ಕೊಲ್ಕತ :ನಾರದ ಲಂಚ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಟಿಎಂಸಿ ಸಚಿವರು ಸೇರಿದಂತೆ ನಾಲ್ಕು ರಾಜಕಾರಣಿಗಳಿಗೆ ಕೊಲ್ಕತ ಹೈಕೋರ್ಟ್ ಗೃಹಬಂಧನ ವಿಧಿಸಿದೆ. ನ್ಯಾಯಾಲಯದ ತ್ರಿಸದಸ್ಯ ಪೀಠವೊಂದು ಅವರ ಮಧ್ಯಂತರ ಜಾಮೀನಿನ ವಿಚಾರಣೆಯನ್ನು ಪೂರೈಸುವವರೆಗೆ, ಈ ಗೃಹಬಂಧನ ಆದೇಶ ಜಾರಿಯಲ್ಲಿರುತ್ತದೆ ಎಂದಿದೆ.
ಪಶ್ಚಿಮ ಬಂಗಾಳದ ಸಚಿವರಾದ ಫಿರ್ಹಾದ್​ ಹಕೀಂ ಮತ್ತು ಸುಬ್ರತ ಮುಖರ್ಜಿ ಅವರನ್ನು ಟಿಎಂಸಿ ಶಾಸಕ ಮದನ್​ ಮಿತ್ರ ಮತ್ತು ಟಿಎಂಸಿ ಸದಸ್ಯರಾಗಿದ್ದ ಸೊವನ್ ಚಟರ್ಜಿ ಅವರೊಂದಿಗೆ ಮೇ 17 ರಂದು ಸಿಬಿಐ ಬಂಧಿಸಿತ್ತು. ಈ ನಾಲ್ವರಿಗೆ ಕೊಲ್ಕತದ ಸೆಷನ್ಸ್​ ನ್ಯಾಯಾಲವು ನೀಡಿದ್ದ ಜಾಮೀನಿನ ವಿರುದ್ಧ ಸಿಬಿಐ ಸಲ್ಲಿಸಿದ ಮನವಿಯ ಮೇಲೆ ಜಾಮೀನಿಗೆ ತಡೆಯಾಜ್ನೆ ನೀಡಲಾಗಿದೆ. ಅಂದಿನಿಂದ ಜೈಲಿನಲ್ಲಿರುವ ಸಚಿವರು, ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಕೋವಿಡ್​ನಿಂದ ಚಿಪ್ಕೊ ಚಳವಳಿ ನಾಯಕ ಸುಂದರ್​ಲಾಲ್​ ಬಹುಗುಣ ನಿಧನ
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಉಸ್ತುವಾರಿ ಮುಖ್ಯ ನ್ಯಾಯಮೂರ್ತಿಗಳಾದ ರಾಜೇಶ್​ ಬಿಂಡಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರ ದ್ವಿಸದಸ್ಯ ನ್ಯಾಯಪೀಠವು ಒಮ್ಮತದ ನಿರ್ಧಾರ ತಲುಪಿಲ್ಲ. ನ್ಯಾಯಮೂರ್ತಿ ಬಿಂಡಾಲ್ ಗೃಹಬಂಧನ ನೀಡಬೇಕೆಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಬ್ಯಾನರ್ಜಿ ಮಧ್ಯಂತರ ಜಾಮೀನು ನೀಡಿದ್ದಾರೆ. ಹೀಗಾಗಿ ಈ ವಿಚಾರವನ್ನು ಹಿರಿದಾದ ತ್ರಿಸದಸ್ಯ ನ್ಯಾಯಪೀಠಕ್ಕೆ ಒಪ್ಪಿಸಲಾಗಿದೆ.
“ಒಬ್ಬ ಸದಸ್ಯರು ಮಧ್ಯಂತರ ಜಾಮೀನು ನೀಡಬೇಕು ಎಂದರೆ, ಮತ್ತೊಬ್ಬರು ಒಪ್ಪಲಿಲ್ಲ. ಆದ್ದರಿಂದ ಈ ವಿಚಾರವನ್ನು ಹಿರಿದಾದ ನ್ಯಾಯಪೀಠವು ಪರಿಗಣಿಸಬೇಕಾಗಿದೆ. ಏತನ್ಮಧ್ಯೆ, ಕರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಗೃಹಬಂಧನ ವಿಧಿಸಲಾಗಿದೆ” ಎಂದು ಕೋರ್ಟ್​ ಹೇಳಿದೆ.
ಇದನ್ನೂ ಓದಿ:ವಿವಾಹೇತರ ಸಂಬಂಧ ಬೆಳೆಸಿದ ಪೊಲೀಸ್​​ಗೆ ಇನ್​ಕ್ರಿಮೆಂಟ್ ಕಟ್ !
ಏನಿದು ನಾರದ ಕೇಸ್​ :​2014 ರಲ್ಲಿ ನಡೆದ ಸ್ಟಿಂಗ್ ಆಪರೇಷನ್​ನ ಫಲಿತಾಂಶ ಇದು. ಪತ್ರಕರ್ತರೊಬ್ಬರು ಬಿಸಿನೆಸ್​ಮನ್​ ರೀತಿಯಲ್ಲಿ ಬಂಗಾಳದಲ್ಲಿ ಹೂಡಿಕೆ ಮಾಡುವುದಾಗಿ ಹೋಗಿ 7 ಟಿಎಂಸಿ ಸಂಸದರು, 4 ಸಚಿವರು, ಒಬ್ಬ ಶಾಸಕ ಮತ್ತು ಒಬ್ಬ ಪೊಲೀಸ್ ಅಧಿಕಾರಿಗೆ ಲಂಚವಾಗಿ ಹಣ ನೀಡಿದ್ದರು. ಎಲ್ಲವನ್ನೂ ರೆಕಾರ್ಡ್ ಮಾಡಿದ್ದರು. ಈ ಟೇಪ್​ಗಳನ್ನು 2016 ರ ವಿಧಾನಸಭಾ ಚುನಾವಣೆಗಳ ಮುಂಚೆ ಬಿಡುಗಡೆ ಮಾಡಲಾಗಿತ್ತು ಎನ್ನಲಾಗಿದೆ.(ಏಜೆನ್ಸೀಸ್)
ಕರ್ನಾಟಕಕ್ಕೆ ಇಂದು ಬರಲಿದೆ 2 ಲಕ್ಷ ಡೋಸ್​ ಕೋವಿಶೀಲ್ಡ್
ಅರ್ಧದಷ್ಟು ಭಾರತೀಯರು ಮಾಸ್ಕ್​ ತೊಡುತ್ತಿಲ್ಲ! ಶೇ.7 ಜನ ಸರಿಯಾಗಿ ತೊಡುತ್ತಿದ್ದಾರೆ!
ಮಹಾಮಾರಿಯಿಂದ ರಕ್ಷಣೆಗೆ ‘ಕರೊನಾ ದೇವಿ’ ವಿಗ್ರಹ ಪ್ರತಿಷ್ಠಾಪನೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + seven =
Remember me
