ನವದೆಹಲಿ:ಮನುಷ್ಯರು ಸೇರಿದಂತೆ ಈ ಭೂಮಂಡಲದ ಪ್ರತಿಯೊಂದು ಜೀವಿಗಳಿಗೆ ತನ್ನ ಶಕ್ತಿಯನ್ನು ಮರು ಸ್ಥಾಪಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ನಿದ್ರೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ. ಬಹುತೇಕ ಪ್ರಾಣಿಗಳು ಕಣ್ಣು ಮುಚ್ಚಿ ನಿದ್ರಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಅನೇಕರ ಪ್ರಶ್ನೆ ಏನೆಂದರೆ, ಮೀನುಗಳು ನಿದ್ರಿಸುತ್ತವೆಯೇ? ಎಂಬುದು. ಅದಕ್ಕೆ ಉತ್ತರ ಹೌದು. ಮೀನುಗಳು ನೀರಿನಲ್ಲಿ ಹೇಗೆ ಮಲಗುತ್ತವೆ ಎಂಬುದನ್ನು ನಾವೀಗ ತಿಳಿಯೋಣ.
ಅಂದಹಾಗೆ ಮೀನುಗಳು ಭೂಮಿಯ ಮೇಲಿನ ಪ್ರಾಣಿಗಳಂತೆಯೇ ಮಲಗುವುದಿಲ್ಲ. ಬದಲಾಗಿ ತಮ್ಮ ದೈಹಿಕ ಚಟುವಟಿಕೆಯನ್ನು ಕಡಿಮೆ ಮಾಡುವ ಮೂಲಕ ಒಮ್ಮೆ ವಿಶ್ರಾಂತಿ ಪಡೆಯುತ್ತವೆ. ಇದು ಚಲನೆಯನ್ನು ಕಡಿಮೆ ಮಾಡುವುದು, ಚಯಾಪಚಯವನ್ನು ಕಡಿಮೆ ಮಾಡುವುದು ಮತ್ತು ನಿಧಾನವಾಗಿ ಉಸಿರಾಡುವುದನ್ನು ಒಳಗೊಂಡಿರುತ್ತದೆ.
ಕೆಲವು ಮೀನುಗಳು ನಿದ್ರೆ ಮಾಡಲು ನೀರಿನಲ್ಲಿ ತೇಲುತ್ತವೆ. ಇನ್ನು ಕೆಲವು ಮೀನುಗಳು ಪಕ್ಷಿಗಳಂತೆ ತಮಗೆ ಮೀಸಲಾದ ಗೂಡುಗಳನ್ನು ಹೊಂದಿರುತ್ತವೆ. ಇದಲ್ಲದೆ, ಕೆಲವು ಮೀನುಗಳು ಹವಳಗಳು, ಗುಹೆಗಳು, ಬಿರುಕುಗಳು, ಸಸ್ಯಗಳು ಮತ್ತು ಪರಭಕ್ಷಕಗಳಿಂದ ತಮ್ಮನ್ನು ಮರೆಮಾಡುವಂತಹ ಮಣ್ಣಿ ಗುಡ್ಡೆಗಳಂತಹ ಸುರಕ್ಷಿತ ಸ್ಥಳಗಳನ್ನು ಹುಡುಕುತ್ತವೆ.
ಮೀನುಗಳು ಮಲಗಿರುವಾಗಲೂ ಕೆಲ ಮೆದುಳಿನ ಚಟುವಟಿಕೆಯನ್ನು ಮಾಡುತ್ತಿರುತ್ತವೆ. ಪರಭಕ್ಷಕಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಈ ಕ್ರಮವನ್ನು ಅನುಸರಿಸುತ್ತವೆ. ಭೂಮಿಯಲ್ಲಿ ವಾಸಿಸುವ ಮತ್ತು ಮಲಗುವ ಸಮಯದಲ್ಲಿ ಕಣ್ಣುರೆಪ್ಪೆಗಳನ್ನು ಮುಚ್ಚುವ ಸಸ್ತನಿಗಳಂತೆ, ಮೀನುಗಳಿಗೆ ಕಣ್ಣುರೆಪ್ಪೆಗಳಿಲ್ಲ. ಇದರ ಪರಿಣಾಮವಾಗಿ ಮೀನುಗಳು ತಮ್ಮ ಕಣ್ಣುಗಳನ್ನು ತೆರೆದುಕೊಂಡೆ ಮಲಗುತ್ತವೆ.
