ತಿರುಪತಿ:ಕಾಲೇಜು ಹಾಸ್ಟೆಲ್​ನಲ್ಲಿ ಒಂದರ ಹಿಂದೊಂದರಂತೆ ಸಾವು ಸಂಭವಿಸಿರುವ ಪ್ರಕರಣ ನಡೆದಿದೆ. ಅದರಲ್ಲೂ ಸತ್ತವನೊಬ್ಬನನ್ನು ಕಂಡೇ ಇನ್ನೊಬ್ಬ ಸಾವಿಗೀಡಾದ ಪ್ರಸಂಗ ನಡೆದಿದೆ. ಆಂಧ್ರಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.
ತಿರುಪತಿ ಜಿಲ್ಲೆಯ ಗುಡೂರು ಎಂಬಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಪ್ರಕರಣ ನಡೆದಿದೆ. ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿ ಧರಣೇಶ್ವರ ರೆಡ್ಡಿ (20) ಎಂಬಾತನ ಶವ ನೋಡಿ ವಾರ್ಡನ್​ ಶ್ರೀನಿವಾಸುಲು ನಾಯ್ಡು (54) ಸಾವಿಗೀಡಾಗಿದ್ದಾನೆ.
ವೈಎಸ್​ಆರ್​ ಕಡಪ ಜಿಲ್ಲೆಯ ಮೂಲದ ಧರಣೇಶ್ ರೆಡ್ಡಿ ಈ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿಎಸ್​ಇ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದು, ಶನಿವಾರ ಹಾಸ್ಟೆಲ್​ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಷಯ ಗೊತ್ತಾಗಿ ಕಾಲೇಜು ಪ್ರಾಂಶುಪಾಲ, ಸಿಬ್ಬಂದಿ ಹಾಗೂ ಹಾಸ್ಟೆಲ್​ ವಾರ್ಡನ್​ ಜೊತೆಯಾಗಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಗೆ ಧಾವಿಸಿದ್ದರು. ಆಗ ವಾರ್ಡನ್ ಶವ ನೋಡಿ ಆಘಾತಗೊಂಡು ಕುಸಿದುಬಿದ್ದ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಸಾವಿಗೀಡಾಗಿದ್ದ. ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಅವಳು ಕೊಟ್ಟ ನಾಟಿ ಚಿಕಿತ್ಸೆಗೆ ಮೂರು ತಿಂಗಳ ಮಗುವೇ ಬಲಿಯಾಯ್ತು!

‘ಉತ್ತಮ ವಿಲನ್’​: ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ; ಸಾಕುತಂದೆಯ ಕುತ್ತಿಗೆಗೇ ಲಾಂಗ್ ಇಟ್ಟು ಬೆದರಿಸಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + three =
Remember me
