ಮುಂಬೈ:ಗ್ಯಾಂಗ್​ರೇಪ್​ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಬರುವಾಗ ಉತ್ತರ ಪ್ರದೇಶ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರು ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಬಟ್ಟೆಯನ್ನು ಹಿಡಿದು ಎಳೆದಾಡಿದ ಪೊಲೀಸ್​ ವಿರುದ್ಧ ಬಿಜೆಪಿ ನಾಯಕಿಯೊಬ್ಬರು ಹರಿಹಾಯ್ದಿದ್ದಾರೆ.
ಮಹಿಳಾ ರಾಜಕಾರಣಿಯ ಬಟ್ಟೆ ಮೇಲೆ ಕೈ ಹಾಕಲು ಆ ಪೊಲೀಸ್​ಗೆ ಎಷ್ಟು ಧೈರ್ಯವಿರಬೇಕು? ಪೊಲೀಸರು ಯಾವಾಗಲೂ ತಮ್ಮ ಮಿತಿಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕೆಂದು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘ್​ ಅವರು ಆಕ್ರೋಶಯುಕ್ತ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಬಟ್ಟೆ ಹಿಡಿದ ಪೊಲೀಸ್​ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಆಗ್ರಹಿಸಿದ್ದಾರೆ.
पुरुष पुलिस की जुर्रत कैसे हुई कि वो एक महिला नेता के वस्त्रों पर हाथ डाल सके!समर्थन मे अगर महीलाए आगे आ रही है पुलीस कही की भी हो उन्हे अपनी मर्यादा का ध्यान रखना ही चाहीएभारतीय संस्कृती मे विश्वास रखनेवाले मुख्यमंत्री@myogiadityanathजी ऐसे पुलीसवालोपर सख्त कारवाई करे@dgpuppic.twitter.com/RfbXiIIXcI
— Chitra Kishor Wagh (@ChitraKWagh)October 4, 2020

ಇದನ್ನೂ ಓದಿ:ಇದೆಂಥಾ ದುರ್ವಿಧಿ: ಇತ್ತ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ, ಅತ್ತ ಶವವಾಗಿ ಮನೆಗೆ ಮರಳಿದ ಪತಿ..!
ಇದೀಗ ಚಿತ್ರಾ ವಾಘ್​ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಬೆಂಬಲ ನೀಡಿದ್ದು, ಕಳೆದ ವರ್ಷ ಕಾಂಗ್ರೆಸ್​ನಿಂದ ಬಿಜೆಪಿಗೆ ಹೋದರೂ ತಮ್ಮ ಸಂಸ್ಕಾರವನ್ನು ಇನ್ನು ಮರೆತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಗಲಾಟೆಯ ನಡುವೆಯೂ ಪ್ರಿಯಾಂಕಾ ಗಾಂಧಿ ಎರಡನೇ ಬಾರಿಯ ಪ್ರಯತ್ನದಲ್ಲಿ ತಮ್ಮ ಸಹೋದರ ರಾಹುಲ್​ ಗಾಂಧಿಯೊಂದಿಗೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.(ಏಜೆನ್ಸೀಸ್​)
ಹಾಥರಸ್​ ಪ್ರಕರಣ ರೇಪ್​ ಅಲ್ಲವೇ ಅಲ್ಲ: ಕೆಲ ದಾಖಲೆ ಮುಂದಿಟ್ಟು ಬಿಜೆಪಿ ಮುಖಂಡನ ವಾದ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
