ನವದೆಹಲಿ:ಇತ್ತೀಚೆಗೆ ಆಟೋಚಾಲಕನೊಬ್ಬನಿಗೆ ಲಾಟರಿಯಲ್ಲಿ ಬಂಪರ್​ ಬಹುಮಾನ ಬಂದಿತ್ತು. ಇದೀಗ ಹೋಟೆಲ್ ಕಾರ್ಮಿಕನೊಬ್ಬನಿಗೆ 55 ಕೋಟಿ ರೂಪಾಯಿ ಜಾಕ್​ಪಾಟ್ ಹೊಡೆದಿದೆ. ಈ ಮೂಲಕ ಆತನ ಬದುಕಲ್ಲಿ ಅಚ್ಚರಿಯ ದೊಡ್ಡ ತಿರುವೇ ಸಿಕ್ಕಿದೆ.
ದುಬೈನ ಹೋಟೆಲೊಂದರಲ್ಲಿ ಕೆಲಸ ಮಾಡುವ ಎನ್​.ಎಸ್.ಸಜೇಶ್​ ಎಂಬ 47 ವರ್ಷದ ವ್ಯಕ್ತಿಯೇ ಆ ಅದೃಷ್ಟವಂತ. ದುಬೈನ ಕರಾಮ ಪ್ರದೇಶದ ರೆಸ್ಟೋರೆಂಟ್​ವೊಂದರಲ್ಲಿ ಈತ ಪರ್ಚೇಸಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ. ಲಾಟರಿ ಹೊಡೆಯುವ ಮೂಲಕ ಈತ ಸದ್ಯಕ್ಕೆ ತನಗೆ ಬೇಕಾದ್ದನ್ನೆಲ್ಲ ಪರ್ಚೇಸ್​ ಮಾಡುವಂತಾಗಿದೆ.
ಅಬುಧಾಬಿ ಬಿಗ್ ಟಿಕೆಟ್ ಡ್ರಾನಲ್ಲಿ ಈತನಿಗೆ 25 ಮಿಲಿಯನ್ ದಿರಮ್ಸ್ ಅಂದರೆ ಸರಿಸುಮಾರು 55 ಕೋಟಿ ರೂಪಾಯಿ ಬಹುಮಾನ ಬಂದಿದೆ. ಎರಡು ವರ್ಷಗಳ ಹಿಂದೆ ಒಮನ್​ನಿಂದ ಯುಎಇಗೆ ಬಂದಿದ್ದ ಈತ ಕಳೆದ ನಾಲ್ಕು ವರ್ಷಗಳಿಂದಲೂ ಪ್ರತಿ ತಿಂಗಳಲ್ಲೂ ಬಿಗ್ ಟಿಕೆಟ್​ ಖರೀದಿಸುತ್ತಿದ್ದ.
ಅಂದಹಾಗೆ ಈತನಿಗೆ ಆನ್​ಲೈನ್​ನಲ್ಲಿ ಟಿಕೆಟ್ ಖರೀದಿಸಲು ಸಹೋದ್ಯೋಗಿಗಳು ಸಹಕರಿಸಿದ್ದರಿಂದ ಅಂಥ 20 ಮಂದಿಯಲ್ಲಿ ಈ ಬಹುಮಾನದ ಮೊತ್ತ ಹಂಚಿಕೆ ಆಗಲಿದೆ ಎನ್ನಲಾಗಿದೆ. ಭಾರತದ ಈತ ದುಬೈನಲ್ಲಿ ಕೆಲಸ ಮಾಡುವ ಹೋಟೆಲ್​ನಲ್ಲಿ 150 ಮಂದಿ ಕೆಲಸ ಮಾಡುತ್ತಿದ್ದು, ನಾನು ಅವರಿಗೆ ನನ್ನಿಂದಾದಷ್ಟೂ ಸಹಾಯ ಮಾಡುವುದಾಗಿಯೂ ಈತ ತಿಳಿಸಿದ್ದಾನೆ. ಇನ್ನೊಂದೆಡೆ ಭಾರತದಲ್ಲಿರುವ ಪತ್ನಿಗೆ ಬಂಪರ್ ಪ್ರೈಜ್ ಬಂದ ಬಗ್ಗೆ ಕರೆ ಮಾಡಿ ಹೇಳಿದ್ದಾಗ, ಆಕೆ ಆರಂಭದಲ್ಲಿ ಅದನ್ನು ತಮಾಷೆ ಎಂದೇ ಭಾವಿಸಿದ್ದರಂತೆ. ನಂತರ ಮನವರಿಕೆ ಮಾಡಿದ ಮೇಲೆ ನಂಬಿದರು ಎಂದು ಸಜೇಶ್ ಹೇಳಿಕೊಂಡಿದ್ದಾರೆ. –ಏಜೆನ್ಸೀಸ್

ಡಿಮಾನಿಟೈಸೇಷನ್ ಆಗಿ ಆರು ವರ್ಷ ಕಳೆದ್ರೂ ಹೆಚ್ಚಾಯ್ತು ಜನರ ಕೈಯಲ್ಲಿ ನಗದು!

ಪಕ್ಕದ ಮನೆಯವರಿಂದಲೇ ಕೊಲೆ?; ಇಂಟೆಲಿಜೆನ್ಸ್ ಬ್ಯೂರೋ ನಿವೃತ್ತ ಅಧಿಕಾರಿ ಸಾವಿನ ಕುರಿತು ಮಹತ್ವದ ಸುಳಿವು

ಉದ್ಯಮಿ ಸೈರಸ್​ ಮಿಸ್ತ್ರಿ ಸಾವು; ಲೇಡಿ ಡಾಕ್ಟರ್​ ವಿರುದ್ಧ ಕೇಸ್..

ಸಿಎಂ ಬದಲಾವಣೆ ಆಗಿದ್ದರಿಂದಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಕ್ಕಿಲ್ಲ: ಬಸವಜಯಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seventeen =
Remember me
