ಶ್ರೀನಗರ: ತಂಪುಪಾನೀಯ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ 15 ಮಂದಿಗೆ ಕೊವಿಡ್​-19 ಸೋಂಕು ತಗುಲಿ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ನೀಡಿ ಮೊನ್ನೆಯಷ್ಟೇ ಡಿಸ್​ಚಾರ್ಜ್​ ಮಾಡಲಾಗಿತ್ತು. ಆದರೆ ಅವರೆಲ್ಲ ಡಿಸ್​ಚಾರ್ಜ್​ ಆಗಿ ಮನೆಗೆ ಹೋಗಿ ಮೂರೇ ದಿನಕ್ಕೆ ಅವರಲ್ಲಿ ಮತ್ತೊಮ್ಮೆ ಕರೊನಾ ಸೋಂಕು ಕಾಣಿಸಿಕೊಂಡಿದೆ.
ಜಮ್ಮುಕಾಶ್ಮೀರದ ಸಂಬಾ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಒಂದೇ ಕಡೆ ಕೆಲಸ ಮಾಡುತ್ತಿದ್ದ ಇವರಲ್ಲಿ ಸೋಂಕು ತಗುಲಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಿದ ಬಳಿಕ ನೆಗೆಟಿವ್​ ವರದಿ ಬಂದ ಹಿನ್ನೆಲೆಯಲ್ಲಿ ಡಿಸ್​​ಚಾರ್ಜ್​ ಮಾಡಲಾಗಿತ್ತು. ತಾವಿನ್ನು ಕರೊನಾ ಸೋಂಕಿನಿಂದ ಮುಕ್ತರಾಗಿದ್ದೇವೆ ಎಂದು ಅವರೆಲ್ಲ ತಮ್ಮ ಊರಿಗೆ ತೆರಳಿದ್ದರು. ಜಮ್ಮುದಲ್ಲಿರುವ ವಿವಿಧ ಪ್ರದೇಶಗಳಿಗೆ ಹೋಗಿದ್ದರು. ಆದರೆ ನಂತರ ವೈದ್ಯಕೀಯ ವರದಿ ಪಾಸಿಟಿವ್​ ಬಂದಿದ್ದು, ಇದೀಗ 15 ಜನರನ್ನೂ ಇಎಸ್​ಐಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ತಂಪು ಪಾನೀಯ ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಉದ್ಯೋಗಿಯಲ್ಲಿ ಜು.1ರಂದು ಕರೊನಾ ಕಾಣಿಸಿಕೊಂಡಿತ್ತು. ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದ 15 ಮಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಿ, ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಜು.5ರಂದು ವರದಿ ಪಾಸಿಟಿವ್​ ಬಂದಿತ್ತು. ಹಾಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 9 ದಿನಗಳ ಚಿಕಿತ್ಸೆ ಬಳಿಕ ಮತ್ತೆ ಇವರ ಸ್ವಾಬ್​ ಟೆಸ್ಟ್ ಮಾಡಲಾಗಿತ್ತು. ಜು.17ರಂದು ನೆಗೆಟಿವ್​ ವರದಿ ಬಂದಿತ್ತು.
ಅದೇ ದಿನ ಉದ್ಯೋಗಿಗಳ ಗಂಟಲುದ್ರವದ ಮಾದರಿಯನ್ನು ಮತ್ತೆ ಸಂಗ್ರಹಿಸಿ, ಎರಡನೇ ಟೆಸ್ಟ್​ಗೆ ಕಳಿಸಲಾಗಿತ್ತು. ಮೊದಲ ತಪಾಸಣೆಯ ವರದಿ ಬಂದ ತಕ್ಷಣ ಇವರನ್ನೆಲ್ಲ ಡಿಸ್​​ಚಾರ್ಜ್​ ಮಾಡಲಾಗಿತ್ತು. ಹಾಗೇ ಸೆಕೆಂಡ್​ ಟೆಸ್ಟ್​ ರಿಪೋರ್ಟ್​ ಆಸ್ಪತ್ರೆಯಿಂದ ಬಿಡುಗಡೆಯಾದ ಮೂರನೇ ದಿನದ ಬಳಿಕ ಬಂದಿದ್ದು, ಅದರಲ್ಲಿ ಎಲ್ಲರಿಗೂ ಪಾಸಿಟಿವ್​ ಎಂದೇ ತೋರಿಸಿದೆ.
ಕೊವಿಡ್​-19 ನೆಗೆಟಿವ್​ ವರದಿ ಬಂದರೆ ಡಿಸ್​ಚಾರ್ಜ್​ ಮಾಡಬೇಕು. ಮುಂದೆ ಕೆಲ ದಿನಗಳ ಕಾಲ ಅವರು ಮನೆಯಲ್ಲೇ ವಿಶ್ರಾಂತಿ ಮಾಡಬೇಕು ಎಂಬುದು ಸರ್ಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದ್ದರಿಂದ ನಾವು ಅವರನ್ನು ಬಿಡುಗಡೆ ಮಾಡಿದ್ದೆವು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)
ದುಬೆ ಎನ್‌ಕೌಂಟರ್‌ ತನಿಖೆಗೆ ಜಡ್ಜ್‌ ನೇಮಕ: ಹಲವು ಸರ್ಕಾರಗಳು ಸಂಕಷ್ಟದಲ್ಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 17 =
Remember me
