ಮುಂಬೈ:‘ಲಸಿಕೆ ಪಡೆದು ವಿಶ್ರಾಂತಿ ತೆಗೆದುಕೊಳ್ಳಿ’ ಎಂಬ ಆಫರ್​ಗಳನ್ನು ಕೆಲವು ಹೊಟೆಲ್​ಗಳು ಆರಂಭಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇದ್ದು ಬೇಸರಗೊಂಡಿರುವ, ಲಸಿಕೆ ನೋಂದಣಿಗೆ ಸಮಸ್ಯೆ ಎದುರಿಸುತ್ತಿರುವ ಜನರು ಈ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಅದು ಎಷ್ಟು ಸಮಂಜಸ ಎಂಬ ಪ್ರಶ್ನೆಗಳು ಮೂಡುವುದರೊಂದಿಗೆ ಕೇಂದ್ರ ಸರ್ಕಾರ ಕೂಡ ಅದಕ್ಕೆ ಅನುಮತಿ ನೀಡಬಾರದೆಂದು ತಾಕೀತು ಮಾಡಿದೆ.
ಇದೇ ರೀತಿ ಆಫರ್​ನಡಿ ಮುಂಬೈನ ಅಂಧೇರಿ ಈಸ್ಟ್​ನ ‘ದ ಲಲಿತ್​ ಹೋಟೆಲ್’​ನಲ್ಲಿ ವ್ಯವಸ್ಥೆ ಮಾಡಿದ್ದು, ಮಾಮೂಲಿ ಫ್ರಿಜ್​ನಲ್ಲಿ ಕೋವಾಕ್ಸಿನ್ ಲಸಿಕೆಗಳನ್ನು ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಬೃಹನ್​ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮುಂಬೈ ಮೇಯರ್​ ಕಿಶೋರಿ ಪೆಡ್ನೆಕರ್ ಅವರು ನಿನ್ನೆ ತಪಾಸಣೆ ನಡೆಸಿದ್ದು, ಶೇಖರಿಸಿಟ್ಟ ಲಸಿಕೆಗಳನ್ನು ಜಪ್ತಿಪಡಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ:ಐ ಡ್ರಾಪ್ಸ್​ನಿಂದ ಕರೊನಾದಿಂದ ಗುಣಮುಖನಾದೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ… ಆಸ್ಪತ್ರೆಯಲ್ಲಿ ನಿಧನ
ಸದರಿ ಹೋಟೆಲ್ ಸ್ಥಳೀಯ ಖಾಸಗಿ ಆಸ್ಪತ್ರೆಯಾದ ಕ್ರಿಟಿಕೇರ್ ಹಾಸ್ಪಿಟಲ್​​ನೊಂದಿಗೆ ಟೈಅಪ್ ಹೊಂದಿದ್ದು, 500 ಜನರಿಗೆ ಈಗಾಗಲೇ ಲಸಿಕೆ ನೀಡಿದೆ. ಆಸ್ಪತ್ರೆಯೇ ಈ ಪ್ರಸ್ತಾವನೆ ನೀಡಿದ್ದು, ಒಬ್ಬರೇ ವಾಸಿಸುವವರು ಈ ರೀತಿ ಹೊಟೆಲ್​ಗೆ ಬಂದು ಲಸಿಕೆ ಪಡೆಯಬಹುದು ಎಂದು ಆರಂಭಿಸಿದ್ದಾರೆ. ಹೊಟೆಲ್​ನವರನ್ನು ಬೈಯ್ಯುವ ಹಾಗಿಲ್ಲ. ಆದರೆ ಆಸ್ಪತ್ರೆಯು ಲಸಿಕೆಯ ಕೋಲ್ಡ್​ ಸ್ಟೋರೇಜ್​ ಬಗೆಗಿನ ನಿಯಮಗಳನ್ನು ಪಾಲಿಸಿಲ್ಲ ಎಂದು ಪೆಡ್ನೆಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಪಾಲಿಕೆ ಕೇಂದ್ರಗಳಲ್ಲೇ ಕೋವಾಕ್ಸಿನ್ ಲಭ್ಯವಿಲ್ಲ. ಅಂದ ಮೇಲೆ ಇವರಿಗೆ ಕೋವಾಕ್ಸಿನ್ ಹೇಗೆ ಸಿಕ್ಕಿತು. ಮಾಮೂಲಿ ಫ್ರಿಜ್​ನಲ್ಲಿ ಲಸಿಕೆಗಳನ್ನು ಇಟ್ಟಿರುವುದನ್ನು ನಾನು ಪತ್ತೆ ಹಚ್ಚಿದ್ದೇನೆ. ಇದರಿಂದ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮ ಉಂಟಾಗಬಹುದು. ಲಸಿಕೆ ಜಪ್ತಿಪಡಿಸಿಕೊಂಡು ತನಿಖೆ ಆದೇಶಿಸಲಾಗಿದೆ” ಎಂದಿದ್ದಾರೆ.(ಏಜೆನ್ಸೀಸ್)
ಅಂಧ ದಂಪತಿಯ ಕುಟುಂಬಕ್ಕೆ ಪೊಲೀಸ್​ ಅಧಿಕಾರಿಯ ಸಹಾಯಹಸ್ತ

VIDEO | ‘ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸವೇಕೆ, ಮೋದಿ ಸಾಬ್ ?’ ಮುದ್ದು ಹುಡುಗಿಯ ಪ್ರಶ್ನೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 20 =
Remember me
