ಹೈದರಾಬಾದ್​:ತೆಲಂಗಾಣದ ಕೇಸರ ತಹಸೀಲ್ದಾರ್​ ಇ.ಬಿ. ನಾಗರಾಜು ಭ್ರಷ್ಟಾಚಾರ ಪ್ರಕರಣ ತನಿಖೆ ನಡೆಸಿದ ಜಾಗೃತ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಹತ್ವದ ವರದಿಯನ್ನು ಸಲ್ಲಿಸಿದ್ದು, ತಹಸೀಲ್ದಾರ್ ಭಾರಿ ಕಂಟಕ ಎದುರಾಗಲಿದೆ. ​
ಅಧಿಕಾರಿಗಳು ಸಲ್ಲಿಸಿರುವ ವರದಿಯಲ್ಲಿ ಆರೋಪಿ ನಾಗರಾಜು, 48 ಕೋಟಿ ರೂ. ಮೌಲ್ಯದ ಜಮೀನನ್ನು ವರ್ಗಾವಣೆ ಮಾಡಲು ನಕಲಿ ದಾಖಲೆಗಳಿಗೆ ಅನುಮೋದನೆ ನೀಡಿರುವುದು ಬಹಿರಂಗವಾಗಿದೆ. ಇದರ ಹೊರತಾಗಿ 1.10 ಕೋಟಿ ರೂ. ಲಂಚ ಸ್ವೀಕಾರ ಮಾಡಿರುವುದು ಸಹ ಸಾಬೀತಾಗಿದೆ.
ಆಗಸ್ಟ್​ 14ರಂದು ಮೆಡ್ಚಲ್​-ಮಲ್ಕಜ್​ಗಿರಿ ಜಿಲ್ಲೆಯ ಕೇಸರ ಮಂಡಲದಲ್ಲಿ ತಹಸೀಲ್ದಾರ್ ನಾಗರಾಜು, ರಿಯಲ್​ ಎಸ್ಟೇಟ್​ ಡೀಲರ್​ಗಳ ಬಳಿ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರು. ಅಲ್ಲದೆ, ನಾಗರಾಜು ಕಾರಿನಲ್ಲಿ ಲೆಕ್ಕವೇ ಇಲ್ಲ 8 ಲಕ್ಷ ರೂ. ಹಣವು ಸಹ ಪತ್ತೆಯಾಗಿತ್ತು. ಸಾಕಷ್ಟು ತೀವ್ರ ಶೋಧ ನಡೆಸಿದ್ದ ಅಧಿಕಾರಿಗಳು 28 ಲಕ್ಷ ರೂ, ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ನಾಗರಾಜುರನ್ನು ವಶಕ್ಕೆ ಪಡೆದಿರುವ ಅಕ್ರಮ ಸಂಪಾದನೆ ಪ್ರಕರಣ ದಾಖಲಿಸಿದ್ದರು. ಇದೀಗ ನಾಗರಾಜು ಜೈಲಿನಲ್ಲಿ ಬಂಧಿಯಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಜಗತ್ತಿನ 6ನೇ ಅತಿಶ್ರೀಮಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಇರೋದು ಒಂದು ಕಾರು ಮಾತ್ರ!
ಪ್ರಕರಣದ ತನಿಖೆಗೆ ಇಳಿದ ಜಾಗೃತ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಾಗರಾಜು ಅವರು ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದ್ದಾರೆ. ಡಿಜಿಟಲ್​ ಸಹಿ ಹಾಕಿ ನಾಲ್ವರಿಗೆ ಪಾಸ್​ಬುಕ್​ ವಿತರಣೆ ಮಾಡಿರುವುದು ಸಹ ಬಹಿರಂಗವಾಗಿದೆ. ಕೇಸರ ಮಂಡಲದ ದಯಾರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ 28 ಎಕರೆ ಜಮೀನನ್ನು ಕಂಡಾಡಿ ಕುಟುಂಬದ ನಾಲ್ವರಿಗೆ ವರ್ಗಾವಣೆ ಮಾಡಿಕೊಡಲು ನಕಲಿ ದಾಖಲೆಗಳಿಗೆ ಅನುಮೋದನೆ ನೀಡಿದ್ದಾರೆ.
ಇನ್ನು ಕಂಡಾಡಿ ಕುಟುಂಬಕ್ಕೆ ಸ್ವಂತ ಜಮೀನೇ ಇಲ್ಲ. ಆದಾಗ್ಯು ತಹಸೀಲ್ದಾರ್​ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಕಂಡಾಡಿ ಕುಟುಂಬದ ಹೆಸರಿಗೆ ಮಾಡಿದ್ದಾರೆ. ಒಟ್ಟು ಜಮೀನನ್ನು ಕೇವಲ 2.68 ಕೋಟಿ ರೂ.ಗೆ ವರ್ಗಾವಣೆ ಮಾಡಿದ್ದಾರೆ. ಆದರೆ, ಅದರ ಮಾರುಕಟ್ಟೆಯ ಬೆಲೆ 48.80 ಕೋಟಿ ರೂ. ಆಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಇನ್ನು ನಾಗರಾಜು ಬ್ರಹ್ಮಾಂಡ ಭ್ರಷ್ಟಾಚಾರ ಇದೇ ಮೊದಲೇನಲ್ಲ. 2011ರಲ್ಲಿ ಶಮೀರ್​ಪೇಟ್​ ಮಂಡಲದಲ್ಲಿ ಉಪ ತಹಸೀಲ್ದಾರ್​ ಆಗಿ ನಾಗರಾಜು ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ನಾಗರಾಜು ನಿವಾಸದ ಮೇಲೆ ದಾಳಿ ನಡೆಸಿದಾಗ 1.50 ಕೋಟಿ ರೂ. ಭ್ರಷ್ಟಾಚಾರ ಬಯಲಿಗೆ ಬಂದಿತ್ತು. ಈ ವೇಳೆ ಐದು ವರ್ಷದ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು. ತನಿಖೆ ನಡೆದರೂ ಸಹ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಹೀಗಾಗಿ ಕೆಲವೇ ವರ್ಷಗಳಲ್ಲಿ ನಾಗರಾಜು ಕೆಲಸಕ್ಕೆ ಮರಳಿದ್ದರು. ಕೊನೆಗೆ 2015ರಲ್ಲಿ ತನ್ನ ವಿರುದ್ಧದ ಎಲ್ಲ ಪ್ರಕರಣಗಳು ರದ್ದಾಗಿದ್ದವು. ಇದೀಗ ಮತ್ತೊಮ್ಮೆ ಸಿಕ್ಕಿ ಹಾಕಿಕೊಂಡಿದ್ದು, ನಾಗರಾಜುಗೆ ಭಾರಿ ಕಟಂಕ ಎದುರಾಗುವ ಸಾಧ್ಯತೆ ಇದೆ.(ಏಜೆನ್ಸೀಸ್​)
ಸಣ್ಣ ಅಪಘಾತದಿಂದ ಗಾಯಗೊಂಡು ಸ್ಕ್ಯಾನ್​ ಮಾಡಿಸಲು ಆಸ್ಪತ್ರೆಗೆ ಹೋದ ಮಹಿಳೆಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
