ಮುಂಬೈ:ಬಟ್ಟೆ ಬಿಚ್ಚದೆ ಮುಟ್ಟಿದರೆ ಲೈಂಗಿಕ ದೌರ್ಜನ್ಯವಲ್ಲ ಎಂದು ಇತ್ತೀಚೆಗೆ ಹೈಕೋರ್ಟ್​ವೊಂದು ತೀರ್ಪು ನೀಡಿ, ವಿವಾದಕ್ಕೆ ಈಡಾಗಿದ್ದ ಬೆನ್ನಿಗೇ ಈಗ ಮತ್ತೊಂದು ತೀರ್ಪು ಪ್ರಕಟವಾಗಿದ್ದು, ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿರುವುದು ಕೂಡ ನಡೆದಿದೆ. ಬಾಂಬೆ ಹೈಕೋರ್ಟ್​ ನಾಗ್ಪುರ ಪೀಠವು ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, 26 ವರ್ಷದ ಆರೋಪಿಯನ್ನು ಖುಲಾಸೆಗೊಳಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದೆ. ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠದ ನ್ಯಾಯಮೂರ್ತಿ ಪುಷ್ಪ ಗನೇಡಿವಾಲಾ ಅವರು ಈ ತೀರ್ಪು ನೀಡಿದ್ದಾರೆ.
ಸಂತ್ರಸ್ತೆಯ ಬಾಯಿಗೆ ಬಟ್ಟೆ ತುರುಕಿ, ಆಕೆಯ ಬಟ್ಟೆ ಬಿಚ್ಚಿ, ಯಾವುದೇ ಪ್ರತಿರೋಧವಿಲ್ಲದೆ ಅತ್ಯಾಚಾರಗೊಳಿಸುವುದು ಏಕಕಾಲಕ್ಕೆ ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಪ್ರಕರಣ ನಡೆದ ಸಂದರ್ಭದಲ್ಲಿ ಸಂತ್ರಸ್ತೆಯ ವಯಸ್ಸು ಹದಿನೆಂಟು ದಾಟಿದ್ದರಿಂದ ಈ ಪ್ರಕರಣವನ್ನು ಒಪ್ಪಿತ ಕ್ರಿಯೆ ಎಂದೇ ಪರಿಗಣಿಸಲಾಗುತ್ತದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿ ಸಂತ್ರಸ್ತೆಯ ಬಾಯಿಗೆ ಬಟ್ಟೆ ತುರುಕಿ, ಆಕೆಯ ಹಾಗೂ ಸ್ವತಃ ಆತನ ಬಟ್ಟೆ ಬಿಚ್ಚಿ ಆಕೆಯಿಂದ ಯಾವುದೇ ಪ್ರತಿರೋಧವಿಲ್ಲದೆ ಅತ್ಯಾಚಾರ ಮಾಡುವುದು ಏಕಕಾಲದಲ್ಲಿ ಒಬ್ಬ ವ್ಯಕ್ತಿಯಿಂದ ಅಸಾಧ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!
ತನ್ನ 15 ವರ್ಷದ ಮಗಳ ಮೇಲೆ ನೆರೆಮನೆಯ ಸೂರಜ್​ ಕಸರ್ಕರ್ ಎಂಬಾತ ಅತ್ಯಾಚಾರ ಎಸಗಿದ್ದ ಎಂದು 2013ರ ಜುಲೈ 26ರಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಆ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಎಫ್​ಐಆರ್​ ದಾಖಲಿಸಿ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಇತ್ತೀಚೆಗೆ ಈ ಪ್ರಕರಣದ ವಿಚಾರಣೆಯಲ್ಲಿ ಪೀಠ ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿ, ಆರೋಪಿಯನ್ನು ಖುಲಾಸೆಗೊಳಿಸಿದೆ. ಆ ಸಂದರ್ಭದಲ್ಲಿ ಸಂತ್ರಸ್ತೆಯ ವಯಸ್ಸು 18 ದಾಟಿದ್ದು, ಇದು ಇಬ್ಬರ ನಡುವಿನ ಒಪ್ಪಿತ ಕ್ರಿಯೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.
