ತು ಜಾಮೀನು…!
ಮೂವರು ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಮತ್ತು ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.6 ನೇ ತರಗತಿಯಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿನಿ ಕಳೆದ ಐದು ವರ್ಷಗಳಿಂದ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು. ಈ ವರ್ಷದ ಮಾರ್ಚ್‌ನಿಂದ ಕಾಮುಕ ಅಧೀಕ್ಷಕ ರಾಜೇಂದ್ರ ಕಲ್ಬಂಡೆ ಆಕೆಯ ಮೇಲೆ ಪದೇಪದೆ ಅತ್ಯಾಚಾರ ನಡೆಸಿದ್ದಾನೆ. ಅವಳು ಗರ್ಭಿಣಿಯಾದಾಗ, ನರ್ಸ್ ಸಿಂಧು ದೇಹನ್​​​ಕರ್ ಹಾಗೂ ಬಾಲಕಿಯ ತಾಯಿ ಮನೆಯಲ್ಲೇ ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆ. ಈ ಪ್ರಕರಣದ ಸುಳಿವು ಸಿಕ್ಕ ನಂತರ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.
ತನ್ನದೇ ಕೂಸಿನ ಮೇಲೆ ಅತ್ಯಾಚಾರ ಎಸಗುವ ಅಪ್ಪಂದಿರೂ ಇರುತ್ತಾರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 5 =
Remember me
