ನವದೆಹಲಿ:ರಾಷ್ಟ್ರರಾಜಧಾನಿಯಲ್ಲಿ ಭಾನುವಾರ ಮುಂಜಾನೆ ಅಂದಾಜು 2 ಗಂಟೆ ಸುರಿದ ಭಾರಿ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ನಗರದ ಹತ್ತಾರು ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದರೆ, ಇನ್ನೊಂದೆಡೆ ರಸ್ತೆಗಳು ಕುಸಿದಿವೆ.
ದೆಹಲಿಯ ಐಟಿಒ ಬಳಿಯ ಅಣ್ಣಾನಗರದಲ್ಲಿ ರಸ್ತೆಯೊಂದು ಕುಸಿದಿತ್ತು. ಕುಸಿದ ರಸ್ತೆಯ ಗುಂಡಿಯೊಳಗೆ ನೀರು ಬೀಳುವ ರಭಸಕ್ಕೆ ರಸ್ತೆಯ ಪಕ್ಕದಲ್ಲಿದ್ದ ಮನೆ ಕೂಡ ಅದರೊಳಗೆ ಕುಸಿದು ಬಿತ್ತು. ಒಂದು ರೀತಿಯಲ್ಲಿ ಯಾವುದೋ ನದಿ ರಭಸವಾಗಿ ಹರಿಯುತ್ತಾ ಮನೆಯನ್ನು ಆಪೋಶನ ತೆಗೆದುಕೊಂಡಿತ್ತೇನೋ ಎಂಬಂತೆ ಭಾಸವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದನ್ನೂ ಓದಿ:ಮಳೆಯಿಂದ ನೀರು ತುಂಬಿದ್ದ ಕೆಳಸೇತುವೆಯಲ್ಲಿ ತೇಲಿದ ಶವ
ಅದೃಷ್ಟವಶಾತ್​ ಯಾರೊಬ್ಬರೂ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಆ ಮನೆಯ ನಿವಾಸಿಗಳ ಬದುಕು ಕೊಚ್ಚಿ ಹೋಗಿರುವುದಂತೂ ನಿಜ.
No, it's not Bihar, this is our national capital New Delhi after merely two hours of heavy rainfall. One person drowned at Minto Road, houses washed away in sink hole near ITO, neck deep waterlogged streets. It was supposed to be a ' world class city'!#DelhiRains#DelhiDrownspic.twitter.com/y4QA6OfCbA— Abhishek Anand (@abhishekanandji)July 19, 2020
No, it's not Bihar, this is our national capital New Delhi after merely two hours of heavy rainfall. One person drowned at Minto Road, houses washed away in sink hole near ITO, neck deep waterlogged streets. It was supposed to be a ' world class city'!#DelhiRains#DelhiDrownspic.twitter.com/y4QA6OfCbA
ಇದಕ್ಕೂ ಮುನ್ನ ನವದೆಹಲಿ ರೈಲು ನಿಲ್ದಾಣದ ಬಳಿಯ ಮಿಂಟೋ ಕೆಳಸೇತುವೆಯಲ್ಲಿ ನಿಂತಿದ್ದ ನೀರಿನಲ್ಲಿ ಮುಳುಗಿ ಸರಕು ಸಾಗಣೆ ಆಟೋರಿಕ್ಷಾ ಚಾಲಕ ಮೃತಪಟ್ಟಿದ್ದರು. ಈ ಮಳೆ ಭಾರಿ ಅನಾಹುತವನ್ನೇ ಸೃಷ್ಟಿಸಿರುವುದರಿಂದ, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸೌತ್​ನತ್ತ ದೀಪಿಕಾ ಪಡುಕೋಣೆ ಒಲವು; ತೆಲುಗು ಸ್ಟಾರ್ ನಟನ ಜತೆ ಕನ್ನಡತಿಯ ಸ್ಕ್ರೀನ್​ಶೇರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
