ನವದೆಹಲಿ:ಆದಾಯ ತೆರಿಗೆ ಅಧಿಕಾರಿಗಳು ಇನ್ನುಮುಂದೆ ಇನ್ನಷ್ಟು ಹಣಕಾಸು ವಹಿವಾಟುಗಳ ವಿವರ ಕೇಳಲಿದ್ದಾರೆ ಅಥವಾ ನಿಮಗೆ ಗೊತ್ತಿಲ್ಲದೇ, ನಿಮ್ಮೆಲ್ಲ ವಹಿವಾಟುಗಳ ಮೇಲೆ ನಿಗಾ ವಹಿಸಲಿದ್ದಾರೆ.
ನೇರ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕಗೊಳಿಸುವ ಹಾಗೂ ಇದರಲ್ಲಿ ತೆರಿಗೆ ಪಾವತಿದಾರರ ಸಂಖ್ಯೆಯನ್ನುಹೆಚ್ಚಿಸುವ ನಿಟ್ಟಿನಲ್ಲಿ ಹಲವು ಹೊಸ ಉಪಾಯಗಳನ್ನು ರೂಪಿಸಲಾಗುತ್ತಿದೆ.
ಇದನ್ನೂ ಓದಿ;ಯಾರಾಗ್ತಾರೆ ಮುಖೇಶ್​ ಅಂಬಾನಿ ಉತ್ತರಾಧಿಕಾರಿ? ಉತ್ತರ ಅಷ್ಟೊಂದು ಸುಲಭವಲ್ಲ; ರಚನೆಯಾಗಲಿದೆ ಕೌಟುಂಬಿಕ ಮಂಡಳಿ
20 ಸಾವಿರ ರೂ.ಗೂ ಹೆಚ್ಚು ಮೊತ್ತದ ಹೋಟೆಲ್​ ಬಿಲ್​ಗಳು, ಆರೋಗ್ಯ ವಿಮಾ ಕಂತುಗಳು, 50 ಸಾವಿರ ರೂ. ಹೆಚ್ಚು ಮೊತ್ತದ ಆರೋಗ್ಯ ವಿಮಾ ಕಂತುಗಳು, ಒಂದು ವರ್ಷದಲ್ಲಿ ಒಂದು ಲಕ್ಷ ರೂ.ಗೂ ಹೆಚ್ಚು ಮೊತ್ತದ ವಿದ್ಯುತ್​ ಬಿಲ್​ ಪಾವತಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳ ಶಾಲಾ ಶುಲ್ಕವಾಗಿ ಒಂದು ಲಕ್ಷ ರೂ.ಗೂ ಹೆಚ್ಚು ಹಣವನ್ನು ಪಾವತಿಸುತ್ತಿದ್ದಲ್ಲಿ ಅದೆಲ್ಲದರ ವಿವರವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.
ನೇರ ತೆರಿಗೆ ಪಾವತಿದಾರರ ಸಂಖ್ಯೆಯನ್ನು ಹೆಚ್ಚಿಸಿ ಆ ಮೂಲಕ ತೆರಿಗೆ ಭಾರವನ್ನು ಕಡಿಮೆಗೊಳಿಸುವ ಉದ್ದೇಶ ಇದರದ್ದಾಗಿದೆ ಎಂದು ಹೇಳಲಾಗಿದೆ.ಆಶ್ಚರ್ಯದ ಸಂಗತಿ ಎಂದರೆ, 130 ಕೋಟಿ ಜನರಿರುವ ಭಾರತದಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ 6.3 ಕೋಟಿ. ಈ ಪೈಕಿ ತೆರಿಗೆ ಪಾವತಿಸುವವರು ಕೇವಲ 1.3 ಕೋಟಿ ಜನರಷ್ಟೇ.
ಇದನ್ನೂ ಓದಿ;ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯನ ತಲೆಗೆ ಬಹುಮಾನ ಘೋಷಿಸಿದವನಿಗೆ ಪೊಲೀಸರು ಕೊಟ್ರು ಶಾಕ್​
ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿರುವ ಹೊಸ ನೇರ ತೆರಿಗೆ ಪದ್ಧತಿ ಇದರಲ್ಲಿ ಪಾರದರ್ಶಕತೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಹಾಗೂ ನೇರ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಬಿಜಿನೆಸ್​ ಕ್ಲಾಸ್​ನಲ್ಲಿ ದೇಶೀಯ ಅಥವಾ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ, ಒಂದು ಲಕ್ಷಕ್ಕಿಂತಲೂ ಹೆಚ್ಚು ಮೊತ್ತದ ಚಿನ್ನಾಭರಣ, ವೈಟ್​ಗೋಲ್ಡ್​ ಅಥವಾ ಪೇಂಟಿಂಗ್​ ಖರೀದಿ, ವಾರ್ಷಿಕ 20 ಸಾವಿರಕ್ಕಿಂತಲೂ ಹೆಚ್ಚು ತೆರಿಗೆಯ ಆಸ್ತಿ ಖರೀದಿ, ಷೇರು ಮಾರ್ಕೆಟ್​ ವಹಿವಾಟು, 50 ಲಕ್ಷಕ್ಕೂ ಹೆಚ್ಚು ಮೊತ್ತದ ಠೇವಣಿ, ಜಮಾ, ನಗದು ಹಿಂಪಡೆಯುವುದು ಅಥವಾ ಚಾಲ್ತಿ ಖಾತೆಯಲ್ಲಿರುವ ಮೊತ್ತ ಮೊದಲಾದವುಗಳ ಮೇಲೆ ತೆರಿಗೆ ಅಧಿಕಾರಿಗಳ ಹದ್ದಿನ ಕಣ್ಣಿಡಲಿದ್ದಾರೆ. ಇಂಥ ವ್ಯಕ್ತಿಗಳು ವಿಶೇಷ ಹಣಕಾಸು ವಹಿವಾಟಿನ ವರದಿ ಸಲ್ಲಿಬೇಕಾಗುತ್ತದೆ.
ಭಾರತೀಯರಿಗೆ ಶುಭಸುದ್ದಿ; ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಮಾನವರ ಬಳಕೆಗೆ ಸುರಕ್ಷಿತ; ಆರಂಭಿಕ ಯಶಸ್ಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
