ದೆಹಲಿ:ಮಗನ ಹುಟ್ಟುಹಬ್ಬವನ್ನು ಆಚರಿಸಿ ಸಂಬಂಧಿಕರನ್ನು ಬಿಡಲು ಹೋಗಿದ್ದ ವೇಳೆ ತಂದೆಯೊಬ್ಬ ಮೃತಪಟ್ಟ ದಾರುಣ ಘಟನೆ ದೆಹಲಿಯ ದ್ವಾರಕ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಫೋಟೋದಲ್ಲಿರುವ 2 ಆನೆಗಳನ್ನು ಪತ್ತೆಹಚ್ಚಿ! ಶೇ. 90 ಮಂದಿ ಕೈಯಲ್ಲಿ ಆಗಿಲ್ಲ
ಲಖನ್, ಆತನ ಸಹೋದರಿಯು ಫ್ಲೋರಾ ಮತ್ತು ಆಕೆಯ ಮಗಳು ದೀಕ್ಷಾ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಘಟನೆಯಲ್ಲಿ ಫ್ಲೋರಾಳ ಪತಿ ನನ್ಹೆ ರಾಮ್ ಎಂಬಾತ​ ಮಾತ್ರ ಬದುಕುಳಿದಿದ್ದಾನೆ.
ನಿನ್ನೆ ತಡರಾತ್ರಿ ಲಖನ್​ ತನ್ನ ಮನೆಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸಿದ್ದಾನೆ. ನಂತರ ತನ್ನ ತಂಗಿ ಫ್ಲೋರಾ, ಆಕೆಗ ಗಂಡ ನನ್ಹೆ ರಾಮ್​ ಹಾಗೂ ಮಗಳನ್ನು ಬಿಡಲು ಮೋಟಾರ್​ಬೈಕ್​ ತೆಗೆದುಕೊಂಡು ಖುದ್ದಾಗಿ ಹೋಗಿದ್ದ. ಈ ವೇಳೆ ನೈಋತ್ಯ ದ್ವಾರಕಾ ಪ್ರದೇಶದಲ್ಲಿ ​ಅವರ ಮೋಟಾರ್‌ ಬೈಕಿಗೆ ಎಸ್​ಯುವಿ ಡಿಕ್ಕಿ ಹೊಡೆದಿತ್ತು.
ಈ ವೇಳೆ ಎಲ್ಲರೂ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೂರು ಜನ ಮೃತಪಟ್ಟಿದ್ದು, ನನ್ಹೆ ರಾಮ್​ ಮಾತ್ರ ಬದುಕುಳಿದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ದ್ವಾರಕಾ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಎಸ್‌ಯುವಿ ಚಾಲಕ ಅಬ್ರಾರ್​ನನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
