ಈಗ ಜಗತ್ತಿನಾದ್ಯಂತ ಒಂದೇ ಮಾತು..ಒಂದೇ ಆತಂಕ. ಅದು ಡೆಡ್ಲಿ ಕರೊನಾ ವೈರಸ್​ ಬಗ್ಗೆ.
ಅದೆಷ್ಟೋ ದೇಶಗಳಲ್ಲಿ ಜನರನ್ನು ಬಲಿಪಡೆಯುತ್ತಿರುವ ಕರೊನಾ ವೈರಸ್​​​ಗೆ ನಿಖರ ಔಷಧಿಯೂ ಸಿದ್ಧವಾಗಿಲ್ಲ. ಲಸಿಕೆಯೂ ಇಲ್ಲ. ಮಾರಣಾಂತಿಕ ಕರೊನಾ ನಿಯಂತ್ರಣಕ್ಕೆ ಲಸಿಕೆ ಯಾವಾಗ ತಯಾರಾಗುತ್ತದೆ ಎಂಬುದು ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರ ಮನಸಲ್ಲಿರುವ ದೊಡ್ಡ ಪ್ರಶ್ನೆ. ಒಂದು ನಿಖರ ಮೆಡಿಸಿನ್​ ಮತ್ತು ಲಸಿಕೆಗಾಗಿ ಭಾರತ ಸೇರಿ ಇಡೀ ಜಗತ್ತು ಕಾಯುತ್ತಿದೆ.
ಸೆಪ್ಟೆಂಬರ್​​ ಅಷ್ಟರಲ್ಲಿ ಕರೊನಾ ವೈರಸ್​ಗೆ ಲಸಿಕೆ ಸಿದ್ಧವಾಗುತ್ತದೆ ಎಂದು ಈಗಾಗಲೇ ವರದಿಯಾಗಿದೆ. ಆದರೆ ಭಾರತ ಮೂಲದ ಅಮೇರಿಕದ ಜೀವಶಾಸ್ತ್ರಜ್ಞ, ವೈದ್ಯ, ಕ್ಯಾನ್ಸರ್​ ತಜ್ಞ, ಲೇಖಕ ಡಾ. ಸಿದ್ಧಾರ್ಥ ಮುಖರ್ಜಿ ಬೇರೆಯದೇ ಲೆಕ್ಕಾಚಾರ ಹೇಳಿದ್ದಾರೆ.ಕರೊನಾ ವಿರುದ್ಧ ಲಸಿಕೆ ತಯಾರಾಗಲು ಇನ್ನೂ 18-20ತಿಂಗಳು ಬೇಕಾಗಬಹುದು ಎಂದಿದ್ದಾರೆ. ಲಸಿಕೆ ತಯಾರಿಕಾ ಕಾರ್ಯದ ವೇಗವನ್ನು ಹೆಚ್ಚಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಸಿದ್ಧಗೊಳಿಸುವ ಎಲ್ಲ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಆದರೂ 20 ತಿಂಗಳು ಕಾಯುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಹಾಗೇ ಕೊವಿಡ್​-19ಕ್ಕೆ ಲಸಿಕೆ ಅಭಿವೃದ್ಧಿಪಡಿಸಲು ಯಾಕೆ ಅಷ್ಟು ಸಮಯ ಬೇಕು ಎಂಬುದನ್ನೂ ಡಾ. ಸಿದ್ದಾರ್ಥ್​ ತಿಳಿಸಿದ್ದಾರೆ.ಯಾವುದೇ ವೈರಸ್​ ವಿರುದ್ಧ ಹೊಸ ಔಷಧಿ, ಲಸಿಕೆಗಳನ್ನು ಅಭಿವೃದ್ಧಿಪಡಿಸುವಾಗ ಒಂದೊಂದೇ ಹಂತವಾಗಿ ಮಾಡಬೇಕು.ಈಗ ಇರುವ ಔಷಧಿಯನ್ನೇ ಕರೊನಾಕ್ಕೆ ಕೊಡಲಾಗುತ್ತಿದೆ. ಅವುಗಳು ಮನುಷ್ಯ ದೇಹಕ್ಕೆ ಎಷ್ಟು ಅಗತ್ಯ, ಯಾವ ಪ್ರಮಾಣದಲ್ಲಿ ಬಳಸಬೇಕು ಮತ್ತು ಎಷ್ಟರ ಮಟ್ಟಿಗೆ ಸುರಕ್ಷ ಆಗಿವೆ ಎಂಬುದು ನಮಗೆ ಗೊತ್ತಿದೆ. ಆದರೆ ವೈರಸ್​ ವಿರುದ್ಧ ಹೊಸ ಅಣುವಿನಿಂದ ನಿಖರವಾದ ಹೊಸ ಲಸಿಕೆ, ಔಷಧಿ ಅಭಿವೃದ್ಧಿ ಪಡಿಸುವಾಗ ಸುರಕ್ಷತಾ ಮಟ್ಟವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಸಮಯ ಹಿಡಿಯುತ್ತದೆ ಎಂದು ಸಿದ್ಧಾರ್ಥ್​ ತಿಳಿಸಿದ್ದಾರೆ.
ಅದರಲ್ಲೂ ಲಸಿಕೆ ಎಂದರೆ ಕರೊನಾ ವೈರಸ್​ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನೀಡುವುದು. ಅಂದರೆ ಆರೋಗ್ಯವಂತ ಮನುಷ್ಯನ ದೇಹಕ್ಕೆ ಸೇರಿಸುವಂಥದ್ದು. ಹಾಗಾಗಿ ಅದರ ಸುರಕ್ಷತಾ ಮಟ್ಟದ ಪರಿಶೀಲನೆ ಅತ್ಯಂತ ಸೂಕ್ಷ್ಮವಾಗಿ ಮತ್ತು ಸರಿಯಾಗಿ ಇರಬೇಕು. ಸೈಡ್​ ಎಫೆಕ್ಟ್​ಗಳಿಗೆಲ್ಲ ದಾರಿ ಮಾಡಿಕೊಡುವಂತಿರಲೇಬಾರದು. ಹಾಗಾಗಿ ಲಸಿಕೆ ತಯಾರಿಕೆಗೆ ಏನಿಲ್ಲವೆಂದರೂ 20 ತಿಂಗಳು ಬೇಕು. ನಾವದನ್ನು ಕಂಡು ಹಿಡಿಯಲು ಅವಿರತವಾಗಿ ಶ್ರಮಿಸುತ್ತಿದ್ದೇವೆ ಎಂದು ಸಿದ್ಧಾರ್ಥ್​ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − thirteen =
Remember me
