ನವದೆಹಲಿ:ಭಾರತದ ಮೊದಲ ಕೋವಿಡ್​-19 ರೋನಿರೋಧಕ ಚುಚ್ಚುಮದ್ದು ಕೊವಾಕ್ಸಿನ್​ ಅನ್ನು ಭಾರತ್​ ಬಯೋಟೆಕ್​ ಇಂಡಿಯಾ (ಬಿಬಿಐಎಲ್​) ಸಿದ್ಧಪಡಿಸಿದೆ. ಮನುಷ್ಯರ ಮೇಲೆ ಇದರ ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಪಡೆದುಕೊಳ್ಳಲಾಗಿದೆ. ಈ ಪರೀಕ್ಷೆಗಳು ಜುಲೈನಿಂದ ಆರಂಭವಾಗಲಿದೆ. ಹಾಗಾದರೆ ಭಾರತದ ಮೊದಲ ಕೋವಿಡ್​ ಚುಚ್ಚುಮದ್ದು ತಯಾರಾಗಿದ್ದು ಹೇಗೆ?
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಾಯದೊಂದಿಗೆ ಬಿಬಿಐಎಲ್​ ಕೊವಾಕ್ಸಿನ್​ ರೋಗನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಕೋವಿಡ್​ ರೋಗ ಲಕ್ಷಣವಿಲ್ಲದ ರೋಗಿಯೊಬ್ಬರ ದೇಹದಲ್ಲಿದ್ದ ಕರೊನಾ ವೈರಾಣುವಿನಿಂದ ಸ್ಟ್ರೈನ್​ ಒಂದನ್ನು ಪ್ರತ್ಯೇಕಿಸಿ ಮೇ ಮೊದಲ ವಾರದಲ್ಲಿ ಬಿಬಿಐಎಲ್​ಗೆ ನೀಡಿತ್ತು. ಬಿಬಿಐಎಲ್​ ಇದನ್ನು ಬಳಸಿಕೊಂಡು ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದು ಅಂದರೆ, ಸತ್ತ ವೈರಾಣುವನ್ನು ಬಳಸಿಕೊಂಡು ರೋಗನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಿತು.
ಇದನ್ನೂ ಓದಿ:ಟಿಬೆಟ್​ನಂತೆ ಹಾಂಗ್​ಕಾಂಗನ್ನು ಹೊಸಕಿದ ಚೀನಾ; ಭದ್ರತಾ ಕಾಯ್ದೆ ಅಂಗೀಕಾರ; ಪ್ರಜಾಪ್ರಭುತ್ವ ಹೋರಾಟಕ್ಕೆ ಭಾರಿ ಹಿನ್ನಡೆ
ಈ ಚುಚ್ಚುಮದ್ದನ್ನು ಮನುಷ್ಯರಿಗೆ ಕೊಟ್ಟಾಗ, ಅವರಿಗೆ ಸೋಂಕು ಉಂಟಾಗುವುದಾಗಲಿ ಅಥವಾ ಕರೊನಾ ವೈರಾಣು ದ್ವಿಗುಣಗೊಳ್ಳಲಾಗಲಿ ಇದು ಅವಕಾಶ ಕೊಡುವುದಿಲ್ಲ. ಹಾಗಾಗಿ ಇದನ್ನು ಸಾಯಿಸಿದ ವೈರಾಣು ಎಂದು ಪರಿಗಣಿಸಲಾಗುತ್ತದೆ. ಮತ್ತು ಸೋಂಕಿತ ವ್ಯಕ್ತಿಯಲ್ಲಿ ವೈರಾಣುವಿನ ವಿರುದ್ಧ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಬಿಬಿಐಎಲ್​ ವಿವರಿಸಿದೆ. ಈ ರೀತಿಯ ಇನ್​ಆ್ಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದುಗಳು ಬಳಕೆಗೆ ತುಂಬಾ ಸುರಕ್ಷಿವಾಗಿರುತ್ತದೆ ಎಂದು ಹೇಳಿದೆ.
ಚುಚ್ಚುಮದ್ದ ಸಿದ್ಧವಾದ ಬಳಿಕ ಪ್ರೀಕ್ಲಿನಿಕಲ್​ ಪರೀಕ್ಷೆಗೆ ಒಳಪಡಿಸಲಾಯಿತು. ಅಂದರೆ ಗಿನಿಯಾ ಪಿಗ್​ ಮತ್ತು ಇಲಿಗಳ ಮೇಲೆ ಇದನ್ನು ಪ್ರಯೋಗಿಸಿ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಯಿತು. ಆನಂತರದಲ್ಲಿ ಅದು ಮನುಷ್ಯರ ಮೇಲೆ ಪ್ರಯೋಗಿಸಲು ಅಗತ್ಯ ಅನುಮತಿಗಳನ್ನು ಪಡೆದುಕೊಂಡು, ಜುಲೈನಿಂದ ಆ ಕಾರ್ಯವನ್ನು ಆರಂಭಿಸಲಿದೆ.
‘ಕರೊನಿಲ್’​ನಿಂದ ಕರೊನಾ ಸೋಂಕು ನಿವಾರಣೆಯಾಗುತ್ತದೆ ಎಂದು ನಾವು ಹೇಳೇ ಇಲ್ಲ; ಪತಂಜಲಿ ಯೂ ಟರ್ನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 9 =
Remember me
