ನವದೆಹಲಿ :ಭಾರತವು ಹಾಲಿ ಎದುರಿಸುತ್ತಿರುವ ಕರೊನಾ ಸಮಸ್ಯೆಯನ್ನು ಸುನಾಮಿ ಎಂದು ದೆಹಲಿ ಹೈಕೋರ್ಟ್ ಬಣ್ಣಿಸಿದೆ. “ಮೇ ನಡುವಿನಲ್ಲಿ ಕರೊನಾ ವೈರಸ್​ ಸೋಂಕು ಅತ್ಯಂತ ಹೆಚ್ಚಾಗಲಿದೆ ಎಂದು ದೆಹಲಿ ಐಐಟಿ ಹೇಳಿದೆ. ಆ ಸಮಯಕ್ಕೆ ಕರೊನಾ ಸಂಬಂಧಿತ ಸಾವುಗಳನ್ನು ಕಡಿಮೆ ಮಾಡಲು ಸರ್ಕಾರದ ಯೋಜನೆ ಏನಿದೆ” ಎಂದು ಪ್ರಶ್ನಿಸಿದೆ.
ಕರೊನಾ ರೋಗಿಗಳ ಚಿಕಿತ್ಸೆಗೆ ಮೆಡಿಕಲ್ ಆಕ್ಸಿಜನ್​ಅನ್ನು ಪೂರೈಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ಕೋರಿರುವ ದೆಹಲಿಯ ಆಸ್ಪತ್ರೆಗಳ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯ ಈ ಪ್ರಶ್ನೆ ಎತ್ತಿದೆ. ಕರೊನಾದ ‘ಪೀಕ್’​ಅನ್ನು ಎದುರಿಸಲು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಯಾವ ಮಟ್ಟದಲ್ಲಿ ಸಜ್ಜಾಗಿವೆ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಕೇಳಿದೆ.
ಇದನ್ನೂ ಓದಿ:ವೈದ್ಯರ ಸೇವಾ ಅವಧಿ ವಿಸ್ತರಣೆ ; ಆಕ್ಸಿಜನ್ ಪ್ಲ್ಯಾಂಟ್ ಆಮದು
“ನಾವು ಮೇ ಮಧ್ಯದಲ್ಲಿ ಪೀಕ್​ ಪ್ರಕರಣಗಳನ್ನು ಎದುರಿಸಲಿದ್ದೇವೆ. ಇದೊಂದು ಸುನಾಮಿ. ಕೆಲವರು ಸತ್ತೇ ಸಾಯುತ್ತಾರೆ. ಅದು ಅನಿವಾರ್ಯ. ಆದರೆ ಯಾರನ್ನು ಉಳಿಸಬಹುದೋ ಆ ಜನರನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ” ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಸರ್ಕಾರವು ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಬೇಕು ಎಂದರು.
ಕರೊನಾ ಎರಡನೇ ಅಲೆಯು ಇನ್ನೂ ಹದಗೆಡುವ ಸೂಚನೆಗಳಿರುವುದರಿಂದ ಹಾಸಿಗೆಗಳು, ಔಷಧಿಗಳು, ವೈದ್ಯರು, ಪ್ಯಾರಾಮೆಡಿಕ್​ ಸಿಬ್ಬಂದಿ ಮುಂತಾದ ಸಂಪನ್ಮೂಲಗಳನ್ನು ಹೆಚ್ಚಿಸುವ ಬಗ್ಗೆ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಗಮನ ಹರಿಸಬೇಕು ಎಂದು ನ್ಯಾಯಪೀಠ ಹೇಳಿತು.(ಏಜೆನ್ಸೀಸ್)
25 ಹೊಸ ರೆಮ್​ಡೆಸಿವಿರ್ ಉತ್ಪಾದನಾ ಘಟಕಗಳು ; ದಿನಕ್ಕೆ 3 ಲಕ್ಷ ವಯಲ್ ಗುರಿ !

ಅನಿಲ್ ದೇಶ್​ಮುಖ್​ ವಿರುದ್ಧ ಲಂಚದ ಕೇಸು ದಾಖಲಿಸಿದ ಸಿಬಿಐ ; ತನಿಖೆ ಆರಂಭ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 9 =
Remember me
