ಡೆಹ್ರಾಡೂನ್ :ಉತ್ತರಾಖಂಡದ ನೈನಿತಾಲ್​ ಮತ್ತು ಡೆಹ್ರಾಡೂನ್​ ನಗರಗಳಲ್ಲಿರುವ ಹೊಟೆಲ್​ಗಳಿಗೆ ತಮ್ಮ ಸಾಮರ್ಥ್ಯದಲ್ಲಿ ಅರ್ಧದಷ್ಟು ರೂಮುಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಆದೇಶ ಹೊರಡಿಸಿದ್ದಾರೆ. ಲಾಕ್ಡೌನ್​ ಸಡಿಲಿಕೆಯಿಂದಾಗಿ ಇಲ್ಲಿನ ಮಸ್ಸೂರಿಯಂತಹ ಜನಪ್ರಿಯ ಹಿಲ್​ ಸ್ಟೇಷನ್​ಗಳಲ್ಲಿ ಉಂಟಾಗುತ್ತಿರುವ ಜನಜಂಗುಳಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
“ನೈನಿತಾಲ್​ ಮತ್ತು ಡೆಹ್ರಾಡೂನ್​ನಲ್ಲಿನ ಹೊಟೆಲ್​ಗಳಿಗೆ ಶೇ.50 ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಿದ್ದೇವೆ. ಮಾಸ್ಕ್​ ಧರಿಸದವರಿಗೆ ಚಲನ್ ನೀಡಲಾಗುತ್ತಿದೆ. ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ” ಎಂದು ಧಾಮಿ ಹೇಳಿದ್ದಾರೆ.
ಇದನ್ನೂ ಓದಿ:ನೀವೂ ಫಾರ್ಮ್​ ಹೌಸ್ ಖರೀದಿಸ್ಬೇಕಾ? ಆಯುಷ್ ಗ್ರೀನ್ ಫಾರ್ಮ್​ ​ಹೌಸ್​ಗೆ ಬನ್ನಿ
ಪಕ್ಕದ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕುರ್​ ಕೋವಿಡ್​ ನಿಯಮಗಳನ್ನು ಪಾಲಿಸುವಂತೆ ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. “ನಾವು ಪ್ರವಾಸೋದ್ಯಮವನ್ನು ಉಳಿಸಬೇಕಾಗಿದೆ. ನಾನು ಎಲ್ಲಾ ಜಿಲ್ಲಾ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ ಜನಜಂಗುಳಿಯನ್ನು ನಿಯಂತ್ರಿಸಲು ನಿರ್ದೇಶನ ನೀಡಿದ್ದೇನೆ. ಕೋವಿಡ್​-19 ಇನ್ನೂ ಮುಗಿದಿಲ್ಲ. ಹೋಟೆಲ್​ಗಳಿಗೆ ಎಸ್​ಒಪಿ ಪಾಲಿಸಲು ಹೇಳಲಾಗಿದೆ” ಎಂದು ಠಾಕುರ್​ ಹೇಳಿದ್ದಾರೆ.(ಏಜೆನ್ಸೀಸ್)
‘ಇರಲಿ ಎಚ್ಚರ! ಕಿಕ್ಕಿರಿದ ಸ್ಥಳಗಳಲ್ಲಿ ಕರೊನಾ ವೇಗವಾಗಿ ಹರಡುತ್ತದೆ’

ಅನಂತನಾಗ್​ನಲ್ಲಿ ಇಬ್ಬರು ಉಗ್ರವಾದಿಗಳ ಸಾವು

ಎರಡು ಮಕ್ಕಳು ಹೊಂದಿದವರಿಗೆ ಹೆಚ್ಚಿನ ಇಂಕ್ರಿಮೆಂಟು, ಗೃಹ ಖರೀದಿ ಸೌಕರ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
