ನವದೆಹಲಿ:ಐಪಿಎಲ್​ನಲ್ಲಿ ಆರ್​ಸಿಬಿ&ಎಲ್​ಎಸ್​ಜಿ ನಡುವಿನ ಪಂದ್ಯದ ವೇಳೆ ಜಗಳವಾಡಿದ್ದ ವಿರಾಟ್​ ಕೊಹ್ಲಿ ಮತ್ತು ನವೀನ್​ ಉಲ್​ ಹಕ್​ ಭಾರತ-ಆಫ್ಘನ್​​ ನಡುವಿನ ವಿಶ್ವಕಪ್​ ಪಂದ್ಯದಲ್ಲಿ ಮುಖಾಮುಖಿ ಆದಾಗ ಹಳೆ ದ್ವೇಷ ಮುಂದುವರಿಸುವ ನಿರೀಕ್ಷೆ ಎಲ್ಲರದಾಗಿತ್ತು. ಅದಕ್ಕೆ ತಕ್ಕಂತೆ ಪ್ರೇಕ್ಷಕರೂ ತುಪ್ಪ ಸುರಿಯಲು ಯತ್ನಿಸಿದರು. ಆದರೆ ಪಂದ್ಯದ ನಡುವೆ ಇಬ್ಬರೂ ಹಳೆ ಸಿಟ್ಟು ಮರೆತು ರಾಜಿಯಾಗಿಬಿಟ್ಟರು!
ಭಾರತದ ಚೇಸಿಂಗ್​ ವೇಳೆ ವೇಗಿ ನವೀನ್​ ಉಲ್​ ಹಕ್​ ಬೌಲಿಂಗ್​ಗೆ ಬಂದಾಗ ಪ್ರೇಕ್ಷಕರು “ಕೊಹ್ಲಿ, ಕೊಹ್ಲಿ’ ಎನ್ನುತ್ತ ಮತ್ತಷ್ಟು ಬಿಸಿ ಏರಿಸಲು ಪ್ರಯತ್ನಿಸಿದರು. ಆದರೆ ಕೊಹ್ಲಿ ಹಾಗೆ ಮಾಡಬೇಡಿ, ಎದುರಾಳಿಯನ್ನೂ ಗೌರವಿಸಿ ಎಂದು ಪ್ರೇಕ್ಷಕರಿಗೆ ಸನ್ನೆ ತೋರಿದರು. ಕೊಹ್ಲಿ ಅವರ ಈ ನಡೆ ಕ್ರಿಕೆಟ್​ ಪ್ರೇಮಿಗಳ ಹೃದಯವನ್ನು ಮಾತ್ರ ಗೆದ್ದಿದ್ದಲ್ಲ, ನವೀನ್​ ಕೋಪವನ್ನೂ ತಣ್ಣಗಾಗಿಸಿತು. ಕೊಹ್ಲಿ-ನವೀನ್​ ಇಬ್ಬರೂ ನಗುತ್ತ ಹಸ್ತಲಾವ ನೀಡಿ ಪರಸ್ಪರ ತಬ್ಬಿಕೊಂಡರು. ಪಂದ್ಯದ ನಂತರವೂ ಇಬ್ಬರ ನಡುವೆ ಸೌಹಾರ್ದ ಮಾತುಕತೆ ನಡೆಯಿತು. ಬೆನ್ನಲ್ಲೇ ಇದರ ಚಿತ್ರ-ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದವು.
Virat Kohli and Naveen Ul Haq smiling, hugging and both having fun together after the yesterday's match.
– Beautiful Moments of this World Cup…!!!pic.twitter.com/g9LWibTvXG
— Tanuj Singh (@ImTanujSingh)October 12, 2023

“ಪ್ರೇಕ್ಷಕರು ತವರಿನ ಆಟಗಾರರನ್ನು ಬೆಂಬಲಿಸುವುದು ಸಾಮಾನ್ಯ. ಅದರಂತೆ ದೆಹಲಿ ಪ್ರೇಕ್ಷಕರೂ ವರ್ತಿಸಿದರು. ಕೊಹ್ಲಿಗೆ ಅವರೊಬ್ಬ ಉತ್ತಮ ವ್ಯಕ್ತಿ, ಆಟಗಾರ. ನಾವಿಬ್ಬರು ಪರಸ್ಪರ ಶೇಕ್​ ಹ್ಯಾಂಡ್​ ಮಾಡಿದೆವು. ನಮ್ಮ ನಡುವೆ ಏನಾಯಿತೋ ಅದು ಮೈದಾನದಲ್ಲೇ ಇರಲಿದೆ. ಮೈದಾನದಿಂದ ಹೊರಗೆ ಹೋಗುವುದಿಲ್ಲ. ಜನರಷ್ಟೇ ಅದನ್ನು ದೊಡ್ಡದು ಮಾಡಿದರು. ನಾವು ಅದನ್ನು ಮುಕ್ತಾಯಗೊಳಿಸೋಣ ಎಂದು ಕೊಹ್ಲಿ ಹೇಳಿದರು. ನಾನು ಓಕೆ ಹೇಳಿದೆ’ ಎಂದು 24 ವರ್ಷದ ನವೀನ್​ ಉಲ್​ ಹಕ್​ ಪಂದ್ಯದ ಬಳಿಕ ಹೇಳಿದರು.
ಡೆಂಘೆ ಜ್ವರದಿಂದಾಗಿ ಶುಭಮಾನ್​ ಗಿಲ್​ಗೆ ತಪ್ಪಿತು ವಿಶ್ವ ನಂ. 1 ಪಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − one =
Remember me
