ಥಾಣೆ:ಉಚಿತವಾಗಿ ಟೀ ಕೊಡಲಿಲ್ಲ ಎಂಬ ಕಾರಣಕ್ಕೆ ಅಂಗಡಿಯವನನ್ನು ಯುವಕರ ಗುಂಪೊಂದು ಮನಬಂದಂತೆ ಥಳಿಸಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಇದನ್ನೂ ಓದಿ:ಹೆತ್ತವರಿಂದಲೇ ಮಗನ ಕಿಡ್ನ್ಯಾಪ್ ನಾಟಕ​: ವೈರಿ ಸಿಲುಕಿಸಲು ನಡೆದಿತ್ತು ಪ್ಲ್ಯಾನ್, ಕೊನೆಗೆ..
ಸ್ಥಳೀಯ ಉಲ್ಲಾಸ್‌ನಗರದ ಚೌಕ್‌ನಲ್ಲಿ ಕನ್ಹಯ್ಯಾ ಟೀ ಅಂಗಡಿ ಇದ್ದು, ಕೌಂಟರ್​ನಲ್ಲಿ ಅಂಗಡಿಯ ಮಾಲೀಕ ಪ್ರಸ್ ಸಚ್ ದೇವ್ ಕುಳಿತಿದ್ದರು. ಆಗ ಬಿಟ್ಟು ಎಂಬ ಯುವಕ ಟೀ ಕುಡಿಯಲು ಬಂದು ತನಗೆ ಉಚಿತವಾಗಿ ಟೀ ಬೇಕು ಎಂದಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಆತನಿಗೆ ಚಹಾ ನೀಡಲು ನಿರಾಕರಿಸಿದ್ದು, ಈ ವೇಳೆ ಯುವಕ ಅಂಗಡಿಯಿಂದ ಹೊರನಡೆದಿದ್ದಾನೆ.ಸ್ವಲ್ಪ ಸಮಯದ ನಂತರ ಮತ್ತೆ ಅಂಗಡಿಗೆ ತನ್ನ ಇಬ್ಬರ ಸಹಚರರೊಂದಿಗೆ ಯುವಕ ಬಂದಿದ್ದು, ಈ ವೇಳೆ ಹೋಟೆಲ್ ಮಾಲೀಕನ ಸಹೋದರ ಅಜ್ಜು ಸಚ್‌ದೇವ್ ಕೌಂಟರ್‌ನಲ್ಲಿ ಕುಳಿತಿದ್ದನು. ಆಗ ಮೂವರು ಸೇರಿಕೊಂಡು ಫ್ರೀ ಚಹಾ ನೀಡುವಂತೆ ಕೇಳಿದ್ದು, ಅದಕ್ಕೆ ಅಜ್ಜು ಕೂಡ ನಿರಾಕರಿಸಿದ್ದಾನೆ. ಇದರಿಂದ ತೀವ್ರ ಕೋಪಗೊಂಡ ಮೂವರು, ಆ ವ್ಯಕ್ತಿಗೆ ಥಳಿಸಿದ್ದು ಘಟನೆಯ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸುದ್ದಿ ತಿಳಿದ ಬಳಿಕ ಪೊಲೀಸರು ಬಿಟ್ಟು ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + two =
Remember me