ಭೂಮಿಯಲ್ಲಿರುವ ಪ್ರಾಣಿಗಳು ಮಲಗುವಾಗ ನಿಶ್ಚಲವಾಗಿರುತ್ತವೆ. ಆದರೆ, ಸಾಗರದಾಳದಲ್ಲಿ ಶಾರ್ಕ್‌ಗಳಂತಹ ಕೆಲವು ಮೀನುಗಳು ತಮ್ಮ ಕಿವಿರುಗಳ ಮೂಲಕ ಗಾಳಿಯಾಡಲು ಅಂದರೆ ಉಸಿರಾಡಲು ನಿದ್ರೆಯ ಸಮಯದಲ್ಲಿಯೂ ಚಲಿಸುತ್ತಲೇ ಇರಬೇಕು.
ಇನ್ನು ಮೀನುಗಳ ಮಲಗುವ ಸಮಯದ ಬಗ್ಗೆ ತಿಳಿಯುವುದಾದರೆ, ಹೆಚ್ಚಿನ ಮೀನುಗಳು ಹಗಲಿನಲ್ಲಿ ಎಚ್ಚರವಾಗಿರುತ್ತವೆ ಮತ್ತು ರಾತ್ರಿಯಲ್ಲಿ ಮಲಗುತ್ತವೆ. ಕ್ಯಾಟ್‌ಫಿಶ್, ನೈಫ್‌ಫಿಶ್ ಮತ್ತು ಲೋಚ್‌ಗಳಂತಹ ಇತರ ಕೆಲವು ಮೀನುಗಳು ರಾತ್ರಿಯ ಮೀನುಗಳಾಗಿವೆ. ಅಂದರೆ, ರಾತ್ರಿಯ ವೇಳೆ ಎಚ್ಚರದಿಂದ ಇರುತ್ತವೆ.
ಕೆಲವು ಸಂದರ್ಭಗಳಲ್ಲಿ ಮೀನುಗಳು ನಿದ್ರೆಯನ್ನೇ ಮಾಡುವುದಿಲ್ಲ. ತಮ್ಮ ಮರಿಗಳನ್ನು ನೋಡಿಕೊಳ್ಳುತ್ತಿರುವಾಗ, ವಲಸೆ ಹೋಗುತ್ತಿರುವಾಗ ನಿದ್ರಿಸುವುದಿಲ್ಲ. ನೀಲಿ ಮೀನು, ಅಟ್ಲಾಂಟಿಕ್ ಮ್ಯಾಕೆರೆಲ್, ಟ್ಯೂನ ಮತ್ತು ಬೊನಿಟೊದಂತಹ ಕೆಲವು ಜಾತಿಯ ಮೀನುಗಳಲ್ಲಿ ನಿದ್ರೆಯ ಕೊರತೆಯನ್ನು ಗುರುತಿಸಲಾಗಿದೆ.(ಏಜೆನ್ಸೀಸ್​)
ಈ ರೀತಿ ಆಡಿದ್ರೆ ಮುಂದಿನ ಐಪಿಎಲ್​ಗೆ ಯಾರು ಖರೀದಿಸಲ್ಲ! ಸ್ಟಾರ್​ ಕ್ರಿಕೆಟಿಗನ ಬಗ್ಗೆ ವೀರೂ ಶಾಕಿಂಗ್​ ಹೇಳಿಕೆ

ಈ ಒಬ್ಬ ಆಟಗಾರನಿಂದ ಆರ್​ಸಿಬಿಯ ಅದೃಷ್ಟವೇ ಬದಲಾಯ್ತು! ಸತತ ಗೆಲುವಿನ ಹಿಂದಿರುವ ಅದೃಷ್ಟವಂತನ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eight =
Remember me