ಅಂದು ರಾತ್ರಿ 9.30ರ ಸಮಯ, ನಾನು ಮಂಚದ ಮೇಲೆ ಮಲಗಿದ್ದೆ. ನನ್ನ ತಮ್ಮ ಕೆಳಗೆ ನೆಲದ ಮೇಲೆ ಮಲಗಿದ್ದ, ಅಮ್ಮ ಹೊರಗೆ ಬಾತ್​ರೂಮ್​ಗೆ ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿ ಸೂರಜ್​ ಕುಡಿದು ನಮ್ಮ ಮನೆಗೆ ಬಂದಿದ್ದ. ಬಂದವನೇ ನಾನು ಕೂಗಾಡದಂತೆ ನನ್ನ ಬಾಯಿಗೆ ಬಟ್ಟೆ ತುರುಕಿದ, ನಂತರ ನನ್ನ ಹಾಗೂ ಆತನ ಬಟ್ಟೆ ಬಿಚ್ಚಿದ. ಬಳಿಕ ಅತ್ಯಾಚಾರ ಎಸಗಿ, ಬಟ್ಟೆ ಹಾಕಿಕೊಂಡು ಓಡಿಹೋದ. ಅಷ್ಟರಲ್ಲಿ ಬಂದ ನನ್ನ ಅಮ್ಮನಿಗೆ ವಿಷಯ ತಿಳಿಸಿದೆ, ಆಮೇಲೆ ನಾವು ಪೊಲೀಸ್​ ಠಾಣೆಗೆ ಬಂದೆವು, ದೂರು ನೀಡಿದೆವು ಎಂಬುದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಳು.
ಇದನ್ನೂ ಓದಿ:ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ
ಇದು ಬಲವಂತವಾಗಿದ್ದರೆ ಇಬ್ಬರ ಮಧ್ಯೆ ಪ್ರತಿರೋಧ ವ್ಯಕ್ತವಾಗಬೇಕಿತ್ತು. ಹಾಗಾಗಿದ್ದರೆ ಅಲ್ಲಿ ಕೈಕೈ ಮಿಲಾಯಿಸಿದ ಘಟನೆಗಳು ನಡೆಯುತ್ತಿದ್ದವು. ವೈದ್ಯಕೀಯ ಪರೀಕ್ಷೆಯ ವರದಿಯಲ್ಲೂ ವಿರೋಧ ವ್ಯಕ್ತಪಡಿಸಿದ ಅಥವಾ ಗಾಯಗಳಾಗಿರುವ ಕುರಿತ ಉಲ್ಲೇಖವಿಲ್ಲ. ಹೀಗಾಗಿ ಇದು ಒಪ್ಪಿತ ಕ್ರಿಯೆ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ ತನ್ನ ತಾಯಿ ಬರದಿದ್ದರೆ ನಾನು ಈ ಬಗ್ಗೆ ದೂರು ನೀಡಿರುತ್ತಿರಲಿಲ್ಲ ಎಂದೂ ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ ಎಂಬುದಾಗಿ ತೀರ್ಪಿನಲ್ಲಿ ವಿವರಿಸಲಾಗಿದೆ. ಪರಿಣಾಮ ಟ್ರಯಲ್​ ಕೋರ್ಟ್ ನೀಡಿದ್ದ ಹತ್ತು ವರ್ಷಗಳ ಸಜೆಯಿಂದ ಆರೋಪಿ ಪಾರಾಗಿದ್ದು, ಆರೋಪದಿಂದ ಖುಲಾಸೆಗೊಂಡಿದ್ದಾನೆ. (ಏಜೆನ್ಸೀಸ್​)
ಬಟ್ಟೆ ಬಿಚ್ಚದೇ ಮುಟ್ಟಿದರೆ ಲೈಂಗಿಕ ದೌರ್ಜನ್ಯವಲ್ಲ ಎಂದಿದ್ದ ಹೈಕೋರ್ಟ್‌- ವಿವಾದದ ಬೆನ್ನಲ್ಲೇ ತಡೆ ನೀಡಿದ ಸುಪ್ರೀಂ

ಮೆನೋಪಾಸ್‌ ನಂತರ ಪತ್ನಿಗೆ ಲೈಂಗಿಕಾಸಕ್ತಿಯೇ ಇಲ್ಲ- ನನಗೆ ದಿಕ್ಕೇ ತೋಚದಾಗಿದೆ; ಇದಕ್ಕೆ ಪರಿಹಾರವಿಲ್ಲವೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
