ನವದೆಹಲಿ:ಚಂದ್ರಯಾನ-3 ನಿನ್ನೆ ಭರ್ಜರಿ ಯಶಸ್ಸು ಗಳಿಸುತ್ತಿದ್ದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕುರಿತು ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಇನ್ನೊಂದೆಡೆ ಈ ಕುರಿತ ಕ್ರೆಡಿಟ್​ ವಿಚಾರವಾಗಿ ಕಾಂಗ್ರೆಸ್​-ಬಿಜೆಪಿ ಪರ-ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದೂ ಆಗಿದೆ.
ಅಸಲಿಗೆ ಇಸ್ರೋ ವಿಜ್ಞಾನಿ ವಿಕ್ರಂ ಸಾರಾಭಾಯ್​ ಅವರ ಕನಸಿನ ಕೂಸು. 1962ರಲ್ಲೇ ಇಂಥದ್ದೊಂದು ಕಲ್ಪನೆ ಮೂಡಿದ್ದು, ಅದು ಇಂಡಿಯನ್​ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್​ ರಿಸರ್ಚ್​ (INCOSPAR) ಎಂಬ ಹೆಸರಿನಲ್ಲಿ ಆರಂಭವಾಯಿತು. ಬಳಿಕ 1969ರ ಆಗಸ್ಟ್​ 15ರಲ್ಲಿ ಇಸ್ರೋ ಎಂದಾಯ್ತು, ನಂತರ 1972ರಲ್ಲಿ ಅದು ಬಾಹ್ಯಾಕಾಶ ಇಲಾಖೆ ವ್ಯಾಪ್ತಿಗೆ ಒಳಪಟ್ಟಿತು. ಸಂಸ್ಥಾಪಕ ಅಧ್ಯಕ್ಷರಾಗಿ ವಿಕ್ರಂ ಸಾರಾಭಾಯ್​ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದರು. ಆದರೆ ಅವರು ತಮ್ಮ 52ನೇ ವಯಸ್ಸಿನಲ್ಲಿ ಅಂದರೆ 1971ರ ಡಿ. 30ರಂದು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.
ಇಸ್ರೋದ ಮತ್ತೊಬ್ಬ ವಿಜ್ಞಾನಿ ಸತೀಶ್ ಧವನ್ ಅವರು ಮೂಲತಃ ಶ್ರೀನಗರದವರಾಗಿದ್ದು, ಲಾಹೋರ್​ನಲ್ಲಿ ಬೆಳೆದಿದ್ದರು. 1951ರಲ್ಲಿ ಭಾರತಕ್ಕೆ ಮರಳಿದ್ದ ಇವರು ನಂತರ ಬೆಂಗಳೂರಿಗೆ ಬಂದು ಐಐಎಸ್​ಸಿಯಲ್ಲಿ ಸೀನಿಯರ್ ಸೈಂಟಿಫಿಕ್ ಆಫೀಸರ್ ಆಗಿ ಸೇರಿಕೊಳ್ಳುತ್ತಾರೆ. ಅದಾಗಿ ಹತ್ತು ವರ್ಷಗಳ ಬಳಿಕ ಅಂದರೆ ಅವರ 42ನೇ ವಯಸ್ಸಿನಲ್ಲಿ ಐಐಎಸ್​ಸಿ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡು, ಐಐಎಸ್​​ಸಿಯ ಅತ್ಯಂತ ಕಿರಿಯ ನಿರ್ದೇಶಕ ಎಂಬ ಖ್ಯಾತಿಗೂ ಪಾತ್ರರಾದರು. ಹದಿನೇಳು ವರ್ಷಗಳಿಗೂ ಅಧಿಕ ಕಾಲ ಅವರು ಅದೇ ಜವಾಬ್ದಾರಿಯಲ್ಲಿದ್ದರು.
ಇದನ್ನೂ ಓದಿ:ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ವಿಕ್ರಂ ಸಾರಾಭಾಯ್​ ಅವರ ನಿಧನದ ಬಳಿಕ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಇಸ್ರೋ ಅಧ್ಯಕ್ಷರಾಗುವಂತೆ ಸತೀಶ್ ಧವನ್ ಅವರಿಗೆ ಕೇಳಿಕೊಳ್ಳುತ್ತಾರೆ. ಆಗ ಅವರು ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲಿಯೇ ಇರಬೇಕು ಹಾಗೂ ಐಐಎಸ್​​ಸಿ ನಿರ್ದೇಶಕನಾಗಿ ನನ್ನನ್ನು ಮುಂದುವರಿಸಬೇಕು ಎಂಬ ಎರಡು ಷರತ್ತುಗಳನ್ನು ಹಾಕುತ್ತಾರೆ. ಅದಕ್ಕೆ ಇಂದಿರಾ ಗಾಂಧಿ ಒಪ್ಪುತ್ತಾರೆ, ಆ ಮೂಲಕ ಬೆಂಗಳೂರಿನಲ್ಲಿ ಇಸ್ರೋ ಪ್ರಧಾನ ಕಚೇರಿ ಆಯಿತು ಎನ್ನಲಾಗಿದೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಅದಾಗಲೇ ಹಿಂದೂಸ್ತಾನ್ ಏರ್​​ಕ್ರಾಫ್ಟ್ (ಈಗ ಅದು ಹಿಂದೂಸ್ತಾನ್ ಏರೋನಾಟಿಕ್ಸ್​) ಮತ್ತು ಐಐಎಸ್​​ಸಿ ಬೆಂಗಳೂರಿನಲ್ಲಿ ಇದ್ದಿದ್ದರಿಂದ ಇಸ್ರೋ ಪ್ರಧಾನ ಕಚೇರಿಗೆ ಬೆಂಗಳೂರು ಸೂಕ್ತ ಎಂದು ಸತೀಶ್ ಧವನ್ ಬಲವಾಗಿ ಪ್ರತಿಪಾದಿಸಿದ್ದರು. ನಂತರ 1981ರಲ್ಲಿ ಐಐಎಸ್​ಸಿಯಿಂದ, 1984ರಲ್ಲಿ ಇಸ್ರೋದಿಂದ ಅವರು ನಿವೃತ್ತರಾಗುತ್ತಾರೆ. ಇಂಡಿಯನ್ ಸ್ಪೇಸ್ ಕಮಿಷನ್ ಅಧ್ಯಕ್ಷರಾಗಿ ಮುಂದುವರಿದ ಅವರು 2002ರಲ್ಲಿ ನಿಧನರಾದರು. –ಏಜೆನ್ಸೀಸ್
ಚಂದ್ರಯಾನ-3: ಲ್ಯಾಂಡಿಂಗ್​ ಮುಗಿದರೂ ನಿಂತಿಲ್ಲ ಪ್ರಕಾಶ್ ರಾಜ್ ಟ್ರೋಲೂ.. ಪೋಸ್ಟೂ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
